ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 2ರಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಪಣಂಬೂರಿನ ಎನ್ ಎಂಪಿಟಿ ಯಲ್ಲಿ ಹೊಸದಾಗಿ ಬರ್ತ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸುವುದಕ್ಕಾಗಿ ಮೋದಿ ಆಗಮಿಸುತ್ತಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಆದರೆ ಅಂದು ಸಂಜೆ 4ಗಂಟೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ ಅಲ್ಲಿಂದ ನೇರವಾಗಿ ಎನ್ ಎಂಪಿಟಿ ತೆರಳಲಿದ್ದಾರೆ . ಅಲ್ಲಿ ನಿಗದಿಯಾದ ಸರಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಬಿಜೆಪಿ ವತಿಯಿಂದ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಬಿಜೆಪಿ ಮೂಲಗಳು ಹೇಳುತ್ತಿವೆ.
ಚುನಾವಣೆ ಕಾಲದಲ್ಲಿ ಮೋದಿ ಬರುತ್ತಿರುವುದರಿಂದ ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ನಡೆಸುವುದಕ್ಕೂ ತಯಾರಿ ನಡೆದಿದೆ ಆದರೆ ಸೆಪ್ಟಂಬರ್ ಎರಡರಂದು ಪ್ರಧಾನಿ ಮೋದಿಯವರು ಕೊಚ್ಚಿಗೆ ಬರಲಿದ್ದಾರೆ ಕೊಚ್ಚಿ ನೌಕಾನೆಲೆಯಲ್ಲಿ ಐಎನ್ ಎಸ್ ವಿಕ್ರಾಂತ್ ಯುದ್ಧ ನೌಕೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮ ಫಿಕ್ಸ್ ಆಗಿದೆ, 4ಬಾರಿ ಟ್ರಯಲ್ ಆಗಿರುವ ಯುದ್ಧನೌಕೆ ಭಾರತದ ನೌಕಾಪಡೆ ಪಾಲಿಗೆ ಅತ್ಯಂತ ಮಹತ್ವದ್ದು ಇಪ್ಪತ್ತು ಸಾವಿರ ಕೋಟಿ ರೂ ವೆಚ್ಚದಲ್ಲಿ ತಯಾರಾಗಿದ್ದು ಭಾರತದ ಮೊದಲ ಸ್ವದೇಶಿ ನಿರ್ಮಿತ ಏರ್ ಕ್ರಾಫ್ಟ್ ಹೊತ್ತೊಯ್ಯ ಬಲ್ಲ ಯುದ್ಧ ನೌಕೆಯೂ ಆಗಿದೆ .
ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರು ಸೇರಿದಂತೆ ಸೇನಾ ಪ್ರಮುಖರು ರಾಜ್ಯ ಸರ್ಕಾರದ ಪ್ರಮುಖರು ಭಾಗವಹಿಸ ಲಿದ್ದಾರೆ ಪ್ರಧಾನಿ ಕೊಚ್ಚಿಗೆ ಬರುವುದು ಫೈನಲ್ ಆಗಿರುವುದರಿಂದ ಅದೇ ಸಂದರ್ಭದಲ್ಲಿ ಮಂಗಳೂರಿಗೂ ಕರೆಸುವ ಸನ್ನಾಹದಲ್ಲಿ ಕರ್ನಾಟಕದ ಬಿಜೆಪಿ ನಾಯಕರಿದ್ದಾರೆ. ಆದರೆ ಕೋಮು ಸಂಘರ್ಷದ ಕರಾಳ ಛಾಯೆ ಮತ್ತು ಸೆಪ್ಟೆಂಬರ್ ಮೊದಲ ವಾರ ಕರಾವಳಿಯಲ್ಲಿ ಗಣೇಶೋತ್ಸವದ ಸಡಗರ ಇರುವುದರಿಂದ ಅತಿ ಗಣ್ಯ ವ್ಯಕ್ತಿ ಆಗಮನಕ್ಕೆ ಸೆಕ್ಯುರಿಟಿ ಕ್ಲಿಯರೆನ್ಸ್ ಸಿಗುತ್ತಾ ಅನ್ನೋದು ಇನ್ನೂ ದೃಡಪಟ್ಟಿಲ್ಲ .ಪ್ರಧಾನಿ ಕಾರ್ಯಕ್ರಮ ಹಾಗೂ ಆಗುವುದಿದ್ದರೆ ಹದಿನೈದು ದಿನಗಳ ಮೊದಲೇ ಎನ್ ಎಸ್ ಜಿ ಪಡೆ ಗಳು ಬಂದು ಸೆಕ್ಯುರಿಟಿ ಚೆಕ್ ಮಾಡಿ ಹೋಗುತ್ತಾರೆ ದಿಢೀರಾಗಿ ಕಾರ್ಯಕ್ರಮ ಏರ್ಪಡಿಸುವುದಿಲ್ಲ.