ಬೆಳ್ತಂಗಡಿ: ತಾಲೂಕಿನ ಕೊಕ್ಕಡ ಗ್ರಾಮದ ಅಗರ್ತ ಎಂಬಲ್ಲಿ ಮಹಿಳೆಯೋರ್ವಳು ಅಸಹಜವಾಗಿ ಮೃತಪಟ್ಟ ಘಟನೆ ಇಂದು ಆ.30ರಂದು ನಡೆದಿದೆ.
ಕೊಕ್ಕಡ ಗ್ರಾಮದ ಅಗರ್ತ ನಿವಾಸಿ ಗಣೇಶ್ ಎಂಬವರ ಪತ್ನಿ ಮೋಹಿನಿ(35) ಮೃತಪಟ್ಟವರು ಮೂಲತಃ ಶನಿವಾರ ಸಂತೆಯ ನಿವಾಸಿಯಾಗಿದ್ದ ಗಣೇಶರವರು ಕೊಲ್ಲಮೊಗೇರು ನಿವಾಸಿ ಮೋಹಿನಿ ಎಂಬುವರನ್ನು ಮದುವೆಯಾಗಿದ್ದು, ಕಳೆದ ಸುಮಾರು 8 ವರುಷದಿಂದೀಚೆಗೆ ಕೊಕ್ಕಡ ಸಮೀಪದ ಅಗರ್ತ ಎಂಬಲ್ಲಿ ಮನೆ ನಿರ್ಮಿಸಿ ವಾಸವಾಗಿದ್ದರು. ವೃತ್ತಿಯಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದಾರೆ.
ಪತಿ ಹಾಗೂ ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಹಾಗೂ ಮೃತ ಮಹಿಳೆ ಪಾರ್ಶ್ವವಾಯು ಮತ್ತು ಮೂರ್ಛೆ ರೋಗದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.