News Kannada
Tuesday, September 27 2022

ಮಂಗಳೂರು

ಉಜಿರೆ: ಲಯನ್ಸ್ ಪ್ರಾಂತೀಯ ಸಮ್ಮೇಳನ ಬೆಳ್ಳಿ ಸವಿನೆನಪಿಗಾಗಿ ಕೊಡುಗೆಗಳ ಲೋಕಾರ್ಪಣೆ - 1 min read

Lions Provincial Conference launches contributions to commemorate the silver jubilee
Photo Credit : By Author

ಉಜಿರೆ: ಸಮಾಜಕ್ಕೆ ಅಗತ್ಯ ಬೇಕಾಗಿರುವ ಶಾಶ್ವತ ಕೊಡುಗೆಗಳನ್ನು ಗುರುತಿಸಿ  ನೆರವಾಗುವುದರಿಂದ  ಸೇವೆಗೆ ವಿಶೇಷ ಅರ್ಥ ಬರುತ್ತದೆ. ಸಮಾಜದ ನಿರೀಕ್ಷೆ ಬಹಳಷ್ಟಿದೆ. ಆದರೆ  ಸಮಾಜಮುಖಿ ಅಗತ್ಯ ಕಾರ್ಯಗಳಲ್ಲಿ ಸ್ಪಂದಿಸಿ ಶಾಶ್ವತ ಕೊಡುಗೆಗಳನ್ನು ಸ್ಥಳೀಯರ ಸಹಕಾರದಿಂದ ಒದಗಿಸಿದರೆ ನಮ್ಮ  ಶ್ರಮದ ಸೇವೆ ಸಾರ್ಥಕವಾಗುವುದು ಎಂದು ಲಯನ್ಸ್ ಮಲ್ಟಿಪಲ್ ಡಿಸ್ಟ್ರಿಕ್ಟ್ ಛೇರ್ಮನ್ ವಸಂತಕುಮಾರ್ ಶೆಟ್ಟಿ ನುಡಿದರು.

ಅವರು  ಅ.29 ರಂದು ಉಜಿರೆ ಗ್ರಾಮ ಪಂಚಾಯತ್ ಸುವರ್ಣ ಸೌಧದಲ್ಲಿ  ಬೆಳ್ತಂಗಡಿ ಲಯನ್ಸ್ ಕ್ಲಬ್ ಪ್ರಾಂತೀಯ ಸಮ್ಮೇಳನ “ಬೆಳ್ಳಿ ‘ ಸವಿನೆನಪಿಗಾಗಿ  ಉಜಿರೆಯಲ್ಲಿ ಶಾಶ್ವತ ಕೊಡುಗೆಗಳ ಲೋಕಾರ್ಪಣೆ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಅವರು ರೂ  4.50ಲಕ್ಷ ವೆಚ್ಚದಲ್ಲಿ  ರೂ 2 ಲಕ್ಷ  ಲಯನ್ಸ್ ಕೊಡುಗೆಯಿಂದ  ನಿರ್ಮಿಸಲಾ ದ  ಅಮೃತ ಉದ್ಯಾನವನ ವನ್ನು  ಉಜಿರೆ ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಿದರು.  ಬೆಳ್ತಂಗಡಿ ಕ್ಷೇತ್ರ ಸಂಪನ್ಮೂಲ ಕೇಂದ್ರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯನ್ನು ಉದ್ಘಾಟಿಸಿದ  ದ್ವಿತೀಯ ಉಪರಾಜ್ಯಪಾಲೆ ಬಿ.ಎಂ.ಭಾರತಿ  ಅವರು  ಲಯನ್ಸ್ ಒದಗಿಸಿದ ಅಮೃತ ಉದ್ಯಾನವನ ಹಾಗು ಕುಡಿಯುವ  ನೀರಿನ ವ್ಯವಸ್ಥೆಯನ್ನು ಸಾರ್ವಜನಿಕರು  ಪೂರ್ಣ  ಪ್ರಯೋಜನ ಪಡೆದು ಸದುಪಯೋಗಗೊಳಿಸುವಂತೆ  ವಿನಂತಿಸಿಕೊಂಡರು.

ಇದೆ ಸಂದರ್ಭದಲ್ಲಿ ಲಯನ್ಸ್”ಬೆಳ್ಳಿ” ಪ್ರಾಂತೀಯ ಸಮ್ಮೇಳನದ ಸವಿನೆನಪಿಗಾಗಿ ಹೊರತರಲಾದ “ಅಧೀಶ “ಸ್ಮರಣ ಸಂಚಿಕೆ 2022 ನ್ನು ಬಿಡುಗಡೆ ಗೊಳಿಸಿ  ಬೆಳ್ತಂಗಡಿ ಲಯನ್ಸ್ ಕ್ಲಬ್ ನ  ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ ಅಭಿನಂದಿಸಿದರು. ಕಳೆದ ವರ್ಷದ ಪ್ರಾಂತ್ಯಾಧ್ಯ ಕ್ಷ ಧರಣೇಂದ್ರ ಕೆ. ಜೈನ್ ಅಧ್ಯಕ್ಷತೆ ವಹಿಸಿ  ಸಹಕರಿಸಿದ ಸರ್ವರನ್ನು ಕೃತಜ್ಞತೆಯಿಂದ ಸ್ಮರಿಸಿ  ಕಾರ್ಯಕ್ರಮ ನಿರ್ವಹಿಸಿದರು. ಸ್ಮರಣ ಸಂಚಿಕೆ ಸಂಪಾದಕ ವಿನ್ಸೆಂಟ್ ಟಿ.ಡಿಸೋಜಾ ಪರವಾಗಿ ಸಹಸಂಪಾದಕ ಅಶ್ರಫ್ ಆಲಿ ಕುಞ  ಸಂಚಿಕೆ ಕುರಿತು ಪ್ರಸ್ತಾವಿಸಿದರು.

ವೇದಿಕೆಯಲ್ಲಿ ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ ,ಉಪಾಧ್ಯಕ್ಷ ರವಿಕುಮಾರ್ ಬರಮೇಲು ,ಲಯನ್ಸ್ ಅಧ್ಯಕ್ಷ ದೇವಿಪ್ರಸಾದ್            ಬೊಲ್ಮ ,ದ.ಕ .ಟ್ರಕ್ ಮಾಲಕರ ಸಂಘದ ಅಧ್ಯಕ್ಷ ಸುನಿಲ್ ಡಿಸೋಜಾ ,ಜೇಮ್ಸ್ ಮೆಂಡನ್,ವಸಂತ ಶೆಟ್ಟಿ ಶ್ರದ್ಧಾ, ಕಿರಣಕುಮಾರ್ ಶೆಟ್ಟಿ ,ನಿತ್ಯಾನಂದ  ನಾವರ , ಮೊದಲಾದವರು ಉಪಸ್ಥಿತರಿದ್ದರು .ಪ್ರಾಂತೀಯ ಸಮ್ಮೇಳನದ ಅಧ್ಯಕ್ಷ  ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿ,ಕೋಶಾಧಿಕಾರಿ ರಾಜು ಶೆಟ್ಟಿ ವಂದಿಸಿದರು.

See also  ನವದೆಹಲಿ: ದ್ವಿಪಕ್ಷೀಯ ಬಾಂಧವ್ಯದ ಬಗ್ಗೆ ಸಂವಾದ ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು