ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ತುಳು ಭಾಷೆ ಸಂಸ್ಕೃತಿ, ಸಾಹಿತ್ಯದ ಬೆಳವಣಿಗೆಗಾಗಿ ಪ್ರತೀ 3 ತಿಂಗಳಿಗೊಮ್ಮೆ ಪ್ರಕಟಿಸುವ ಮದಿಪು ಸಂಚಿಕೆಯಲ್ಲಿ ಪ್ರಕಟಿಸಲು ತುಳು ಇತಿಹಾಸ, ಸಂಶೋಧನಾ ಲೇಖನಗಳು, ತುಳು ಪುಸ್ತಕ ಪರಿಚಯ, ಮರೆಯಬಾರದ ತುಳು ಮಹನೀಯರು, ತುಳುಕಥೆ/ಕವನ/ಚುಟುಕುಗಳನ್ನು ಆಹ್ವಾನಿಸಲಾಗಿದೆ.
ಹೆಸರು ಮತ್ತು ವಿಳಾಸವಿಲ್ಲದ ಲೇಖನಗಳನ್ನು ಪ್ರಕಟಿಸುವುದಿಲ್ಲ. ಪ್ರಕಟಿತ ಲೇಖನಗಳ ಲೇಖಕರಿಗೆ ಗೌರವ ಸಂಭಾವನೆ ಪಾವತಿಸಲಾಗುವುದು. ಲೇಖಕರು ಲೇಖನಗಳನ್ನು ತಮ್ಮ ಸಂಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಭವನ, ಅಶೋಕನಗರ ಪೋಸ್ಟ್, ಉರ್ವಸ್ಟೋರ್, ಮಂಗಳೂರು ತಾಲೂಕು- 575006 ಈ ವಿಳಾಸಕ್ಕೆ ಅಥವಾ [email protected] ಅಥವಾ ವಾಟ್ಸಾಪ್ ಸಂಖ್ಯೆ: 7411572115 ಇದಕ್ಕೆ ಕಳುಹಿಸಿಕೊಡುವಂತೆ ಅಕಾಡೆಮಿಯ ರಿಜಿಸ್ಟಾçರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Photo credit – Twitter