ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಆ.30 ರಂದು ಬೆಳಿಗ್ಗೆ ಅರ್ಚಕ ವೇದಮೂರ್ತಿ ರಾಮಚಂದ್ರ ಹೊಳ್ಳರು ಧಾರ್ಮಿಕ ವಿಧಿಗಳೊಂದಿಗೆ ಶ್ರೀ ಜನಾರ್ದನ ಸ್ವಾಮಿ ಹಾಗು ಪರಿವಾರ ದೇವರ ಸನ್ನಿಧಿಯಲ್ಲಿ ಹೊಸ ಭತ್ತದ ತೆನೆ (ಕೊರಲ್)ಸಮರ್ಪಿಸಲಾಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರರ ಪರವಾಗಿ ಶರತ್ ಕೃಷ್ಣ ಪಡುವೆಟ್ನಾಯರು ಊರ ಭಕ್ತಬಂಧುಗಳಿಗೆ ಸರತಿ ಸಾಲಿನಲ್ಲಿ ತೆನೆ (ಕೊರಲ್ ) ವಿತರಿಸಿದರು. ಮದ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ಹಾಗೂ ನವಾನ್ನ ಪ್ರಾಶನ ನಡೆಯಿತು . .