ಮಂಗಳೂರು, ಅ.30: ಸೆಪ್ಟೆಂಬರ್ ಎರಡನೇ ತಾರೀಕಿನಂದು ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಸರಕಾರಿ ಆದೇಶ ಹೊರಡಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಅನಗತ್ಯ ವಿವಾದವನ್ನು ಉಂಟು ಮಾಡುವ ಹೊಸ ಸಂಪ್ರದಾಯವೊಂಂದನ್ನು ಹುಟ್ಟುಹಾಕಿದ್ದಾರೆ. ಆಗಸ್ಟ್ 31 ರಂದು ಗಣೇಶ್ ಚತುರ್ಧಶಿಗೆ ಸರಕಾರಿ ರಜೆ ಇದ್ದರೂ ಪುನಃ ಸೆಪ್ಟೆಂಬರ್ ಎರಡರಂದು ಗಣಪತಿ ವಿಸರ್ಜನೆ ಹೆಸರಿನಲ್ಲಿ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ನೀಡಿರುವುದು ಪ್ರಧಾನಿ ಮೋದಿ ಸಭೆಗೆ ಜನ ಸೇರಿಸಲು ನಡೆಸಿದ ಷಡ್ಯತ್ರದ ಭಾಗವಾಗಿದೆ ಎಂದು ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಆರೋಪಿಸಿದ್ದಾರೆ.
ಗಣಪತಿಯನ್ನು ವಿಸರ್ಜನೆ ಮಾಡಲು ನಿರ್ಧಿಷ್ಟ ದಿನ ಎಂಬುದಿಲ್ಲ ಗಣೇಶ ಚತುರ್ಥಿ ಆರಂಭಗೊಂಡ ಅಂದಿನಿಂದ ಸುಮಾರು ಹತ್ತು ದಿನಗಳ ಕಾಲ ಬೇರೆ ಬೇರೆ ದಿನಗಳಲ್ಲಿ ಅದನ್ನು ವಿಸರ್ಜನೆ ಮಾಡುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದು ಬಂದ ಸಂಪ್ರದಾಯ ವಾಗಿದೆ. ಒಂದು ವೇಳೆ ಶೋಭಾ ಯಾತ್ರೆಗೆ ಜನದಟ್ಟಣೆ ಅಧಿಕ ಇರಬಹುದು ಎಂದಾದರೆ ಎಲ್ಲಾ ಧರ್ಮಗಳ ಹಬ್ಬಗಳ ಸಂದರ್ಭದಲ್ಲಿ ವಿಶೇಷ ರಜೆ ಘೋಷಣೆ ಮಾಡುತ್ತೀರಾ? , ಜಿಲ್ಲಾಡಳಿತವೇ ಹೇಳಿದ ಹಾಗೆ ಜನದಟ್ಟಣೆ ಜಾಸ್ತಿಯಾಗಿ ಇರುತ್ತದೆ ಎಂದಾದರೆ ಪ್ರಧಾನಿ ಕಾರ್ಯಕ್ರಮದ ಸಂದರ್ಭದಲ್ಲಿ ಭದ್ರತೆ ದ್ರಷ್ಠಿಯಿಂದ ಶೋಭಾ ಯಾತ್ರೆಗೆ ಅಂದು ಅನುಮತಿ ಯಾಕೆ ಕೊಟ್ಟದ್ದು. ಒಂದು ವೇಳೆ ಅಂದು ಶೋಭಾ ಯಾತ್ರೆ ನಡೆಸಬೇಕು ಎಂಬುದು ಕಡ್ಡಾಯ ಆಗಿದ್ದಲ್ಲಿ ಆ ಕಾರಣದಿಂದ ಪ್ರಧಾನಿ ಕಾರ್ಯಕ್ರಮವನ್ನು ಮುಂದೂಡಲು ಸಾದ್ಯವಿರಲಿಲ್ಲವೇ, ಮಂಗಳೂರಿನಲ್ಲಿ ಅದೆಷ್ಟೋ ವರ್ಷಗಳಿಂದ ನೂರಾರು ಕಡೆಗಳಲ್ಲಿ ಅದ್ದೂರಿಯಾಗಿ ಗಣೇಶೋತ್ಸವ ನಡೆಯುತ್ತಿದೆ ಆ ಹೆಸರಿನಲ್ಲಿ ಎಂದಾದರೂ ಶಾಲಾ ಕಾಲೇಜುಗಳಿಗೆ ರಜೆ ನೀಡಿದ ಇತಿಹಾಸ ಇದೆಯಾ ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟ ಪಡಿಸಬೇಕು.
ಸೆಪ್ಟೆಂಬರ್ ಎರಡನೇ ತಾರೀಕಿನಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳೂರಿನಲ್ಲಿ ಭಾಗವಹಿಸಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಡಿಮೆ ಜನ ಸೇರಬಹುದು ಎಂಬ ಭಯದಿಂದ ಬಿಜೆಪಿ ನಾಯಕರು ಅಧಿಕಾರ ಯಂತ್ರವನ್ನು ದುರುಪಯೋಗ ಪಡಿಸಿಕೊಂಡು ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿ ಸ್ತ್ರೀ ಶಕ್ತಿ ಮಹಿಳಾ ಸಂಘಟನೆಯ ಎಲ್ಲರೂ ಕಡ್ಡಾಯ ಬಾಗವಹಿಸಲು ಆದೇಶ ಹೊರಡಿಸಿತ್ತು ಇದರ ಮುಂದುವರಿದ ಭಾಗವಾಗಿ ಗಣೇಶ ವಿಸರ್ಜನೆ ನೆಪದಲ್ಲಿ ಮಂಗಳೂರಿನ ಶಾಲಾ ಕಾಲೇಜುಗಳಿಗೆ ರಜೆ ನೀಡಿರುವುದು ಸರಿಯಲ್ಲ , ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಿಲ್ಡಪ್ ಕೊಡುವ ಏಕೈಕ ಉದ್ದೇಶದಿಂದ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸುತ್ತಿರುವ ಬಿಜೆಪಿ ಸರಕಾರದ ನಿಲುವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಖಂಡಿಸುತ್ತದೆ. ಈ ವರ್ಷ ಸುರಿದ ಮಳೆ ಹಾಗೂ ಅತಿವೃಷ್ಟಿ ಕಾರಣದಿಂದ ಈಗಾಗಲೇ ಹಲವಾರು ದಿನ ಶಾಲಾ ಕಾಲೇಜುಗಳಿಗೆ ಅನಿವಾರ್ಯವಾಗಿ ರಜೆ ನೀಡಲಾಗಿದೆ. ಇದೀಗ ಬಿಜೆಪಿ ಪಕ್ಷದ ರಾಜಕೀಯ ಉದ್ದೇಶಗಳಿಗಾಗಿ ಕ್ಷುಲ್ಲಕ ಕಾರಣಗಳನ್ನು ನೀಡಿ ಅನಗತ್ಯ ರಜೆ ನೀಡಿದರೆ ಅದು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅದ್ದರಿಂದ ಜಿಲ್ಲಾಡಳಿತ ಕೂಡಲೇ ಈ ಸುತ್ತೋಲೆಯನ್ನು ವಾಪಾಸು ಪಡೆಯಬೇಕೆಂದು ಅನ್ವರ್ ಸಾದತ್ ಬಜತ್ತೂರು ಒತ್ತಾಯಿಸಿದ್ದಾರೆ.