ಮಂಗಳೂರು: ಮಂಗಳೂರು ನಗರದ ಬೋಳೂರಿನ ಅಯ್ಯಪ್ಪ ದೇವಸ್ಥಾನದ ಬಳಿಯಿರುವ ಅಂಗಡಿಯಲ್ಲಿ ಚಾರ್ಜ್ ಗಿಟ್ಟಂತಹ ಎಲೆಕ್ಟ್ರಿಕ್ ಸ್ಕೂಟರುಗಳು ಸ್ಪೋಟಗೊಂಡು ಬೆಂಕಿಗಾಹುತಿಯಾಗಿದ್ದು, ಬದಿಯಲ್ಲಿರುವ ಮಿಲ್ಕ್ ಬೂತಿಗೂ ಹಾನಿಯಾಗಿದೆ.
ಸುಮಾರು 4ಲಕ್ಷಕ್ಕೂ ಅಧಿಕ ನಷ್ಟವುಂಟಾಗಿದ್ದು, ಈ ಸ್ಥಳಕ್ಕೆ ಮಾಜಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜರವರು ಭೇಟಿ ನೀಡಿ ಪೋಲಿಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ, ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳು ಚಾರ್ಚ್ ಗಿಟ್ಟಲ್ಲಿಯೇ ಬೆಂಕಿಗೆ ಆಹುತಿಯಾಗುವುದರ ಬಗ್ಗೆ ಸೂಕ್ತವಾದ ತನಿಖೆ ನಡೆಸಬೇಕು ಮತ್ತು ಈ ಬಗ್ಗೆ ತಾಂತ್ರಿಕ ಪರಿಣತರು ಇದರ ಮೂಲವನ್ನು ಕಂಡುಹಿಡಿಯಬೇಕೆಂದು ಜಿಲ್ಲಾಧಿಕಾರಿಯವರಿಗೆ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ನಾಯಕರುಗಳಾದ ಶ್ರೀಕಾಂತ್ ಪೂಜಾರಿ ಮತ್ತು ಇತರರು ಉಪಸ್ಥಿತರಿದ್ದರು .