ಬೆಳ್ತಂಗಡಿ: ತಾಲೂಕಿನ ಕಾರ್ಮಿಕರಿಗೆ ಪ್ರಸ್ತುತ ವರ್ಷದಲ್ಲಿ ಬಿ.ಎಂ.ಎಸ್ ನ ನಿರಂತರ ಪ್ರಯತ್ನದ ಫಲವಾಗಿ ದೊರೆತ ವಿವಿಧ ಸಹಾಯಧನಗಳು, ಮಂಜೂರಾತಿ ಆದೇಶ ಪತ್ರ ವಿತರಣಾ ಕಾರ್ಯಕ್ರಮ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆಯಿತು.
ಪ್ರಾಸ್ತಾವಿಕವಾಗಿ ಮಾತಾನಾಡಿದ ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಅವರು ಪ್ರಸ್ತುತ ವರ್ಷದಲ್ಲಿ ಭಾರತೀಯ ಮಜ್ದೂರ್ ಸಂಘ ಬೆಳ್ತಂಗಡಿ ತಾಲೂಕಿನಿಂದ ಸರ್ಕಾರದಿಂದ ದೊರೆಯುವ ವಿವಿಧ ಸವಲತ್ತುಗಳನ್ನು ಸಹಾಧನಗಳು ಕಾರ್ಮಿಕ ವರ್ಗದ ದುಡಿಯುವ ಕೈಗಳಿಗೆ ದೊರಕಿಸಿ ಕೊಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಸಂಘಟನೆ ಗಳಲ್ಲಿ ಭಾರತೀಯ ಮಜ್ದೂರ್ ಸಂಘ ಮುಂಚೂಣಿ ಸಂಘಟನೆಯಾಗಿದೆ ಕೇವಲ ಬೆಳ್ತಂಗಡಿ ತಾಲೂಕು ಒಂದರಲ್ಲಿಯೇ ಪ್ರಸ್ತುತ ವರ್ಷದಲ್ಲಿ ದೊರಕಿಸಿಕೊಟ್ಟು ಸಹಾಯಧನ ಮತ್ತು ಸವಲತ್ತು ಗಳು ಈರೀತಿ ಇದೆ 156ಜನಕ್ಕೆ ಮದುವೆ ಸಹಾಯಧನ 78ಲಕ್ಷ,ಸಹಜ ಮರಣ ಸಹಾಯಧನ 20ಜನರಿಗೆ10ಲಕ್ಷ, ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ 10.50ಲಕ್ಷ, ಕಾರ್ಮಿಕರ ಮಕ್ಕಳಿಗಾಗಿ ವಿದ್ಯಾರ್ಥಿ ವೇತನ 1250ಮಕ್ಕಳಿಗೆ 1ಕೋಟಿ38ಲಕ್ಷ, ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕ ಮಂಡಳಿಯಿಂದ ದೊರಕಿಸಿಕೊಟ್ಟಿದೆ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಅವರ ಮೂಲಕ ಕಾರ್ಮಿಕ ಇಲಾಖೆ ನೀಡಿದ 11ಸಾವಿರ ಆಹಾರ ಕಿಟ್, ಎನರ್ಜಿ ಕಿಟ್,1400 ಕಾರ್ಮಿಕ ಟೂಲ್ಸ್ ಕಿಟ್ ಗಳನ್ನು ವಿತರಿಸಲು ಕಾರ್ಮಿಕ ಇಲಾಖೆಯೊಂದಿಗೆ ಬಿಎಂಎಸ್ ಕೈ ಜೋಡಿಸಿ ಕಾರ್ಮಿಕರಿಗೆ ಈ ಸೌಲಭ್ಯಗಳು ಸಿಗುವಲ್ಲಿ ಶ್ರಮವಹಿಸಿದೆ ಎಂದರು.
ಧರ್ಮ ಜಾಗರಣದ ಪ್ರಾಂತ ಪ್ರಮುಖ್ ದಿನಕರ್ ಅದೇಲ್ ಅವರು, ಬಿಎಂಎಸ್ ನ ಈ ಕಾರ್ಯದಿಂದ ಕಾರ್ಮಿಕರ ಸಂಕಷ್ಟ ನಿವಾರಣೆಯಾಗಲಿದೆ ಹಾಗೂ ಇದರೊಂದಿಗೆ ಕಾರ್ಮಿಕರು ಸಿಗುವ ಸೌಲಭ್ಯವನ್ನು ಸದುಪಯೋಗ ಮಾಡಿಕೊಂಡು ದೇಶ ಕಟ್ಟುವ ದೇಶಭಕ್ತರು ಆಗಬೇಕೆಂದು ಕರೆಯಿತ್ತರು. ಈ ಸಂದರ್ಭ ಬಿಎಮ್ಎಸ್ ನ ಈ ಕಾರ್ಯದ ಕುರಿತು ಶ್ಲಾಘಿಸಿದರು.
ಅಧ್ಯಕ್ಷತೆಯನ್ನು ಭಾರತೀಯ ಮಜ್ದೂರ್ ಸಂಘದ ತಾಲೂಕಾಧ್ಯಕ್ಷ ಉದಯಕುಮಾರ್ ವಹಿಸಿದ್ದರು, ತಾಲೂಕು ಪ್ರಭಾರಿ ಕುಮಾರ ನಾಥ ಶೆಟ್ಟಿ , ಸದಸ್ಯ ಉಮೇಶ್ ನಾಳ, ಸಂಯೋಜಕ ಸಾಂತಪ್ಪ ಕಲ್ಮಂಜ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಹಾಯಧನ ಪಡೆದ ಫಲಾನುಭವಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಜನಾರ್ಧನ ಕಾನರ್ಪ, ಸ್ವಾಗತವನ್ನು ಶಾಂತಪ್ಪ ಕಲ್ಮಂಜ ಧನ್ಯವಾದವನ್ನು ಕುಮಾರನಾಥ್ ಶೆಟ್ಟಿ ಕಲ್ಮಂಜ. ನೆರವೇರಿಸಿದರು.