ಮಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಚುನಾವಣಾ ಆಯೋಗದ ನಿರ್ದೇಶನದಂತೆ ಎಪಿಕ್ ಚುನಾವಣಾ ಗುರುತಿನ ಕಾರ್ಡನ್ನು ಲಿಂಕ್ ಮಾಡುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯವರ ಸಲಹೆಯಂತೆ ಪ್ರತಿಯೊಂದು ಮತ ಕೇಂದ್ರಗಳಲ್ಲಿ ಹೊಸ ಮತದಾರರ ನೊಂದಾವಣಿ ಮತ್ತು 18 ವರ್ಷಕ್ಕೆ ಮೇಲ್ಪಟ್ಟ ಮತದಾರರ ದಾಖಲೆಗಳನ್ನು ಸಂಗ್ರಹಿಸಿ, ನೊಂದಾಯಿಸುವಂತೆ ಸಲಹೆ ನೀಡಲು ಮತ್ತು ಆಧಾರ್ ಕಾರ್ಡ್ ಹೊರತು ಪಡಿಸಿ, ನಿಗದಿಪಡಿಸ್ದಿ ಒಟ್ಟು ಯಾವುದಾದರೂ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಜೋಡಿಸುವ ಪ್ರಕ್ರಿಯೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀ ಐವನ್ ಡಿ ಸೋಜರವರ ನೇತೃತ್ವದಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಚುನಾವಣಾ ವಿಭಾಗದ ಮುಖ್ಯಸ್ಥರಾದ ಶ್ರೀ ವಿಜಯ್ ಕುಮಾರ್ ಇವರನ್ನು ಭೇಟಿ ಮಾಡಿ, ನೊಂದಾವಣೆ, ಲಿಂಕ್ ಮಾಡುವ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು ಮತ್ತು ಉಪಸ್ಥಿತರಿದ್ದ ಕಾಂಗ್ರೆಸ್ ನಾಯಕರುಗಳಾದ ಅಬಿಬುಲ್ಲ, ಭಾಸ್ಕರ್ ರಾವ್, ಅಶಿತ್ ಪಿರೇರಾ, ಅಲಿಸ್ಟನ್ ಡಿ ಕುನ್ಹಾ, ಮೀನಾ ಟೆಲ್ಲಿಸ್, ಜೇಮ್ಸ್ ಪ್ರವೀಣ್, ಸತೀಶ್ ಪೆಂಗಳ್, ಬಾಜಿಲ್ ರೊಡ್ರಿಗಸ್, ತಮ್ಮ ಆಧಾರ್ ಕಾರ್ಡ್ ಮೂಲಕ ನೊಂದಾವಣೆಯ ಲಿಂಕ್ಸ್ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಐವನ್ ಡಿ ಸೋಜ ಇವರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಯೊಂದು ಬೂತ್ ಮಟ್ಟದಲ್ಲಿ ಮತದಾರರ ನೊಂದಾವಣಿ ಮತ್ತು ಎಪಿಕ್ ಕಾರ್ಡಿಗೆ ಆಧಾರ್ ನಂಬ್ರವನ್ನು ಲಿಂಕ್ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಅಲ್ಲದೆ, ನಾಲ್ಕು ಕಡೆಗಳಲ್ಲಿ ನೊಂದಾವಣೆ ಮತ್ತು ಲಿಂಕ್ , ಸೇರ್ಪಡೆ ಮತ್ತು ಮೃತಪಟ್ಟವರ ಹೆಸರುಗಳನ್ನು ತೆಗೆದುಹಾಕುವ ಕಾರ್ಯಗಳಿಗೆ ಖಾಯಂ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಅಲ್ಲದೆ, ಆಧಾರ್( ಎಪಿಕ್) ಕಾರ್ಡಿಗೆ ಆಧಾರ್ ಲಿಂಕ್ ಮಾಡುವ ಬಗ್ಗೆ ಮಾಹಿತಿಯುಳ್ಳ ಕರಪತ್ರಗಳನ್ನು ಮಾಡಿ ಪ್ರತಿ ವಾರ್ಡಿಗೆ ಹಂಚಲು ಕ್ರಮ ಕೈಗೊಳ್ಳುವುದಾಗಿ ಶ್ರೀ ಐವನ್ ಡಿ ಸೋಜರವರು ತಿಳಿಸಿದ್ದಾರೆ.