News Kannada
Monday, October 02 2023
ಮಂಗಳೂರು

ಬಂಟ್ವಾಳ: ಅಧಿಕಾರಿಗಳು ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ

Verbal duel with officials and opposition members
Photo Credit : By Author

ಬಂಟ್ವಾಳ: ಅಧಿಕಾರಿಗಳು ಹಾಗೂ ವಿರೋಧ ಪಕ್ಷದ ಸದಸ್ಯರ ಜೊತೆ ಮಾತಿನ ಚಕಮಕಿ, ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿ, ಬಳಿಕ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದ ಬಳಿಕ ಸಭೆಯನ್ನು ಬಹಿಷ್ಕರಿಸಿ ಹೊರನಡೆಯುಲು ಮುಂದಾದ ಘಟನೆ ಇಂದು ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಕಳೆದ ತಿಂಗಳು ಒಳಚರಂಡಿ ಹಾಗೂ ನಗರ ನೀರು ಸರಬರಾಜು ವಿಚಾರಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪುರಸಭೆಯಲ್ಲಿ ವಿಶೇಷ ಸಭೆಯೊಂದನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಅದರ ಚರ್ಚೆಯಾಗಿತ್ತು, ಆ ಸಭೆಗೆ ನೀವು ಯಾಕೆ ಬಂದಿಲ್ಲ ಎಂದು ಪುರಸಭಾ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಅವರನ್ನು ಕೇಳಿದಾಗ, ನನಗೆ ಸಭೆಯ ಬಗ್ಗೆ ಯಾವುದೇ ನೋಟಿಸ್ ಬಂದಿಲ್ಲ , ಸಮರ್ಪಕವಾಗಿ ನನಗೆ ನೋಟಿಸ್ ಸಿಗದ ಹಿನ್ನೆಲೆಯಲ್ಲಿ ನಾನು ಸಭೆಗೆ ಬಂದಿಲ್ಲ ಎಂದು ಅವರು ಹೇಳಿದ್ದಲ್ಲದೆ, ವಿಶೇಷ ಸಭೆಯ ವಿಚಾರಕ್ಕೆ ಸಂಬಂಧಿಸಿದಂತೆ ಸೌಜನ್ಯ ಕ್ಕಾದರೂ ನನಗೆ ಹೇಳಬಹುದಿತ್ತು ಎಂದು ಹೇಳಿದಾಗ ಸಿಬ್ಬಂದಿ ರಝಾಕ್ ಅವರು ನಾನು ನಿಮಗೆ ಸೌಜನ್ಯಕ್ಕೆ ಹೇಳಿದ್ದೇನೆ ಎಂದು ತಿಳಿಸಿದರು.

ನೀನು ಯಾರು ನನಗೆ ಹೇಳಲು, ಸಂಬಂಧಪಟ್ಟವರು ಸತ್ತಿದ್ದಾರಾ? ಎಂದು ಗೋವಿಂದ ಪ್ರಭು ಅವರು ಹೇಳಿದ ಮಾತಿಗೆ ಆಕ್ರೋಶ ಭರಿತರಾದ ಮುಖ್ಯಾಧಿಕಾರಿ ಸ್ವಾಮಿ ಅವರು ಎದ್ದು ನಿಂತು, ನೀನು ಸಾಯಿ, ನಮಗೆ ಯಾಕೆ ಸಾಯಲು ಹೇಳುತ್ತಿ, ನೀನು ಸಾಯಿ ಎಂದು ಹಿರಿಯ ಸದಸ್ಯ ಗೋವಿಂದ ಪ್ರಭು ಅವರಿಗೆ ಏಕವಚನದಲ್ಲಿ ಬೈದ ಘಟನೆ ನಡೆಯಿತು.

ಕೂಡಲೇ ಬಿಜೆಪಿ ಸದಸ್ಯರು ಜತೆಯಾಗಿ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ವಿರುದ್ದ ಹರಿಹಾಯ್ದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶ ಮಾಡಿದ ಸಿಬ್ಬಂದಿ ರಾಘವೇಂದ್ರ ಕೂಡ ಗೋವಿಂದ ಪ್ರಭು ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಗೋವಿಂದ ಪ್ರಭು ಅವರು ನಮಗೆ 5 ಲಕ್ಷ ಲಂಚದ ಆರೋಪ ಮಾಡಿದ್ದಾರೆ.ಪ್ರತಿ ಬಾರಿ ಅಧಿಕಾರಿಗಳಿಗೆ ಏಕವಚನದಲ್ಲಿ ಕೆಟ್ಟ ಭಾಷೆಗಳಿಂದ ಬೈಯುವುದು ಸರಿಯಾ ಎಂದು ಪ್ರಶ್ನೆ ಮಾಡಿದರು. ಈ ಸಂದರ್ಭದಲ್ಲಿ ಅನಗತ್ಯ ಮಧ್ಯಪ್ರವೇಶ ಮಾಡಿದ ರಾಘವೇಂದ್ರ ಅವರ ಕ್ರಮ ಸರಿಯಲ್ಲ, ಎಂದು ಗದರಿಸಿದ ಅಧ್ಯಕ್ಷ ರು ಸುಮ್ಮನೆ ಕೂರುವಂತೆ ಹೇಳಿದರು.

ಪುರಸಭಾ ಕಚೇರಿಯೊಳಗೆ ನನಗೆ ನಾಯಿ ಎಂದು ಬೈದಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಾಧಿಕಾರಿ ಆರೋಪ ವ್ಯಕ್ತಪಡಿಸಿದರು , ಅದಕ್ಕೆ ನಾನು ಬೈದಿದ್ದು ನಿಜ, ನೀವು ನನ್ನನ್ನು ಪುರಸಭೆಯಿಂದ ಹೊರನಡೆಯಲು ಯಾಕೆ ಹೇಳಿ ದ್ದು, ಹಾಗೆ ಹೇಳಲು ನೀವು ಯಾರು ಎಂದು ಗೋವಿಂದ ಪ್ರಭು ಅವರು ಮುಖ್ಯಾಧಿಕಾರಿ ಅವರನ್ನು ಪ್ರಶ್ನಿಸಿದರು.

ಈ ರೀತಿಯ ಹಳೆಯ ಹಾಗೂ ಹೊಸ ಆರೋಪ ಪ್ರತ್ಯಾರೋಪಗಳು ನಡೆದು ಸಭೆ ಗೊಂದಲದ ಗೂಡಾಯಿತು. ಕೊನೆಗೆ ನನ್ನ ಅಣ್ಣ ಎಂಬ ಸಂಬಂಧ ದಲ್ಲಿ ಕ್ಷಮಾಪಣೆ ಕೇಳುತ್ತೇನೆ ಎಂದು ಪುರಸಭಾ ಅಧಿಕಾರಿ ಸ್ವಾಮಿ ಹೇಳಿದರು. ಆದರೆ ಕೌನ್ಸಿಲ್ ಸಭೆಯಲ್ಲಿ ಸದಸ್ಯರಿಗೆ ಅವಮಾನ ವಾಗುವುದಾದರೆ ನಾವು ಇಲ್ಲಿ ಯಾಕೆ ಕೂರಬೇಕು, ಸದಸ್ಯರು ಕೇಳಿದ ಲಿಖಿತ ಪ್ರಶ್ನೆ ಗಳಿಗೆ ಉತ್ತರ ನೀಡದೆ ಅವಮಾನ ಮಾಡುತ್ತೀರಿ, ನಮಗೆ ಬೆಲೆ ನೀಡದ ಮೇಲೆ ನಾವು ಯಾಕೆ ಇಲ್ಲಿ ಕೂರಬೇಕು ಎಂದು ಗೋವಿಂದ ಪ್ರಭು ಅವರು ಪ್ರಶ್ನಿಸಿ ಬಿಜೆಪಿ ಸದಸ್ಯರು ಸಭೆಯಿಂದ ಹೊರ ನಡೆಯಲು ಮುಂದಾದರು.

See also  ಪಣಜಿ: ಕೋವಿಡ್ ಲಸಿಕೆ ಸಂಪೂರ್ಣ ಸುರಕ್ಷಿತ ಎಂದ ಗೋವಾ ಆರೋಗ್ಯ ಸಚಿವ

ಈ ಸಂದರ್ಭದಲ್ಲಿ ಕಾಂಗ್ರೇಸ್ ಸದಸ್ಯ ಜನಾರ್ದನ ಚೆಂಡ್ತಿಮಾರ್ ಹಾಗೂ ಪುರಸಭಾ ಮುಖ್ಯಾಧಿಕಾರಿ ಸ್ವಾಮಿ ಅವರು ಸಭೆಯಿಂದ ಹೊರನಡೆಯದಂತೆ ಮನವೊಲಿಸುವ ಸುಮಾರು ಹೊತ್ತಿನ ಪ್ರಯತ್ನ ಸಫಲವಾಯಿತು.
ಬಳಿಕ ಸಭೆ ಮತ್ತೆ ಮುಂದುವರಿಯಿತು.

ಮುಂದಿನ ದಿನಗಳಲ್ಲಿ ಅಧಿಕಾರಿಗಳು ಯಾವುದೇ ಸದಸ್ಯರ ಜೊತೆ ಅನುಚಿತ ವರ್ತನೆ ಮಾಡಬಾರದು ಎಂದು ಖಡಕ್ ಆದೇಶ ನೀಡಿದರು. ಅಧಿಕಾರಿಗಳಿಗೆ ಗೌರವ ನೀಡಿ ಮಾತನಾಡಿ ಎಂದು ಸದಸ್ಯರಿಗೂ ಅಧ್ಯಕ್ಷ ಮಹಮ್ಮದ್ ಶರೀಫ್ ಕಿವಿಮಾತು ಹೇಳಿದರು.

ನೀರು , ಬೀದಿ ದೀಪ ಇಂತಹ ಮೂಲಭೂತ ಸೌಕರ್ಯಗಳ ನ್ನು ನಮ್ಮಿಂದ ಸಾರ್ವಜನಿಕ ರಿಗೆ ಒದಗಿಸಲು ಸಾಧ್ಯವಿಲ್ಲದ ಮೇಲೆ ನಾವು ಯಾಕಾಗಿ ಸದಸ್ಯರಾಗಿದ್ದೇವೆ ಎಂದು ಸದಸ್ಯ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು. ನಿರ್ಣಯ ಗಳು ಕೇವಲ ಪುಸ್ತಕ ದ ಬದನೆಕಾಯಿ ಆಗಿದೆ ಯಾ ಹೊರತು ಯಾವುದೇ ನಿರ್ಣಯ ಗಳು ಕಾರ್ಯರೂಪಕ್ಕೆ ತರಲು ಕೌನ್ಸಿಲ್ ನಿಂದ ಸಾಧ್ಯವಾಗಿಲ್ಲ ಎಂದು ಹಿರಿಯ ಸದಸ್ಯ ಎ.ಗೋವಿಂದ ಪ್ರಭು ವಿಷಾದ ವ್ಯಕ್ತಪಡಿಸಿದರು.

ಬಂಟ್ವಾಳದ ಗಾಣದಪಡ್ಪು ಎಂಬಲ್ಲಿ ಕಾರ್ಯಚರಿಸುತ್ತಿರುವ ಪೆಟ್ರೋಲಿಯಂ ಪಂಪ್ ನವರಿಗೆ ಸಂಬಂಧಿಸಿದಂತೆ ಸಿ.ಎನ್.ಜಿ‌.ಗ್ಯಾಸ್ ಸ್ಟೇಷನ್ ಅಳವಡಿಸಲು ಹೆಚ್ಚುವರಿ ಸ್ಥಳಾವಕಾಶಕ್ಕೆ ನಿರಾಕ್ಷೇಪಣಾ ಪತ್ರದ ಅರ್ಜಿಯ ಬಗ್ಗೆ ಸಭೆಯಲ್ಲಿ ಸದಸ್ಯರ ಮುಂದಿಟ್ಟ ವೇಳೆ ಈಗಾಗಲೇ ಈ ಪೆಟ್ರೋಲಿಯಂ ಪಂಪ್ ನ ಮಾಲಕರು ರಾಜಕಾಲುವೆಯನ್ನು ಒತ್ತುವರಿ ಮಾಡಿದ್ದಾರೆ ಎಂದು ಸದಸ್ಯರು ಆರೋಪ ವ್ಯಕ್ತಪಡಿಸಿದರು. ಮತ್ತೆ ಅವರಿಗೆ ಸ್ಥಳವನ್ನು ನೀಡುವುದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಪ್ರತಿ ವಾರ್ಡ್ ನಲ್ಲಿ ಅಳವಡಿಸಲಾಗಿರುವ ಎಲ್.ಇ.ಡಿ ಲೈಟ್ ಗಳು ಮಾಯವಾಗಿದೆ ಅಂತರವರಿಗೆ ಯಾಕೆ ಬಿಲ್ ಪಾವತಿ ಮಾಡುತ್ತಿರಿ ಎಂದು ಸದಸ್ಯರು ಪ್ರಶ್ನಿಸಿದರು. ತ್ಯಾಜ್ಯ ಸಂಗ್ರಹಣೆಗಾಗಿ ಹೊಸ ವಾಹನ ಖರೀದಿ ಮಾಡಲಾಗಿದೆಯಾದರೂ ಅದರ ದಾಖಲೆಗಳು ಇನ್ನೂ ಕೂಡ ಕಂಪೆನಿ ಹೆಸರಿನಲ್ಲಿ ಇದೆ, ವಾಹನ ವಿಮೆ ಸಹಿತ ಯಾವುದೇ ದಾಖಲೆ ಗಳಿಲ್ಲ ಎಂದು ಸದಸ್ಯರು ಆರೋಪ ವ್ಯಕ್ತಪಡಿಸಿದರು. ವಾಹನ ಅಪಘಾತ ವಾದರೆ ನಾವು ಏನು ಮಾಡುವುದು ಎಂದು ಸದಸ್ಯರು ಪ್ರಶ್ನೆ ಮಾಡಿದರು.

ಪುರಸಭಾ ಇಲಾಖೆಯ ಪ್ರತಿ ಅಭಿವೃದ್ಧಿ ಕಾಮಗಾರಿ ವಿಚಾರದಲ್ಲೂ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಎಂಬ ಹಾರೈಕೆಯ ಉತ್ತರ ನೀಡುವುದು ಸರಿಯಲ್ಲ. ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರು ಜಿಲ್ಲಾಧಿಕಾರಿ ಬೇಟಿ ಮಾಡಿ ಪ್ರತಿಯೊಂದರ ಮಂಜೂರಾತಿ ಆದೇಶಗಳನ್ನು ಪಡೆಯಲು ಪ್ರಯತ್ನಿಸಿ, ಪ್ರತಿ ಬಾರಿ ಜಿಲ್ಲಾಧಿಕಾರಿಗೆ ದೂರು ಹಾಕಿ ವಿಷಯಾಂತರ ಮಾಡುತ್ತಾ ಬರಲು ಜಿಲ್ಲಾಧಿಕಾರಿ ಏನು ಕಾಶ್ಮೀರ ದಲ್ಲಿ ಇರುವುದಾ ಎಂದು ಜನಾರ್ಧನ ಚೆಂಡ್ತಿಮಾರ್ ಪ್ರಶ್ನೆ ಮಾಡಿದರು. ಮಳೆಯಿಂದ ಹಾನಿಯಾದ ಪುರಸಭಾ ವ್ಯಾಪ್ತಿಯ ಪ್ರದೇಶಗಳಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ವಾಸು ಪೂಜಾರಿ ಅವರು ಪ್ರಶ್ನಿಸಿದರು.

ಸಿ.ಸಿ.ಕ್ಯಾಮರಾ ಅಳವಡಿಸಿದ ಬಳಿಕ ವೂ ಕಸವನ್ನು ಹಾಕುವುದು ತಪ್ಪಿಲ್ಲ.ಸಿ.ಸಿ.ಕ್ಯಾಮರಾ ಹಾಕಿದ ಕಡೆ ಕಸ ಹಾಕಿ ಎಂಬಂತಾಗಿದೆ. ಲಕ್ಷಾಂತರ ರೂ ಖರ್ಚು ಮಾಡಿ ಸಿ.ಸಿ.ಕ್ಯಾಮರಾ ಅಳವಡಿಸಿ ದ ಮೇಲೆ ಕಸ ಬಿಸಾಡುವರ ಮೇಲೆ ಪುರಸಭಾ ಇಲಾಖೆಗೆ ಯಾವ ಕ್ರಮ ಕೈಗೊಳ್ಳಲು ಸಾಧ್ಯವಾಗದೆ ಇರುವುದೇ ತ್ಯಾಜ್ಯ ಎಸೆಯುವುದು ಮುಂದುವರಿಯಲು ಕಾರಣವಾಗಿದೆ ಸದಸ್ಯ ರು‌ ಆರೋಪ ವ್ಯಕ್ತಪಡಿಸಿದರು.

See also  ಗುರುವಾಯನಕೆರೆ- ನಾರಾವಿ ರಸ್ತೆ ಇನ್ನು ಮುಂದೆ ದ್ವಿಪಥ: ಸರಕಾರದಿಂದ 25 ಕೋ.ರೂ. ಅನುದಾನ

ಪುರಸಭಾ ವ್ಯಾಪ್ತಿಯಲ್ಲಿ ಟ್ರಾಫಿಕ್ ಸಮಸ್ಯೆ ಪರಿಹಾರ ಮಾಡುವಲ್ಲಿ ಪೋಲಿಸ್ ಇಲಾಖೆ ಹಾಗೂ ಪುರಸಭಾ ಇಲಾಖೆ ಜಂಟಿಯಾಗಿ ಕ್ರಮಕೈಗೊಳ್ಳುವ ನಿರ್ಧಾರ ಮಾಡಬೇಕು ಎಂದು ಟ್ರಾಫಿಕ್ ಎಸ್. ಐ.ಮೂರ್ತಿ ಅವರು ಸಭೆಯಲ್ಲಿ ‌ಸಲಹೆ ನೀಡಿದರು. ಜೊತೆಗೆ ಟ್ರಾಫಿಕ್ ಸಮಸ್ಯೆ ಹಾಗೂ ಪಾರ್ಕಿಂಗ್ ಗಾಗಿ ಮಾಡಬೇಕಾದ ಕೆಲವೊಂದು ವಿಚಾರಗಳನ್ನು ಸಭೆಯ ಮುಂದಿಟ್ಟರು. ಉಪಾಧ್ಯಕ್ಷೆ ಜೆಸಿಂತ ಡಿಸೋಜ ಉಪಸ್ಥಿತರಿದ್ದರು. ಸದಸ್ಯ ರಾದ ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ಇದ್ರೀಶ್, ಮೋನಿಸ್ ಆಲಿ, ಲೋಲಾಕ್ಷ, ಮತ್ತಿತರರು ಚರ್ಚೆಯ ಲ್ಲಿ ಭಾಗವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು