ಬೆಳ್ತಂಗಡಿ: ಲಾಯಿಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ಮೂರು ದಿನಗಳ ಕಾಲ ನಡೆಯುವ 351ನೇ ಆರಾಧನಾ ಮಹೋತ್ಸವದ ಕಾರ್ಯಕ್ರಮಗಳನ್ನು ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್ ಪದ್ಮನಾಭ ಮಾಣಿಂಜ ಶುಕ್ರವಾರ ಉದ್ಘಾಟಿಸಿದರು.
ರಾಘವೇಂದ್ರ ಮಠಕ್ಕೆ ಮುಗುಳಿ ಶಾರದಮ್ಮ ಮತ್ತು ಮಕ್ಕಳು ಸೇವಾ ರೂಪದಲ್ಲಿ ನೀಡಿದ 2. 50ಲಕ್ಷದ ಇಂಟರ್ ಲಾಕ್ ಅನ್ನು ಮುಖ್ಯ ಅತಿಥಿ ಬೆಂಗಳೂರು ಉದ್ಯಮಿ ನಾರಾಯಣ ಗೌಡ ಬೇಗೂರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ಉಮಾ ಆರ್ ರಾವ್, ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ, ಉಪಾಧ್ಯಕ್ಷ ಮಹಾಬಲಶೆಟ್ಟಿ, ಕೋಶಾಧಿಕಾರಿ ವಸಂತ ಸುವರ್ಣ, ಟ್ರಸ್ಟಿಗಳಾದ ಜಿ ಸೋಮೆ ಗೌಡ, ಮೋಹನ ರಾವ್ ಉಜಿರೆ, ಗೌರವ ಸಲಹೆಗಾರ ಮಂಜುನಾಥ ರೈ, ಮುಖ್ಯ ಅರ್ಚಕ ರಾಘವೇಂದ್ರ ಭಾಂಗಿಣ್ಣಾಯ, ಸೀನಿಯರ್ ಜೇಸಿ ಅಧ್ಯಕ್ಷ ಪೃಥ್ವಿ ರಂಜನ್ ಇದ್ದರು.
ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಸಲಹೆಗಾರ ಎ ಕೃಷ್ಣಪ್ಪ ಪೂಜಾರಿ ಸ್ವಾಗತಿಸಿ, ಕಾರ್ಯದರ್ಶಿ ಶೇಖರ ಬಂಗೇರ ವಂದಿಸಿದರು. ಉತ್ಸವ ಸಮಿತಿ ಸದಸ್ಯ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
( ಆ.13) ಕಾರ್ಯಕ್ರಮ
ಬೆಳಿಗ್ಗೆ 7 ರಿಂದ 11 ಗಂಟೆಯವರೆಗೆ ತುಳು ಶಿವಳ್ಳಿ ಬ್ರಾಹ್ಮಣ ವಲಯ ಕುವೆಟ್ಟು ಹಾಗೂ ಶ್ರೀ ಜನಾರ್ಧನ ಸ್ವಾಮಿ ಭಗಿನಿ ಭಜನಾ ಮಂಡಳಿ ಉಜಿರೆ ಇಲ್ಲಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ ಧಾರ್ಮಿಕ ಸಭೆ ನಡೆಯಲಿದ್ದು ಅಧ್ಯಕ್ಷತೆಯನ್ನು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೇರಾಜೆ ವಹಿಸಲಿದ್ದಾರೆ. ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಧ್ಯಾಪಕ ಡಾ. ಬಿ.ಎ.ಕುಮಾರ ಹೆಗ್ಡೆ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ನ ಮೋಹನ್ ಕುಮಾರ್. ಲಾಯಿಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಬೆಳ್ತಂಗಡಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಹೇಮಂತ್ ರಾವ್ ಎರ್ಡೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮದ್ಯಾಹ್ನ 1 ಗಂಟೆಗೆ ಮಹಾಪೂಜೆ , ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದ್ದು, ಸಂಜೆ 5 ಗಂಟೆಯಿಂದ ಮೂಕಾಂಬಿಕ ಭಜನಾ ಮಂಡಳಿ ಉಜಿರೆ, ದುರ್ಗಾಪರಮೇಶ್ವರಿ ಭಜನಾ ಮಂಡಳಿ ನಾಳ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ 8.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ, ಶ್ರೀ ಮೋಹನ್ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಸಪ್ತಸ್ವರ ಗಾನ ಕಾರ್ಯಕ್ರಮ ನಡೆಯಲಿದೆ.