ಬೆಳ್ತಂಗಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ನಡೆದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ‘ಶೈನ್ ಆನ್ ಯೋಗ’ ತಂಡದ ವಿದ್ಯಾರ್ಥಿಗಳು ಸಾಧನೆ ತೋರಿದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಾದ ರಕ್ಷಾ 8 ನೇ ತರಗತಿ ಸರಕಾರಿ ಪ್ರೌಢ ಶಾಲೆ ಕಲ್ಮಂಜ ಪ್ರಥಮ, ಸ್ನೇಹಾ 8 ನೇ ತರಗತಿ ಸರಕಾರಿ ಪ್ರೌಢ ಶಾಲೆ ಕಲ್ಮಂಜ ಪ್ರಥಮ, ಮನ್ವಿತ್ 7 ನೇ ತರಗತಿ ಸರಸ್ವತಿ ಅಂಗ್ಲ ಮಾಧ್ಯಮ ಶಾಲೆ ಮುಂಡಾಜೆ ಪ್ರಥಮ, ದೀಪಾ 6 ನೇ ತರಗತಿ ಸ.ಹಿ.ಪ್ರಾ. ಶಾಲೆ ಕಲ್ಮಂಜ ಪ್ರಥಮ, ಆತ್ಮಿ 10 ನೇ ತರಗತಿ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆ ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರಿಗೆ ಉಜಿರೆ ಎಸ್‌ಡಿಎಂ ಹಿ.ಪ್ರಾ ಶಾಲೆ ಇಲ್ಲಿನ ದೈಹಿಕ ಶಿಕ್ಷಣ ಹಾಗೂ ಯೋಗ ತರಬೇತುದಾರರಾದ ಶೀನ ಅವರು ತರಬೇತಿ ನೀಡಿರುತ್ತಾರೆ.