ಬಂಟ್ವಾಳ: ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ವತಿಯಿಂದ ಮಾಜಿ ಸಚಿವರಾದ ಬಿ . ರಮಾನಾಥ ರೈಯವರ ನೇತೃತ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ 75 ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯನ್ನು ವೈಭವ ಪೂರ್ಣವಾಗಿ ಆಚರಿಸುವ ಸಲುವಾಗಿ ಸ್ವಾತಂತ್ರ್ಯ ಸಂಗ್ರಾಮದ ವೀರ ಯೋಧರ ತ್ಯಾಗ ಬಲಿದಾನ ಮತ್ತು ದೇಶಕ್ಕೆ ಶಾಂತಿ ಸಾಮರಸ್ಯ ಸಾರುವ ನಿಟ್ಟಿನಲ್ಲಿ ಮಣಿಹಳ್ಳ ದಿಂದ ಮೆಲ್ಕರ್, ಬಿ. ಸಿ ರೋಡ್, ಕೈಕಂಬ ಕಾಲ್ನಡಿಗೆ ಜಾಥ ನಡೆಸಿದರು.
ಅವರು ಮಂಗಳವಾರ ಮಣಿಹಳ್ಳ ಜಂಕ್ಷನ್‌ನಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಹಮ್ಮಿಕೊಂಡ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ೭೫ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ ಹಿರಿಯರು ಮಾಡಿದ ತ್ಯಾಗ ಬಲಿದಾನಗಳಿಂದ ಓದುವ ಸ್ವಾತಂತ್ರ್ಯ, ನಮಗೆ ಕನಸು ಕಾಣುವ ಅವಕಾಶ ಸ್ವಾತಂತ್ರ್ಯ ಕೊಟ್ಟಿದೆ. ಸ್ವಾತಂತ್ರ್ಯ ಹೋರಾಟಕ್ಕೆ ನೆಹರೂ, ಗಾಂಧೀಜಿ ಮಾತ್ರವಲ್ಲದೇ ಬಂಟ್ವಾಳದಿಂದ ಅಮ್ಮೆಂಬಳ ಬಾಳಪ್ಪ, ಅಮ್ಮು ಶೆಟ್ಟಿ ಬಂಟ್ವಾಳ, ಕೇಶವ ಬಾಳಿಗ, ಮಾಧವ ಪೈ, ಮಾಧವ ಶೆಣೈ, ಗೋಪಾಲ ಬಾಳಿಗ, ಕೃಷ್ಣ ಪೈ, ಸುಬ್ರಾಯ ಪೈ, ಲಕ್ಷ್ಮೀನಾರಾಯಣ ಕಿಣಿ, ಮಹಮ್ಮದ್ ಹುಸೈನ್ ಕೊಳ್ನಾಡು, ಮಾಧವ ಶೆಣೈ, ಬೆಳ್ಳಿಪ್ಪಾಡಿ ಮನೆತನದ ವೆಂಕಪ್ಪ ರೈ, ಅವರ ತಮ್ಮ ತಿಮ್ಮಪ್ಪ ರೈ, ಅವರ ಮಡದಿ ಲಕ್ಷ್ಮೀ ರೈ, ಮಕ್ಕಳಾದ ರಘುನಾಥ ರೈ, ಜಗನ್ನಾಥ ರೈ ಇಂತಹಾ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ನಮ್ಮ ಊರಿನಿಂದ ಹೋರಾಟ ಮಾಡಿದವರು ಎಂದು ತಿಳಿಸಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ ದೇಶ ಪ್ರೇಮಿಗಳು ಯಾರೂ ರಾಷ್ಟ್ರಧ್ವಜವನ್ನು ಕಾಟಾಚಾರಕ್ಕೆ ಆಚರಿಸುವುದಿಲ್ಲ. ಮಹತ್ಮಾ ಗಾಂಧೀಜಿಯನ್ನು ಹತ್ಯೆ ಮಾಡಿದವರನ್ನು ನಾವು ಎಂದಿಗೂ ಹತ್ತಿರ ಸೇರಿಸುವುದಿಲ್ಲ. ಆದರೆ ಮಹಾತ್ಮರನ್ನೆ ಹತ್ಯೆ ಮಾಡಿದವರ ಭಾವಚಿತ್ರವನ್ನು ಬಳಸುವವರೂ ಈಗ ಇದ್ದಾರೆ. ಮಹಾತ್ಮಾ ಗಾಂಧಿಯವರನ್ನು ಹತ್ಯೆ ಮಾಡಿದವರಿಗೆ ಬುದ್ದಿ ಹೇಳುವವರು ನಾವು ಹೇಳುವವರಲ್ಲ. ನಾವು ಸ್ವಾತಂತ್ರ್ಯ ಸಂಗ್ರಾಮದ ವೀರ ಯೋಧರ ತ್ಯಾಗ ಬಲಿದಾನ ಮತ್ತು ದೇಶಕ್ಕೆ ಶಾಂತಿ ಸಾಮರಸ್ಯ ಸಾರುವ ನಿಟ್ಟಿನಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ದಕ್ಷಿಣ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ಈ ದೇಶಕ್ಕೆ ಕೊಡುವ ಗೌರವ ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಸ್ವಾತಂತ್ರ್ಯ ಸಿಗುವ ಸಂದರ್ಭದಲ್ಲಿ ನಮಗೆ ಹೋರಾಡುವ ಭಾಗ್ಯ ಇರಲಿಲ್ಲ. ಆದರೆ ಈಗ ನಮಗೆ ೭೫ನೇ ವರ್ಷದ ಸ್ವಾತಂತ್ರ್ಯ ಸಂದರ್ಭದಲ್ಲಿ ರಾಷ್ಟ್ರ ಧ್ವಜವನ್ನು ಗೌರವಯುತವಾಗಿ ಹಿಡಿದು ಕಾಲ್ನಡಿಗೆಯಲ್ಲಿ ಹೋಗುವ ಯೋಗ ಕೂಡಿ ಬಂದಿದೆ ಎಂದು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಮ್, ಡಿ.ಎಸ್.ಮಮತಾ ಗಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ಯಾಲೆಟ್ ಪಿಂಟೋ, ಜಿ.ಪಂ.ಮಾಜಿ ಸದಸ್ಯರಾದ ಎಂ.ಎಸ್.ಮಹಮ್ಮದ್, ಬಿ.ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್‌ಕುಮಾರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಸಹಕಾರಿ ಘಟಕದ ಸಂಚಾಲಕ ಸುದರ್ಶನ್ ಜೈನ್, ತಾ.ಪಂ.ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ಪೂಜಾರಿ, ಲವಿನಾ ವಿಲ್ಮಾ ಮೊರಾಸ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಜೋರಾ, ಇಬ್ರಾಹಿಂ ನವಾಜ್, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕಲ್ಮಂಜ, ಪ್ರಮುಖರಾದ ಮಲ್ಲಿಕಾ ವಿ.ಶೆಟ್ಟಿ, ಸಂಪತ್‌ಕುಮಾರ್ ಶೆಟ್ಟಿ, ದಯಾನಂದ ಶೆಟ್ಟಿ ಅಮೈ, ವೆಂಕಪ್ಪ ಪೂಜಾರಿ, ದೇವಪ್ಪ ಕುಲಾಲ್ ಪಂಜಿಕಲ್ಲು, ಮಹಮ್ಮದ್ ನಂದರಬೆಟ್ಟು, ಸದಾಶಿವ ಬಂಗೇರ, ಜನಾರ್ದನ ಚಂಡ್ತಿಮಾರ್, ಮಹಮ್ಮದ್ ನಂದಾವರ, ಮಧುಸೂದನ್ ಶೆಣೈ, ಸುಭಾಶ್ಚಂದ್ರ ಶೆಟ್ಟಿ ಕುಲಾಲ್, ರೋಶನ್ ರೈ, ಚಂದ್ರಶೇಖರ ಪೂಜಾರಿ, ಜಗದೀಶ್ ಕೊಯಿಲ, ವಾಸು ಪೂಜಾರಿ ಮೊದಲಾದವರಿದ್ದರು.