ಬೆಳ್ತಂಗಡಿ: ಎಂಡೋ ಪೀಡಿತ ಯುವತಿ ಕುವೆಟ್ಟು ಗ್ರಾಮದ ಯರ್ಡೂರು ನಿವಾಸಿ ರೇಷ್ಮಾ (27) ಅವರು ಅಲ್ಪ ಕಾಲದ ಅಸೌಖ್ಯದಿಂದ ಆ.21 ರಂದು ಕೊನೆಯುಸಿರೆಳೆದಿದ್ದಾರೆ.
ವಿಜಯ ಕುಮಾರ್ ಮತ್ತು ಸುಜಾತಾ ದಂಪತಿ ಪುತ್ರಿಯಾಗಿರುವ ರೇಷ್ಮಾ ಅವರು ಎಂಡೋ ಪೀಡಿತೆಯಾಗಿ ದೀರ್ಘ ವರ್ಷಗಳಿಂದ ಚಾಪೆ ಹಿಡಿದು ಮಲಗಿದ್ದರು. ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಲಾಯಿಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ತಂದೆ, ತಾಯಿ ಮಾತ್ರವಲ್ಲದೆ ಇಬ್ಬರು ಸಹೋದರಿಯರಾದ ರಮ್ಯಾ ಮತ್ತು ರಶ್ಮಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.