News Kannada
Monday, December 11 2023
ಮಂಗಳೂರು

ಮೂಡುಬಿದಿರೆ: ತಂದೆಯ ಮಾರ್ಗದರ್ಶನದಲ್ಲಿ ಕೃಷಿಯತ್ತ ಆಸಕ್ತಿ ತೋರಿದ ಮಗ

Son takes interest in agriculture under father's guidance
Photo Credit : By Author

ಮೂಡುಬಿದಿರೆ: ಕೃಷಿಯತ್ತ ಇಂದಿನ ಯುವಪೀಳಿಗೆ ಆಸಕ್ತಿಯನ್ನು ತೋರುವುದು ತೀರಾ ವಿರಳ. ಇಂದು ವಿದ್ಯಾರ್ಥಿಗಳು ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಮುಗಿಸಿ ಉನ್ನತ ಉದ್ಯೋಗವನ್ನು ಅರಸಿಕೊಂಡು ಬೇರೆ ರಾಜ್ಯ ಅಥವಾ ವಿದೇಶದತ್ತ ಮುಖ ಮಾಡಿ ತಮ್ಮ ಕೃಷಿ ಸಂಪತ್ತನ್ನು ಬಿಟ್ಟು ತಮ್ಮ ವೃತ್ತಿಪರ ಶಿಕ್ಷಣದಲ್ಲಿ ಮುಂದುವರಿಯುವವರೇ ಹೆಚ್ಚು. ಆದರೆ ಇಲ್ಲೊಬ್ಬ ಎಂಬಿಎ ಪದವೀಧರ ಅರವಿಂದ್ ರಂಬೂಟನ್ ಹಣ್ಣಿನೊಂದಿಗೆ ಮಿಶ್ರ ಹಣ್ಣಿನ ಕೃಷಿಯತ್ತ ಒಲವು ತೋರಿದ್ದಾರೆ. ತಮ್ಮ ತಂದೆ ಕೃಷಿಗೆ ಜತೆಯಾಗಿ ನಿಂತು ತಂದೆಯಿಂದ ಬಳುವಳಿಯಾಗಿ ಬಂದ ಕೃಷಿ ಅವರ ಪೀಳಿಗೆಯಲ್ಲಿ ನಿಂತು ಹೋಗಬಾರದೆಂಬ ಉದ್ದೇಶದಿಂದ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಅರವಿಂದ್ ಮೂಡುಬಿದಿರೆ ತಾಲೂಕಿನ ಬೆಳುವಾಯಿ ಪಂಚಾಯತ್ ವ್ಯಾಪ್ತಿಯ ಉಮಾನಾಥ್ ದೇವಾಡಿಗ ಅವರ ಏಕೈಕ ಪುತ್ರರಾಗಿರುವ ಇವರು 30 ವರ್ಷಗಳ ಹಿಂದೆ ತಂದೆಯವರು ಸೋನ್ಸ್ ಫಾರ್ಮ್ನಿಂದ ರಂಬೂಟನ್ ಗಿಡದ 3 ರಿಂದ 4 ತಳಿಯನ್ನು ತಂದು ನೆಟ್ಟಿದ್ದರು. ಆ ಗಿಡದಲ್ಲಿ ಬೆಳೆದ ರಂಬೂಟನ್ ರುಚಿಯನ್ನು ಕಂಡು ತಂದೆಯವರಲ್ಲಿ ರಂಬೂಟನ್ ಕೃಷಿಯತ್ತ ಹೆಚ್ಚು ಒಲವು ಮೂಡಿತು. ನಂತರದ ದಿನಗಳಲ್ಲಿ ಅದೇ ಕೃಷಿಯನ್ನು ಇನ್ನೂ ಉತ್ತಮವಾಗಿ ಚೆನ್ನಾಗಿ ಬೆಳೆಸಬೇಕೆಂಬ ನಿಟ್ಟಿನಲ್ಲಿ ಇನ್ನಷ್ಟೂ ಗಿಡಗಳನ್ನು ತಂದು ನೆಟ್ಟು ಅದರ ಪೋಷಣೆಯನ್ನು ಮಾಡಿದರು. ಬಾಲ್ಯದಿಂದಲೇ ಹೆಚ್ಚು ತನಗೆ ಕೃಷಿಯಲ್ಲಿಯೇ ಆಸಕ್ತಿ ಇರುವುದರಿಂದ, ತಂದೆಯವರು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದನ್ನು ಕಂಡು ತಾನು ಕೃಷಿಯತ್ತ ಗಮನ ಹರಿಸಿದ್ದಾರೆ.

ರಂಬೂಟನ್ ಗಿಡ ಬೇರೆ ಕೃಷಿಗೆ ಹೋಲಿಸಿದರೆ ಈ ತಳಿಗೆ ಹೆಚ್ಚು ನೀರು ಬೇಕಾಗಿರುತ್ತದೆ. ಈ ಗಿಡಕ್ಕೆ ಎಷ್ಟು ನೀರನ್ನು ವಿನಿಯೋಗಿಸುತ್ತೇವೆಯೋ ಅಷ್ಟು ಉತ್ತಮವಾದ ಫಲವನ್ನು ನೀಡುತ್ತದೆ. ಅದಲ್ಲದೇ ಈ ಗಿಡವು ಮಳೆ ಹೆಚ್ಚು ಬೀಳುವ ಪ್ರದೇಶದಲ್ಲಿ ಈ ಗಿಡವನ್ನು ಬೆಳೆಯಲಾಗುತ್ತದೆ. ರಂಬೂಟನ್ ಗಿಡದ ಪೋಷಣೆಯ ಕೆಲಸವು ಹೆಚ್ಚು ಇದ್ದು, ಅಷ್ಟೇ ಶ್ರಮವಹಿಸಬೇಕು. ಈ ರಂಬೂಟನ್ ಹಣ್ಣನ್ನು ಇಲಿಗಳು ತಿಂದು ಹಾಕಿ ನಾಶ ಮಾಡುತ್ತವೆ. ರಂಬೂಟನ್ ಹಣ್ಣನ್ನು ಬೆಳೆದು ಅದನ್ನು ಸುರಕ್ಷಿತವಾಗಿ ಮಾರುಕಟ್ಟೆಗೆ ಮಾರಾಟ ಮಾಡುವುದೇ ಒಂದು ಸಾಹಸದ ಕೆಲಸವಾಗಿದೆ. ಎಷ್ಟು ಲಾಭ ಪಡುತ್ತೇವೆ ಅದಕ್ಕಿಂತ ಹೆಚ್ಚು ಅದರ ಪೋಷಣೆಯನ್ನು ಮಾಡಲು ಶ್ರಮಪಡಬೇಕಾಗುತ್ತದೆ.

ರಂಬೂಟನ್ ಹಣ್ಣುಗಳನ್ನು ಅಳಿಲುಗಳೆಲ್ಲ ಬಂದು ನಾಲ್ಕು-ಐದು ಹಣ್ಣುಗಳನ್ನು ತಿಂದರೆ ಸಾಕು ಎಲ್ಲಾ ಹಣ್ಣುಗಳು ಬಿದ್ದು ಹಾಳಾಗುತ್ತವೆ, ಹೀಗಾಗಿ ಹಣ್ಣುಗಳನ್ನು ಕಾಪಾಡುವ ಸಲುವಾಗಿ ಹಣ್ಣುಗಳನ್ನು ಮಾರಾಟ ಮಾಡಿ ಬಂದ ವೆಚ್ಚದಲ್ಲಿ ಬಲೆಗಳನ್ನು ತಂದು ಹಾಕಿ , ಆದಷ್ಟು ಹಣ್ಣುಗಳನ್ನು ಕಾಪಾಡಲು ನೋಡುತ್ತೇವೆ. ಹೀಗಾಗಿ ಲಾಭ ಅನ್ನೊದಕ್ಕಿಂತ ಜೀವನ ನಡೆಸಲು ಏನೂ ತೊಂದರೆಯಿಲ್ಲ. ಜೀವನ ನಡೆಸುವಷ್ಟು ಸಹಾಯವನ್ನು ಈ ಕೃಷಿಯು ನೀಡಿದೆ ಎಂದು ಉಮಾನಾಥ್ ದೇವಾಡಿಗ (ಅರವಿಂದ್ ತಂದೆ) ಕೃಷಿಯಲ್ಲಿ ತಾವು ಪಟ್ಟ ಶ್ರಮದ ಬಗ್ಗೆ ವಿವರಿಸಿದರು.

See also  ಕೊಚ್ಚಿ ಹೋದ ವಿದ್ಯಾರ್ಥಿಗಳು; ಇಬ್ಬರ ಮೃತದೇಹ ಪತ್ತೆ ಇನ್ನಿಬ್ಬರಿಗೆ ಶೋಧ

ಈ ಹಣ್ಣಿಗೆ ವಿದೇಶಗಳಿಂದಲೂ ಭಾರೀ ಬೇಡಿಕೆಯಿದ್ದು, ಅಲ್ಲಿಗೆ ರವಾನೆ ಮಾಡಬೇಕಾದರೆ ಇಲ್ಲಿ ಅಷ್ಟೊಂದು ಹಣ್ಣುಗಳನ್ನು ಪೂರೈಕೆ ಮಾಡಲು ಸಾಧ್ಯವಿಲ್ಲ. ಹೇಗೆ ಎಂದರೆ ಹಣ್ಣುಗನ್ನು ರಫ್ತು ಮಾಡುವುದಕ್ಕಿಂತ ಹೆಚ್ಚು ಕಾಡು ಪ್ರಾಣಿಗಳೆಲ್ಲಾ ಹಣ್ಣನ್ನು ತಿಂದು ನಾಶ ಮಾಡುತ್ತವೆ. ಇದರಿಂದ ಹಣ್ಣುಗಳ ರಫ್ತಿನಿಂದ ವ್ಯತ್ಯಾಸ ಉಂಟಾಗುತ್ತದೆ.

ಇವರು ರಂಬೂಟನ್ ಹಣ್ಣು ಮಾತ್ರವಲ್ಲದೇ, ಇದರೊಂದಿಗೆ, ಅನಾನಸು, ಲಕ್ಷ್ಮಣ ಫಲ ಹಣ್ಣಿನ ಕೃಷಿಯನ್ನು ಮಾಡಿಕೊಂಡಿದ್ದು, ಹೆಚ್ಚು ಯುವ ಜನರು ಈ ಕೃಷಿಯತ್ತ ಆಸಕ್ತಿಯನ್ನು ತೋರಬೇಕು ಏಕೆಂದರೆ ಮುಂದೊಂದು ದಿನ ನಾವು ಎಲ್ಲಿಗೆ ಉದ್ಯೋಗಕ್ಕೆ ಹೋದರೂ ಕೃಷಿಯನ್ನು ನಿಲ್ಲಿಸಿದರೆ ನಮಗೆ ಆಹಾರವಿಲ್ಲದಂತಾಗುತ್ತದೆ. ಈ ಕಾರಣಕ್ಕಾಗಿಯೇ ತಂದೆಯಿಂದ ಬಂದ ಈ ಕೃಷಿಯನ್ನು ಮುಂದುವರಿಸಿಕೊಂಡು ಹೋಗುತ್ತೀದ್ದೇನೆ. ಎಲ್ಲಾ ಯುವಕರು ಕೃಷಿಯತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು