ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಡೆಪ್ಯೂಟಿ ಕಮಿಷನರ್ ಡಾ.ಕೆ.ವಿ.ರಾಜೇಂದ್ರ, ಐಎಎಸ್, ಅವರು 16.08.2022 ರಂದು ಭಾರತದ ಸರ್ಕಾರದ ಉದ್ಯಮ ಕೆ ಐ ಓಸಿ ಎಲ್ ಲಿಮಿಟೆಡ್ ನ ಪಣಂಬೂರಿನಲ್ಲಿರುವ ಪೆಲೆಟ್ ಪ್ಲಾಂಟ್ ಘಟಕದಲ್ಲಿನ ಸಂಪನ್ಮೂಲ ಕೇಂದ್ರದಲ್ಲಿ CSR ಕಾರ್ಯ/ಚಟುವಟಿಕೆ ಹಾಗೂ ವಿಪತ್ತು ನಿರ್ವಹಣಾ ಕೈಪಿಡಿ ಅನಾವರಣಕ್ಕೆ ಆಗಮಿಸಿದರು.
ಅವರನ್ನು ಕೆ ಐ ಓಸಿ ಎಲ್ ಆಡಳಿತದ ಪ್ರವೇಶದ್ವಾರದಲ್ಲಿ ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ಅಧ್ಯಕ್ಷ- ಕಮ್- ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಟಿ. ಸಾಮಿನಾಥನ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.
ಆಡಳಿತ ಭವನದಲ್ಲಿ ಅವರಿಗೆ ಪೆಲೆಟ್ ಪ್ಲಾಂಟ್ ಘಟಕದ ಕಾರ್ಯಗಳು ಮತ್ತು ಪ್ರಕ್ರಿಯೆಯನ್ನು ವಿವರಿಸಲಾಯಿತು. ಮಂಗಳೂರಿನ ಪಣಂಬೂರಿನ ಪೆಲೆಟ್ ಪ್ಲಾಂಟ್ ಘಟಕದಲ್ಲಿರುವ ಮುಖ್ಯ ಘಟಕಗಳನ್ನು ಸಹ ಅವರಿಗೆ ತೋರಿಸಲಾಯಿತು. ಸಿಐಎಸ್‌ಎಫ್ (ಅಗ್ನಿಶಾಮಕ) ಸಿಬ್ಬಂದಿಗಾಗಿ ಹೊಸದಾಗಿ ಖರೀದಿಸಲಾದ ಅಗ್ನಿಶಾಮಕ ಟೆಂಡರ್ ವಾಹನಕ್ಕೆ ಹಸಿರು ನಿಶಾನೆ ತೋರಿದರು.
ನಂತರ ಕಂಪನಿಯ ಸಂಪನ್ಮೂಲ ಕೇಂದ್ರದಲ್ಲಿ ಏರ್ಪಡಿಸಲಾದ ಅಧಿಕೃತ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಮುಖ್ಯ ಅತಿಥಿಗಳಾಗಿದ್ದರು. ಮಂಗಳೂರು ನಗರದಲ್ಲಿ ರೆಡ್ ಕ್ರಾಸ್ ಸೊಸೈಟಿಯ ಕಟ್ಟಡ ನಿರ್ಮಾಣಕ್ಕಾಗಿ ರೂ.15.00 ಲಕ್ಷಗಳ ಚೆಕ್ ಹಸ್ತಾಂತರಿಸುವ ಸಂಬಂಧ ಮತ್ತು ವಿಪತ್ತು ನಿರ್ವಹಣಾ ವೃತ್ತಿಪರರಾದ ಶ್ರೀ ವಿಜಯ್ ಕುಮಾರ್ ರವರ ಮಾರ್ಗದರ್ಶನದಂತೆ ಕೆ ಐ ಓಸಿ ಎಲ್ ಲಿಮಿಟೆಡ್ ಸಿದ್ಧಪಡಿಸಿ ಪ್ರಕಟಿಸಿದ ವಿಪತ್ತು ನಿರ್ವಹಣಾ ಕೈಪಿಡಿಯನ್ನು ಅನಾವರಣಗೊಳಿಸುವುದರ ಜೊತೆಗೆ ಕಂಪನಿಯ CSR ಚಟುವಟಿಕೆಗಳ ಅಡಿಯಲ್ಲಿ ಜಿಲ್ಲಾ/ತಾಲೂಕು ಆರೋಗ್ಯ ಕಛೇರಿ, ಮಂಗಳೂರು ಅವರಿಗೆ ಕಂಪ್ಯೂಟರ್‌ಗಳ ಹಸ್ತಾಂತರ ಕಾರ್ಯಕ್ರಮ, ಈ ಸಂದರ್ಭದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷ-ಕಮ್-ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಟಿ.ಸಮಿನಾಥನ್, ನಿರ್ದೇಶಕ ಉತ್ಪಾದನೆ ಹಾಗೂ ಯೋಜನೆಗಳು) ಶ್ರೀ ಕೆ.ವಿ.ಭಾಸ್ಕರ ರೆಡ್ಡಿ, ಕಂಪನಿಯ ಹಿರಿಯ ಅಧಿಕಾರಿಗಳು, ಕಂಪನಿಯ ಒಕ್ಕೂಟಗಳು ಮತ್ತು ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಎಸ್. ಮುರ್ಗೇಶ್, ಸೀನಿಯರ್ ಮ್ಯಾನೇಜರ್ (ಎಚ್ಆರ್ ಮತ್ತು ಸಮನ್ವಯ) ಅವರು ಸ್ವಾಗತಿಸಿ, ಮುಖ್ಯ ಅತಿಥಿಯಾದ ದ.ಕ ಡಿಪ್ಯೂಟೀ ಕಮಿಷನರ್, ಶ್ರೀ ಡಾ.ಕೆ.ವಿ.ರಾಜೇಂದ್ರ ಅವರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ ಅವರ ಮುಂದಿನ ವೃತ್ತಿಜೀವನದಲ್ಲಿ ಯಶಸ್ಸನ್ನು ಹಾರೈಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಕೆ.ವಿ.ರಾಜೇಂದ್ರ, . ಕೆ ಐ ಓಸಿ ಎಲ್ ಮಂಗಳೂರು ಘಟಕದಲ್ಲಿನ ಸೌಲಭ್ಯಗಳ ಬಗ್ಗೆ ಪ್ರಭಾವಿತರಾದೆ ಎಂದು ಹೇಳಿದರು ಹಾಗೂ ಸಮಾಜಕ್ಕೆ ಕಂಪೆನಿಯು ನೀಡುವ ಸಹಾಯ ಹಸ್ತದ ಬಗ್ಗೆ ಶ್ಲಾಘಿಸಿದರು ಮತ್ತು ಕಂಪನಿಯು ಮತ್ತಷ್ಟು ಅಭಿವೃದ್ಧಿ ಹೊಂದಲಿ ಹಾಗೂ ಶೀಘ್ರವಾಗಿ ಉತ್ತುಂಗಕ್ಕೇರಲಿ ಎಂದು ಹಾರೈಸಿದರು.