ಮಂಗಳೂರು: ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿ ಮೂಡಬಿದಿರೆ ತಾಲೂಕಿನ ತೋಡಾರು ಗ್ರಾಮದ ಫೈಸಲ್ ಯಾಣೆ ಕ್ಯಾಬರೆ ಫೈಸಲ್ 33 ಎಂಬಾತನನ್ನು ಮೂಡುಬಿದಿರೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಆರೋಪಿ ವಿರುದ್ಧ ಮೂಡಬಿದಿರೆ , ವೇಣೂರು , ಬಜ್ಪೆ , ಮಂಗಳೂರು ಗ್ರಾಮಾಂತರ ,ಅಜೆಕಾರು ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನಕ್ಕಾಗಿ ನ್ಯಾಯಾಲಯವು ವಾರಂಟ್ ಹೊರಡಿಸಿತ್ತು ಅದರಂತೆ ಶುಕ್ರವಾರ ಈತ ಮನೆಯಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಲಾಗಿತ್ತು.
ಈ ವೇಳೆ ಆರೋಪಿ ಮನೆಯಿಂದ ಓಡಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ, ಬೆನ್ನಟ್ಟಿದಾಗ ಆರೋಪಿಯು ಚೂರಿ ಮತ್ತು ಕಲ್ಲಿನಿಂದ ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಅದಾಗ್ಯೂ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.