News Kannada
Thursday, October 06 2022

ಮಂಗಳೂರು

ಮಂಗಳೂರು: ನೈಜ ರಾಜಕಾರಣದಿಂದ ದೇಶಸೇವೆ ಸಾಧ್ಯ - 1 min read

Mangaluru: Real politics can serve the nation.
Photo Credit : News Kannada

ಮಂಗಳೂರು: ರಾಜಕಾರಣವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ದೇಶಸೇವೆ ಮಾಡಬಹುದು ಎಂದು ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರ್‌ ವಿಠಲ ಕಿಣಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ, ಪ್ರೆಸ್‌ಕ್ಲಬ್‌, ಪತ್ರಿಕಾ ಭವನ ಟ್ರಸ್ಟ್‌ ವತಿಯಿಂದ ಆಯೋಜಿಸಿದ ಸಂವಾದದಲ್ಲಿ ಮಾತನಾಡಿದರು. ಹಿಂದಿನ ರಾಜಕಾರಣಿಗಳು ಒಳ್ಳೆಯವರಾಗಿದ್ದರು, ಅಂದು ರಾಜಕಾರಣದಲ್ಲಿ ತ್ಯಾಗ ಸೇವೆಗಳಿದ್ದವು. ರಾಜಕೀಯ ನಾಯಕರು ಪರಸ್ಪರ ಗೌರವ ನೀಡುತ್ತಿದ್ದರು. ರಾಜಕೀಯ ಪಕ್ಷಗಳು ಬೇರೆ ಬೇರೆಯಾಗಿದ್ದರೂ ಎಲ್ಲ ರಾಜಕಾರಣಿಗಳ ಉದ್ದೇಶ ದೇಶದ ಸರ್ವಾಂಗೀಣ ಪ್ರಗತಿಯೇ ಆಗಿತ್ತು. ಆದರೆ ಈಗ ಅಂತಹ ಧ್ಯೇಯೋದ್ದೇಶಗಳು ಕಾಣುತ್ತಿಲ್ಲ, ಈಗಿನ ರಾಜಕೀಯ ನೋಡಿದರೆ ದುಃಖ ಆಗುತ್ತದೆ ಎಂದರು.

ಇಂದಿರಾಜಿ ತುರ್ತುಪರಿಸ್ಥಿತಿ ಹೇರಿದಾಗ ‌ ಕಾಂಗ್ರೆಸ್‌ ಪಕ್ಷದವರೇ ಆದ ರಂಗನಾಥ ಶೆಣೈ ಅವರು ದೈರ್ಯವಾಗಿ ವಿರೋಧಿಸಿದ್ದರು. ಇಂದಿರಾ ಗಾಂಧಿ ಕರೆದು ವಿಚಾರಿಸಿ ಮೆಚ್ಚುಗೆ ಸೂಚಿಸಿದ್ದರಂತೆ. ಈ ಪ್ರಕರಣದ ಬಳಿಕ “ನನ್ನ ಹಿಂದೆ ಸಿಐಡಿಗಳಿದ್ದಾರೆ ಆಗಾಗ ನನ್ನ ಬಳಿ ಬಂದು ಮಾತನಾಡಬೇಡ ಎಂದು ಶೆಣೈ ಅವರು ನನಗೆ ಕಿವಿ ಮಾತು ಹೇಳಿದ್ದರು ಎಂದು ವಿಠಲ ಕಿಣಿ ಸ್ಮರಿಸಿದರು. ಈ ಸಂದರ್ಭ ಆಜಾದಿಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ೯೪ರ ಹರೆಯದ ಮಟ್ಟಾರ್‌ ವಿಠಲ ಕಿಣಿ ಅವರನ್ನು ಸನ್ಮಾನಿಸಲಾಯಿತು.

ಪತ್ರಿಕಾಭವನ ಮಾಜಿ ಅಧ್ಯಕ್ಷ ಆನಂದ ಶೆಟ್ಟಿ, ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಆರ್.‌, ಪ್ರೆಸ್‌ ಕ್ಲಬ್‌ ಅಧ್ಯಕ್ಷ ಅನ್ನು ಮಂಗಳೂರು, ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಪಿ.ಬಿ.ಹರೀಶ್‌ ರೈ, ರಾಜ್ಯಕಾರ್ಯಕಾರಿ ಸಮಿತಿ ಸದಸ್ಯರ ಜಗನ್ನಾಥ ಶೆಟ್ಟಿ ಬಾಳ, ರಾಜ್ಯಕಾರ್ಯಕಾರಿ ಸಮಿತಿ ಆಹ್ವಾನಿತ ಸದಸ್ಯ ಇಬ್ರಾಹಿಂ ಅಡ್ಕಸ್ಥಳ ಇದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ನಿರೂಪಿಸಿದರು.

ದುರ್ಘಟನೆ
೧೪ ಭಾಷೆಗಳ ಮೇಲೆ ಹಿಡಿತ ಇದ್ದ ಸ್ಕಾಲರ್‌ ಡಾ. ರಘುವೀರ್‌ ಅವರು ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ಅವರ ಆತ್ಮೀಯರಾಗಿದ್ದರು. ಅಂಥವರು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಜನಸಂಘಕ್ಕೆ ಸೇರಿ, ತಕ್ಷಣವೇ ಜನಸಂಘದ ಅಧ್ಯಕ್ಷರೂ ಆದರು. ದುರದೃಷ್ಟ ಎಂದರೆ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ಹೋದಾಗ ಅವರು ಅಪಘಾತದಲ್ಲಿ ಮೃತಪಟ್ಟರು‌, ಇದು ದೊಡ್ಡ ದುರ್ಘಟನೆ ಎಂದು ವಿಠಲ ಕಿಣಿ ಅವರು ಸ್ಮರಿಸಿಕೊಂಡರು.

ಕಮ್ಯೂನಲ್‌ !
ಶ್ರೇಷ್ಠ ರಾಜಕಾರಣಿ ಮಾಜಿ ಸಚಿವರೂ ಆಗಿದ್ದ ಟಿ.ಎ. ಪೈಗಳು ಸಾರ್ವಜನಿಕ ಸಭೆಯೊಂದರಲ್ಲಿ ಜನಸಂಘ ಮತ್ತು ಆರೆಸ್ಸೆಸ್‌ ಕಮ್ಯೂನಲ್‌ ಎಂದು ಆರೋಪಿಸಿದ್ದರು. ಇದನ್ನು ಕೇಳಿ ಬೇಸರವಾಗಿ ನಾನು ಅವರ ಬಳಿ ದಾಖಲೆಗಳನ್ನು ಇಟ್ಟು ಸಂಘವು ಕಮ್ಯೂನಲ್‌ ಅಲ್ಲವೇ ಅಲ್ಲ ಎಂದು ಅವರ ಬಳಿ ಸಂವಾದ ಮಾಡಿದದೆ. ಅದಕ್ಕೆ ಒಪ್ಪಿದ ಅವರು ಯಾವತ್ತೂ ಆರೆಸ್ಸೆಸ್‌ ಮತ್ತು ಜನಸಂಘವನ್ನು ಕಮ್ಯೂನಲ್‌ ಎಂದು ಜರೆಯಲಿಲ್ಲ. ಅಷ್ಟು ಒಳ್ಳೆಯ ರಾಜಕಾರಣ ಆಗ ಇತ್ತು- ಮಟ್ಟಾರ್‌ ವಿಠಲ ಕಿಣಿ

See also  ಬಯಲನ್ನೇ ಆಲಯವಾನ್ನಾಗಿಸಿದ ಸೌತಡ್ಕದ ಗಣಪ: ಏನಿವನ ವಿಶೇಷತೆ?

ಸ್ವಾತಂತ್ರ್ಯ ಹೋರಾಟಗಾರ ೯೪ರ ಹರೆಯದ ಮಟ್ಟಾರ್‌ ವಿಠಲ ಕಿಣಿ ಅವರನ್ನು ಸನ್ಮಾನಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು