News Kannada
Sunday, October 01 2023
ಮಂಗಳೂರು

ಬಂಟ್ವಾಳ: ಆ.31-ಸೆ.4ರ ವರೆಗೆ 19ನೇ ವರ್ಷದ ಸಾರ್ವಜನಿಕ  ಶ್ರೀ ಗಣೇಶೋತ್ಸವ ಆಚರಣೆ

Janaspandana Sabha at Keravadi, lays foundation stone for works worth Rs 2 crore
Photo Credit :

ಬಂಟ್ವಾಳ: ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟುವಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವವು ಈ ಬಾರಿ ಆಗಸ್ಟ್ 31ರಿಂದ ಸೆಪ್ಟೆಂಬರ್ 4ರವರೆಗೆ 5 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ  ನಡೆಯಲಿದೆ ಎಂದು ಮಾಜಿ ಸಚಿವ, ಸಮಿತಿ ಗೌರವಾಧ್ಯಕ್ಷ  ಬಿ.ರಮಾನಾಥ ರೈ ಅವರು ಹೇಳಿದರು.

ಅವರು ರವಿವಾರ ಬಿ.ಸಿ.ರೋಡ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಕ್ರಿಬೆಟ್ಟುವಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮಿಲನದೊಂದಿಗೆ ಸರ್ವಧರ್ಮದ ಭಗವದ್ಭಕ್ತರ ಸೇವಾ ಮನೋಭಾವದೊಂದಿಗೆ ಅರ್ಥಪೂರ್ಣವಾಗಿ ಮತ್ತು ವೈಭವಯುತವಾಗಿ ಆಚರಿಸಿಕೊಂಡು ಬರುತ್ತಿದ್ದು ಐದು ದಿನಗಳ ಸಂಭ್ರಮಾಚರಣೆಯ ಗಣೇಶೋತ್ಸವ ಜಿಲ್ಲೆ, ರಾಜ್ಯದ ಭಕ್ತಾಭಿಮಾನಿಗಳ ಮನಸೂರೆಗೊಂಡು 19ನೇ ವರ್ಷಕ್ಕೆ ಕಾಲಿರಿಸಿದೆ.

ಜಕ್ರಿಬೆಟ್ಟು  ಶ್ರೀ ಗಣೇಶೋತ್ಸವವು ಒಂದು ಜಾತಿ ಮತ ಧರ್ಮಕ್ಕೆ ಸೀಮಿತವಾಗದೆ ಎಲ್ಲರೂ ಒಂದಾಗಿ ಬೆಸೆಯುವ, ಬೆರೆಯುವ ಸೌಹಾರ್ಧತೆಯ ಸಮ್ಮೇಳನವಾಗಿ ರೂಪುಗೊಂಡು ಬಂಟ್ವಾಳದ ಹಬ್ಬವಾಗಿ ಆಚರಿಸಲ್ಪಡುತ್ತದೆ ಎಂದರು.

ಶ್ರೀ ಗಣೇಶೋತ್ಸವದಲ್ಲಿ ಧಾರ್ಮಿಕ ಸಭೆಗಳಲ್ಲಿ ಶ್ರೀ ಕ್ಷೇತ್ರ ಒಡಿಯೂರು   ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಕ್ಷೇತ್ರ ಕನ್ಯಾಡಿಯ   ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಬಲ್ಯೊಟ್ಟು ಗುರುಕೃಪ ಸೇವಾಶ್ರಮದ   ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲ ಕ್ಷೇತ್ರದ   ಶ್ರೀ ಮೋಹನದಾಸ ಸ್ವಾಮೀಜಿ, ಮೊಡಂಕಾಪು ಚರ್ಚ್ ಧರ್ಮಗುರುಗಳಾದ ರೆ| ಫಾ| ವಲೇರಿಯನ್ ಡಿಸೋಜ ಮೊದಲಾದ ಧಾರ್ಮಿಕ ನೇತಾರರು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿರುವರು.

ದಿನನಿತ್ಯ ಅನ್ನಸಂತರ್ಪಣೆ, ಮಹಿಳೆಯರಿಗೆ ವಿಶೇಷ ಕುಂಕುಮಾರ್ಚನೆ ಸೇವೆ, ಮಕ್ಕಳು, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ವಿಭಾಗದ ಸ್ಪರ್ಧೆಗಳು ನಡೆಯಲಿದೆ. ಪ್ರತಿದಿನ ಧಾರ್ಮಿಕ ಪ್ರವಚನಗಳು, ಭಜನೆ, ತುಳು ನಾಟಕಗಳ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಮೆರುಗು ನೀಡಲಿದೆ.  ೫ನೇ ದಿನ ಶ್ರೀ ಗಣೇಶ ಮೂರ್ತಿಯ ಶೋಭಾ ಯಾತ್ರೆಯು ವಿವಿಧ ಜಿಲ್ಲೆಗಳ ಕಲಾ ತಂಡಗಳು, ಸ್ತಬ್ದ ಚಿತ್ರಗಳೊಂದಿಗೆ ವೈಭವಯುತವಾಗಿ ನಡೆಯಲಿದೆ ಎಂದರು.

ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಪದಾಧಿಕಾರಿಗಳಾದ ಚಂದ್ರಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ರಾಜೀವ ಶೆಟ್ಟಿ ಎಡ್ತೂರ್, ಪದ್ಮನಾಭ ರೈ,ಸುದೀಪ್ ಕುಮಾರ್ ಶೆಟ್ಟಿ, ಮಹಾಬಲ ಬಂಗೇರ,ಜನಾರ್ದನ ಚಂಡ್ತಿಮಾರ್,  ಸುಭಾಶ್ಚಂದ್ರ ಶೆಟ್ಟಿ, ರಾಜೀವ ಕಕ್ಯಪದವು, ಸುಧಾಕರ ಶೆಣೈ, ಪ್ರವೀಣ್ ಬಿ., ಜಯಂತಿ, ಮಲ್ಲಿಕಾ ಶೆಟ್ಟಿ, ಲೋಲಾಕ್ಷ ಶೆಟ್ಟಿ, ಶಬೀರ್ ಸಿದ್ದಕಟ್ಟೆ, ಪದ್ಮನಾಭ ಸಾಮಂತ್, ವೆಂಕಪ್ಪ ಪೂಜಾರಿ, ಚಂದ್ರಶೇಖರ ಶೆಟ್ಟಿ,ಉಮೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

See also  ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು