News Kannada
Saturday, September 23 2023
ಮಂಗಳೂರು

ಬೆಳ್ತಂಗಡಿ: ಶ್ರೀ ಕೃಷ್ಣ ಯೋಗಕ್ಷೇಮ “ರೀಚಿಂಗ್ ದಿ ಅನ್ರೀಚ್” ವೈದ್ಯಕೀಯ ಸೇವೆ ಪ್ರಾರಂಭ

Sri Krishna's Wellness "Reaching the Unreach" medical service launched
Photo Credit : By Author

ಬೆಳ್ತಂಗಡಿ: ತಲುಪಲು ಅಸಾಧ್ಯವಾದವರನ್ನು ತಲುಪುವು ಎಂಬ ಧ್ಯೇಯವನ್ನು ಇಟ್ಟುಕೊಂಡು ವೈದ್ಯಕೀಯ ಸೇವೆಯನ್ನು ಅಕ್ಷರಶಃ ಸೇವೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಡಾ .ಮುರಳೀಕೃಷ್ಣ ಇರ್ವತ್ರಾಯ.

ಕಕ್ಕಿಂಜೆಯ ಶ್ರೀಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾಗಿರುವ ಇವರು ವಿಶೇಷ ಪರಿಕಲ್ಪನೆಯೊಂದಿಗೆ ಪ್ರಾರಂಭಿಸಿದ್ದಾರೆ ಶ್ರೀ ಕೃಷ್ಣ ಯೋಗಕ್ಷೇಮ “ರೀಚಿಂಗ್ ದಿ ಅನ್ರೀಚ್”, ತಲುಪಲು ಅಸಾಧ್ಯವಾದವರನ್ನು ತಲುಪುವುದು.

ಅದೊಂದು ಕಾಲವಿತ್ತು ಅದೆಷ್ಟೋ ಬಡ ಜನರಿಗೆ, ದುರ್ಗಮ ಗುಡ್ಡ ಗಾಡು ಪ್ರದೇಶದ ಜನರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತಲುಪಲು ಅಸಾಧ್ಯವಾಗಿರುತ್ತಿತ್ತು, ಕಾರಣ ಸರಿಯಾದ ರಸ್ತೆ ಮತ್ತು ವಾಹನದ ವ್ಯವಸ್ಥೆ ಇರುತ್ತಿರಲಿಲ್ಲ, ಅದಷ್ಟೋ ರೋಗಿಗಳು ಸರಿಯಾದ ಸಮಯದಲ್ಲಿ ಪ್ರಥಮ ಚಿಕಿತ್ಸೆ ಮತ್ತು ಆಸ್ಪತ್ರೆಗೆ ತಲುಪಲು ಸಾಧ್ಯವಾಗದೆ ಪ್ರಾಣಬಿಡುತ್ತಿದ್ದುದು ಉಂಟು.

ಡಾ. ಇರ್ವತ್ರಾಯ ಇವರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದವರಾದ್ದರಿಂದ ಜನರಿಗೆ ವೈದ್ಯಕೀಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಶ್ರೀ ಕೃಷ್ಣ ಯೋಗಕ್ಷೇಮ – ನಿಮ್ಮ ಮನೆಬಾಗಿಲಿಗೆ ವೈದ್ಯಕೀಯ ಸೇವೆಯನ್ನು ಪ್ರಾರಂಬಿಸಿದ್ದು, ಕಳೆದ ಏಳು ವರ್ಷಗಳಿಂದ ವೈದ್ಯಕೀಯ ತಂಡ ಸೇವೆಯಲ್ಲಿ ನಿರತವಾಗಿದೆ, ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಅವರ ಮನೆಬಾಗಿಲಿಗೆ ವೈದ್ಯರು ಮತ್ತು ದಾದಿಯರ ತಂಡ ಹೋಗಿ ಚಿಕಿತ್ಸೆ ನೀಡುವುದು ಮತ್ತು ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಆಸ್ಪತ್ರೆಗೆ ಸಾಗಿಸುವುದು ಆಗಿದೆ. ಇಂತಹ ಸೇವೆಗೆ ಅವಕಾಶ ಒದಗಿಯೂ ಬಂದಿತ್ತು. ಅದೊಂದು ಸಂಜೆ 6 ಗಂಟೆ ಸುಮಾರಿಗೆ ಶ್ರೀಕೃಷ್ಣ ಯೋಗಕ್ಷೇಮ ತಂಡಕ್ಕೆ ಕರೆ ಬಂತು.

ಆಸ್ಪತ್ರೆಯಿಂದ 36 ಕಿ.ಮೀ. ದೂರದ ಶಿಶಿಲ ಗ್ರಾಮದದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ನೆಲೆಸಿರುವ ರೋಗಿಗೆ ಹೋಮ್ ಕೇರ್ ಸೇವೆ ನೀಡುವಂತೆ ಮನವಿ ಬಂದಿತ್ತು. ರೋಗಿಯ ಪರಿಸ್ಥಿತಿಯನ್ನು ಅರಿತು ವೈದ್ಯಕೀಯ ನಿರ್ದೇಶಕರ ಮಾರ್ಗದರ್ಶನದಂತೆ ತಡಮಾಡದೆ ಶ್ರೀ ಕೃಷ್ಣ ಯೋಗಕ್ಷೇಮ ವೈದ್ಯಕೀಯ ತಂಡವು ರಾತ್ರಿಯ ಸಮಯವನ್ನು ಲೆಕ್ಕಿಸದೆ ಸಂಪೂರ್ಣ ಸಿದ್ಧರಾಗಿ ರೋಗಿಯ ಮನೆಗೆ ಸರಿಯಾದ ಸಮಯಕ್ಕೆ ತಲುಪಿತು.

ರೋಗಿಯು ಹೈಪೊಗ್ಲೆಸಿಮಿಯಾ ಮತ್ತು ಹೈಪೊಕ್ಸೆಮಿಯಾದಲ್ಲಿ , ತೀವ್ರ ತರದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು, ವೈದ್ಯರ ಸಲಹೆಯಂತೆ IV ಫ್ಲೂಯಿಡ್, ಚುಚ್ಚುಮದ್ದುಗಳು, ನೆಬ್ಯುಲೈಸೇಶನ್, ಆಕ್ಸಿಜನ್, ಇಸಿಜಿ ಮುಂತಾದ ಚಿಕಿತ್ಸೆಯನ್ನು ಒಂದೊಂದಾಗಿ ನೀಡಲಾಯಿತು.ಬಳಿಕ ರೋಗಿಯು ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಭರವಸೆ ನೀಡಿದರು.

ರೋಗಿಯ ಮನೆಗೆ ತೆರಳಲು ಸರಿಯಾದ ರಸ್ತೆ ಇರಲಿಲ್ಲ,ಕಚ್ಚಾ ರಸ್ತೆಯಲ್ಲಿ ಸ್ವಲ್ಪ ದೂರ ಕ್ರಮಿಸಿ ಮುಂದೆ ನಮ್ಮ ತಂಡವಿದ್ದ ಅಂಬುಲೆನ್ಸ್ ಚಲಿಸಲು ಅಸಾಧ್ಯವಾಯಿತು,ಅದಾಗಲೇ ಕತ್ತಲೆ ಆವರಿಸಿತ್ತು. ಸುಮಾರು 36 ಕಿಮೀ ಪ್ರಯಾಣಿಸಿದ ನಂತರ, ವೈದ್ಯರು ಮತ್ತು ದಾದಿಯರು ರೋಗಿಯ ಮನೆಯನ್ನು ತಲುಪಲು ಸುಮಾರು 1 ಕಿ.ಮೀ. ಕತ್ತಲೆಯಲ್ಲಿ ಕಾಲುದಾರಿ ಹಿಡಿಯುವುದು ಅನಿವಾರ್ಯವಾಗಿತ್ತು.

ಗ್ರಾಮೀಣ ಪ್ರದೇಶದ ಜನರಿಗೆ ಮೂಲ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಮತ್ತು ಕೋವಿಡ್ ಸಾಂಕ್ರಾಮಿಕ ರೋಗದ ಅತ್ಯಂತ ಕಠಿಣ ಸಮಯದಲ್ಲಿ ಯೋಗಕ್ಷೇಮ ವೈದ್ಯಕೀಯ ತಂಡವು ಗ್ರಾಮೀಣ ಪ್ರದೇಶದ ಜನರಿಗೆ ವರದಾನವಾಗಿತ್ತು. ಶ್ರೀ ಕೃಷ್ಣ ಯೋಗಕ್ಷೇಮ ಯೋಜನೆಯು ಗ್ರಾಮೀಣ ಪ್ರದೇಶದ ಹಾಸಿಗೆ ಹಿಡಿದಿರುವ, ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವ, ಆಸ್ಪತ್ರೆಯ ಸೌಲಭ್ಯದಿಂದ ವಂಚಿತರಾದವರಿಗೆ ಸೇವೆಯನ್ನು ಒದಗಿಸುತ್ತಾ ಬಂದಿದೆ.
ತಂಡದ ಸೌಲಭ್ಯಗಳು,
1. ವೈದ್ಯರು
2.ನರ್ಸ್
3.ಲ್ಯಾಬ್ ತಂತ್ರಜ್ಞ
4. ಕೋ-ಆರ್ಡಿನೇಟರ್
5. ಚಾಲಕ .
ವೈದ್ಯರ ಮಾರ್ಗದರ್ಶನದಂತೆ ಡ್ರೆಸ್ಸಿಂಗ್‌, ಐವಿ ಪ್ಲೂಯಿಡ್ ನೀಡುವುದು, ಮಧುಮೇಹ ತಪಾಸಣೆ, ಬಿ.ಪಿ. ತಪಾಸಣೆ, ಔಷಧಗಳು,ಅಗತ್ಯವಿರುವ ಚುಚ್ಚುಮದ್ದುಗಳು, ನೆಬ್ಯುಲೈಸೇಶನ್, ಆಮ್ಲಜನಕ, ಹೆಚ್ಚಿನ ಚಿಕಿತ್ಸೆ/ತಪಾಸಣೆಗೆ ರಕ್ತ ಮಾದರಿ ಸಂಗ್ರಹ ಮಾಡಲಾಗುತ್ತದೆ.

See also  ಅಕ್ರಮ ಗೋ ಮಾಂಸ ಸಾಗಾಟ: ಆರೋಪಿ ಪೊಲೀಸ್ ವಶಕ್ಕೆ

ತಂಡವು ಹವಮಾನ ವೈಪರೀತ್ಯ,ನೇರೆ,ಭೂಕುಸಿತಗಳು ಮುಂತಾದ ಕಠಿಣ ಪರಿಸ್ಥಿತಿಯಲ್ಲೂ ಸೇವೆ ನೀಡುತ್ತಾ ಬಂದಿದೆ. ಡಾ.ಮುರಳಿಕೃಷ್ಣ ಇರ್ವತ್ರಾಯ ಅವರಲ್ಲಿರುವ ಸಾಮಾಜಿಕ ಕಳಕಳಿ ಮತ್ತು ದೂರದೃಷ್ಟಿಯು ರೋಗಿಯ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ, ರೋಗಿಗಳಿಗೆ ತಮ್ಮ ಸೇವೆ ಯನ್ನು ಒದಗಿಸುವ ಮೂಲಕ ತನ್ನ ಗುರಿಯನ್ನು ಸಾಧಿಸಿದ್ದಾರೆ.

ಶ್ರೀ ಕೃಷ್ಣ ಯೋಗ ಕ್ಷೇಮದ ತಂಡದ ಸೇವಾಕಾರ್ಯದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಂದನಾ ಎಂ ಇರ್ವತ್ರಯ, ಸ್ಥಾನೀಯ ವೈದ್ಯಾಧಿಕಾರಿ, ಡಾ ಅಲ್ಬಿನ್ ಜೋಸೆಫ್, ಸಾರ್ವಜನಿಕ ಸಂಪರ್ಕಾಧಿಕಾರಿ ಗಣೇಶ್ , ಯೋಗಕ್ಷೇಮ ಕೋ-ಆರ್ಡಿನೇಟರ್ ಹೈದರ್ ಆಲಿ, ದಾದಿ ರಮ್ಯಾ ಮತ್ತು ಆಸ್ಪತ್ರೆಯ ಎಲ್ಲಾ ಸಿಬಂದಿಗಳ ಶ್ರಮವು ಮುಖ್ಯವಾಗಿದೆ.

“ಶ್ರೀ ಕೃಷ್ಣ ಯೋಗಕ್ಷೇಮ” BIPAP ಮತ್ತು ಕ್ರಿಟಿಕಲ್ ಕೇರ್ ವೆಂಟಿಲೇಟರ್‌ನಲ್ಲಿ ರೋಗಿಯ ನಿರಂತರ ಆರೈಕೆಗೆ ಸಹಾಯಕವಾಗುತ್ತದೆ. ಇದೀಗ ಆಸ್ಪತ್ರೆಯು ಬಿಎಲ್‌ಎಸ್ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದೆ. ಆಸ್ಪತ್ರೆಯು ವೈದ್ಯಕೀಯ ಉಪಕರಣಗಳನ್ನು ನೀಡಲು ಉದಾರವಾದ ಕೈಯನ್ನು ಹುಡುಕುತ್ತಿದೆ. ಸಹಾಯವಾಣಿ 9483525100

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು