ಮಂಗಳೂರು: ಪಾಲಿಕೆ ವ್ಯಾಪ್ತಿಯ ಜಂಕ್ಷನ್ ಗಳ ಅಭಿವೃದ್ಧಿಗೆ ಸ್ಥಳೀಯಾಡಳಿತ ಒತ್ತು ನೀಡುತ್ತಿದ್ದರೂ ನಗರದ ಪ್ರಮುಖ ಜಂಕ್ಷನ್ ಎನಿಸಿಕೊಂಡ ಬಿಜೈ ಬಳಿಯ ಕೆಎಸ್ ಆರ್ ಟಿಸಿ ಜಂಕ್ಷನ್ ಇನ್ನೂ ಅಸಮರ್ಪಕ ವ್ಯವಸ್ಥೆಯಿಂದ ಕೂಡಿದೆ.
ಈ ಜಂಕ್ಷನ್ ನಲ್ಲಿ ನಿರಂತರ ವಾಹನ ದಟ್ಟಣೆ ಇರುತ್ತದೆ ಇಲ್ಲಿನ ಸಮಸ್ಯೆಯ ಪರಿಣಾಮ ಸಾರ್ವಜನಿಕರು ವಾಹನ ಸವಾರರು ದಿನಂಪ್ರತಿ ಸಂಕಷ್ಟಪಡುವಂತಾಗಿದೆ. ಪಾದಚಾರಿಗಳು ರಸ್ತೆ ದಾಟಲು ಜೀಬ್ರಾ ಕ್ರಾಸಿಂಗ್ ವ್ಯವಸ್ಥೆಯೂ ಇಲ್ಲ ಹೆಚ್ಚಿನ ಸಂದರ್ಭ ಸಂಚಾರಿ ಪೊಲೀಸರು ಇಲ್ಲಿ ಇರುವುದೂ ಇಲ್ಲ.
ಮಂಗಳೂರು ಪಾಲಿಕೆ ಕಚೇರಿಗೆ ಹೋಗಲು ಕೂಗಳತೆ ದೂರದಲ್ಲಿರುವ ಈ ಜಂಕ್ಷನ್ ಅಭಿವೃದ್ಧಿಗೆ ಪಾಲಿಕೆ ಈ ಹಿಂದೆ ಹಣ ಮೀಸಲಿರಿಸಿದರೂ ಅಭಿವದ್ಧಿ ಕಾಮಗಾರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ , ಕೆಎಸ್ ಆರ್ ಟಿ ಸಿ ಜಂಕ್ಷನ್ ನಲ್ಲಿ ಕೆಎಸ್ ಆರ್ ಟಿ ಸಿ, ಸಿಟಿ ಬಸ್ , ಸರ್ವಿಸ್ ಬಸ್ಸುಗಳು ಅತ್ತಿಂದಿತ್ತ ಸಂಚರಿಸುತ್ತದೆ. ರಾತ್ರಿ ವೇಳೆ ದೂರದ ಊರುಗಳಿಗೆ ತೆರಳುವ ಬಸ್ಸುಗಳು ಅಲ್ಲೇ ನಿಲ್ಲುತ್ತವೆ . ಈ ಭಾಗದಲ್ಲಿ ಬಸ್ ನಿಲ್ದಾಣ ತಿರುವು ಪಡೆಯುವ ಪ್ರದೇಶ ಅವೈಜ್ಞಾನಿಕವಾಗಿದೆ ಎಂದು ಆರೋಪವಿದೆ ಆಗಾಗ ಅಪಘಾತಗಳು ಸಂಭವಿಸುತ್ತಿರುತ್ತವೆ.
ರಾಜ್ಯದ ವಿವಿಧ ಕಡೆಗಳಿಂದ ಬರುವ ಕೆಎಸ್ಆರ್ಟಿಸಿ ಬಸ್ಸುಗಳು ಇದೇ ವೃತ್ತವನ್ನು ದಾಟಿ ಕಷ್ಟದಿಂದ ಬಸ್ ನಿಲ್ದಾಣಕ್ಕೆ ತಿರುವು ಪಡೆದುಕೊಳ್ಳುತ್ತವೆ . ಬಸ್ ನಿಲ್ದಾಣದಿಂದ ಹೊರ ಬರುವ ಬಸ್ಸುಗಳು ಕೂಡ ಏರು ರಸ್ತೆಯಲ್ಲಿ ಬಂದು ಎಡಕ್ಕೆ ತಿರುಗಿಸಲು ಹರಸಾಹಸ ಪಡುವಂತಾಗಿದೆ .
ಈ ಪ್ರದೇಶದ ಎತ್ತರ ತಗ್ಗು ಇದ್ದು ವೈಜ್ಞಾನಿಕ ಮಾದರಿ ಇಲ್ಲಿ ರಸ್ತೆಯು ಕಿರಿದಾಗಿದ್ದು ಈ ಜಂಕ್ಷನ್ ನಿಂದ ಕಾಪಿಕಾಡ್ , ನಂತೂರು, ಲಾಲ್ಬಾಗ್ , ಕೆಎಸ್ಆರ್ ಟಿಸಿಗೆ ರಸ್ತೆ ಕವಲೊಡೆಯುತ್ತದೆ. ಇಲ್ಲಿ ವ್ಯವಸ್ಥಿತ ಸಿಗ್ನಲ್ ಪಾದಚಾರಿ ಮಾರ್ಗ ಇರದ ಪರಿಣಾಮ ವಿವಿಧ ಕಡೆಯಿಂದ ಬರುವ ವಾಹನ ತಿರುವು ಪಡೆಯಬೇಕಾದರೆ ಗೊಂದಲ ಉಂಟಾಗಿದೆ.
ಜಂಕ್ಷನ್ ಪಕ್ಕದಲ್ಲಿ ಶಾಶ್ವತ ಈಜು ಕೊಳದಂತೆ ನೀರು ನಿಂತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಈ ಕುರಿತು ಸ್ಥಳೀಯರು ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ಮಾತ್ರ ಇತ್ಯರ್ಥಗೊಂಡಿಲ್ಲ.