News Kannada
Thursday, March 30 2023

ಮಂಗಳೂರು

ಮಂಗಳೂರು: ಪ್ರಧಾನ ಮಂತ್ರಿ ಭೇಟಿ ಹಿನ್ನಲೆ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಸೂಚನೆಗಳು

Ma. PM Modi to visit Kerala again on May 25
Photo Credit : Wikimedia

ಮಂಗಳೂರು: ದಿನಾಂಕ: 02-09-2022 ರಂದು ಮಾನ್ಯ ಪ್ರಧಾನ ಮಂತ್ರಿಯವರ ಮಂಗಳೂರು ಭೇಟಿ ನೀಡಲಿದ್ದು, ಈ ಸಮಯ ಸಾರ್ವಜನಿಕರಿಗೆ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಸಾಮಾನ್ಯ ಸೂಚನೆಗಳು,

ಮಾನ್ಯ ಪ್ರಧಾನ ಮಂತ್ರಿಯವರು ಎಸ್ ಪಿ ಜಿ ಭದ್ರತೆಯನ್ನು ಹೊಂದಿದವರಾಗಿದ್ದು, ಅವರು ಭಾಗವಹಿಸುವ ಕಾರ್ಯಕ್ರಮದ ಸ್ಥಳವಾದ ಬಂಗ್ರ ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ಆಗಮಿಸುವ ಸಮಯದಲ್ಲಿ ಹಾಗೂ ಅವರು ಸಂಚರಿಸುವ ರಸ್ತೆಯಾದ ಕೂಳೂರು ಜಂಕ್ಷನ್ ನಿಂದ ಕೊಟ್ಟಾರ ಚೌಕಿ ಜಂಕ್ಷನ್ ವರೆಗಿನ `ರಸ್ತೆಯಲ್ಲಿ ದಿನಾಂಕ 02-9-2022 ರಂದು ಬೆಳಗ್ಗೆ 06:00 ಗಂಟೆಯಿಂದ ಸಾಮಾನ್ಯ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದಿಲ್ಲ.

ಕೆ.ಪಿ.ಟಿ, ಕಡೆಯಿಂದ ಸಾರ್ವಜನಿಕ ಸಮಾವೇಶಕ್ಕೆ ಆಗಮಿಸುವ ಲಘುವಾಹನ ಮತ್ತು ದ್ವಿಚಕ್ರ ವಾಹನದಾರರು ವಾಹನ ಪಾರ್ಕಿಂಗ್ ಗಾಗಿ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದ ಪೂರ್ವಕ್ಕೆ ಇರುವ ಬಯಲು ಪಾರ್ಕಿಂಗ್ ಸ್ಥಳಕ್ಕೆ ಕೊಟ್ಟಾರ ಚೌಕಿಯಿಂದ ಮಾಲೇಮಾರ್ ಮುಖಾಂತರ ಹಾಗೂ ಅಮೆಝಾನ್ ಗೋಡೌನ್ ಪಕ್ಕದಲ್ಲಿನ ಮಾರ್ಗದ ಮುಖಾಂತರ ಹಾಗೂ ಕೂಳೂರು ಹಾಗೂ ಕಾವೂರು ಜಂಕ್ಷನ್ ಕಡೆಯಿಂದ ಆಗಮಿಸುವ ಲಘು ವಾಹನಗಳು ಉರುಂಡಾಡಿ ರಸ್ತೆ ಹಾಗೂ ಕೂಳೂರಿನ ಟಾಟಾ ಶೋ ರೂಮ್ ಮುಂದೆ ಇರುವ ಕೂಳೂರು- ಕಾವೂರು ರಸ್ತೆ ಮುಖಾಂತರ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಅವಕಾಶವಿರುತ್ತದೆ.

ಉಡುಪಿ ಕಡೆಯಿಂದ ಬರುವ ಘನ ವಾಹನಗಳು, ಗೂಡ್ಸ್ ವಾಹನಗಳು ಪಡುಬಿದ್ರಿ ಜಂಕ್ಷನ್ ನಿಂದ ಕಾರ್ಕಳ-ಬೆಳಣ್ ಮಾರ್ಗವಾಗಿ ಮೂಡಬಿದ್ರೆ, ಕಿನ್ನಿಗೋಳಿ ಮೂಲಕ ಮಂಗಳೂರು, ಬಂಟ್ವಾಳ, ಮಲ್ಕಾರ್, ಮುಡಿಪು, ತೊಕ್ಕೊಟ್ಟು, ಪುತ್ತೂರು, ಬೆಂಗಳೂರು, ಮೈಸೂರು ಕಡೆಗೆ ಸಂಚರಿಸುವುದು.

ಇನ್ನಿತರ ಲಘು ವಾಹನಗಳು ಹಾಗೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು ಮುಲ್ಕಿಯಿಂದ ಕಿನ್ನಿಗೋಳಿ-ವಿಜಯ ಸನ್ನಿಧಿ-ಮೂರು ಕಾವೇರಿ- ಕಟೀಲು-ಬಜ್ಜೆ- ಕೈಕಂಬ- ಗುರುಪುರ ಮಾರ್ಗವಾಗಿ ಮಂಗಳೂರು ಕಡೆಗೂ ಬಂಟ್ವಾಳ ಕಡೆಗೆ ಹೋಗುವ ವಾಹನಗಳು ಮೂಡಬಿದ್ರಿ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗುವುದು.

ಸುರತ್ಕಲ್ ನಿಂದ ಮಂಗಳೂರು ಕಡೆಗೆ ಬರುವ ವಾಹನಗಳು ಕಾನ ರಸ್ತೆ- ಜೋಕಟ್ಟೆ-ಪೊರ್ಕೋಡಿ- ಬಜ್ಜೆ ಕೈಕಂಬ-ಗುರುಪುರ ಮಾರ್ಗವಾಗಿ ಮಂಗಳೂರು ಕಡೆಗೂ ಬಂಟ್ವಾಳ ಕಡೆಗೆ ಹೋಗುವ ವಾಹನಗಳು ಮೂಡಬಿದ್ರೆ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗುವುದು.

ತಲಪಾಡಿ, ಉಳ್ಳಾಲ ಕಡೆಯಿಂದ ಬಿ ಸಿ ರೋಡ್, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬೆಂಗಳೂರು, ಮೈಸೂರು ಕಡೆಗೆ ಹೋಗುವ ವಾಹನಗಳು, ಕೆ.ಸಿ.ರೋಡ್ ಹಾಗೂ ತೊಕ್ಕೊಟ್ಟು-ಮುಡಿವು ಮಾರ್ಗವಾಗಿ ಬಿ ಸಿ ರೋಡ್ ಕಡೆಗೆ ಸಂಚರಿಸುವುದು ಹಾಗೂ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು ನಂತೂರು- ವಾಮಂಜೂರು, ಗುರುಪುರ, ಕೈಕಂಬ ಬಜ್ಜೆ – ಕಟೀಲ್‌- ಕಿನ್ನಿಗೋಳಿ, ಮುಲ್ಕಿ ಮಾರ್ಗವಾಗಿ ಉಡುಪಿ ಕಡೆಗೆ ಮುಂದುವರಿಯುವುದು.

ಬಂಗ್ರ ಕೂಳೂರು ಸಾರ್ವಜನಿಕ ಸಮಾವೇಶ ಸ್ಥಳದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನಮಂತ್ರಿಯವರು ಎಸ್ ಪಿ ಜಿ ಭದ್ರತೆ ಹೊಂದಿರುವುದರಿಂದ ಕೆ.ಪಿ.ಟಿ ಜಂಕ್ಷನ್ ನಿಂದ ಎನ್.ಎ.ಪಿ.ಎ. ಜಂಕ್ಷನ್ ವರೆಗಿನ ರಾ.ಹೆ. 66 ರಲ್ಲಿ ವಾಹನ ಸಂಚಾರಕ್ಕೆ ದಿನಾಂಕ : 02-09-2022 ರಂದು ಮುಂಜಾನೆ 06.00 ಗಂಟೆಯಿಂದ ಕಾರ್ಯಕ್ರಮ ಮುಕ್ತಾಯದ ತನಕ ಅವಕಾಶವಿರುವುದಿಲ್ಲ.

ಉಡುಪಿ, ಮುಲ್ಕಿ, ಸುರತ್ಕಲ್ ಹಾಗೂ ಬಜೈ ಕಡೆಗಳಿಂದ ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರ ಬಸ್ಸುಗಳಿಗೆ ಕಣ್ಣೀರುಭಾವಿ ರಸ್ತೆಯಲ್ಲಿ ಪಾರ್ಕಿಂಗ್ ಸ್ಥಳವನ್ನು ಗುರುತಿಸಲಾಗಿರುತ್ತದೆ, ದ್ವಿಚಕ್ರ ವಾಹನ ಕಾರು ಹಾಗೂ ಇತರ ಲಘು ವಾಹನಗಳಿಗೆ ಎನ್ ಎಂ ಪಿ ಟಿ ಮೈದಾನ ಹಾಗೂ ಎಂ ಎಸ್ ಇ.ಝಡ್. ರಸ್ತೆಯಲ್ಲಿ ಲಘು ವಾಹನ ಪಾರ್ಕಿಂಗ್ ಗೆ ಸ್ಥಳವನ್ನು ಗುರುತಿಸಲಾಗಿರುತ್ತದೆ.

ಮೂಡಬಿದ್ರೆ, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕೇರಳ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಕಡೆಗಳಿಂದ ಬರುವ ಬಸ್ಸುಗಳಿಗೆ ಕೆ.ಪಿ.ಟಿ ಮೈದಾನ, ವ್ಯಾಸನಗರ ಮೈದಾನ, ಪದವು ಮೈದಾನ, ಕರಾವಳಿ ಉತ್ಸವ ಮೈದಾನ, ಲೇಡಿಹಿಲ್ ಚರ್ಚ್ ಮೈದಾನ, ಉರ್ವಾ ಮಾರ್ಕೆಟ್ ಮೈದಾನ, ಉರ್ಪಾ ಸ್ಟೋರ್ ಮಾರ್ಕೆಟ್, ಕುಂಟಿಕಾನ ಜಂಕ್ಷನ್ ನಿಂದ ಕಾವೂರು ಕಡೆಗೆ ಹೋಗುವ ರಸ್ತೆಯಲ್ಲಿ ಪಾರ್ಕಿಂಗ್ ಸ್ಥಳವನ್ನು ಗುರುತಿಸಲಾಗಿರುತ್ತದೆ. ಹಾಗೂ ಕಾರು ಹಾಗೂ ಇನ್ನಿತರ ಲಘು ವಾಹನಗಳಿಗೆ ಎ ಜೆ ಆಸ್ಪತ್ರೆ, ಲೇಡಿಹಿಲ್ ಚರ್ಚ್ ಗೌಂಡ್, ಕರಾವಳಿ ಗೌಂಡ್ ಗಳಲ್ಲಿ ಪಾರ್ಕಿಂಗ್ ಗೆ ಸ್ಥಳವನ್ನು ಗುರುತಿಸಲಾಗಿರುತ್ತದೆ.

ಉಡುಪಿ, ಮುಲ್ಕಿ, ಸುರತ್ಕಲ್‌ ಹಾಗೂ ಬಜೆ ಕಡೆಗಳಿಂದ ಕಾರ್ಯಕ್ರಮದ ಸ್ಥಳಕ್ಕೆ ಫಲಾನುಭವಿಗಳನ್ನು ಮತ್ತು ಜನರನ್ನು ಕರೆದುಕೊಂಡು ಬರುವ ಬಸ್ಸುಗಳು ಕೂಳೂರು ಜಂಕ್ಷನ್ ನಲ್ಲಿ ಜನರನ್ನು ಇಳಿಸಿ ನಂತರ ತಣ್ಣೀರುಬಾವಿ ರಸ್ತೆ ಕಡೆಗೆ ಚಲಿಸುವುದು ಮತ್ತು ಪಾರ್ಕಿಂಗ್ ಗೆ ನಿಗದಿಪಡಿಸಲಾದ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದು.

See also  ಮೈಸೂರು: ಶೀಘ್ರದಲ್ಲೇ ಬಾಂಬೆ ಫೈಲ್ಸ್ ಬಿಡುಗಡೆ ಎಂದ ಎಚ್.ವಿಶ್ವನಾಥ್

ಮಂಗಳೂರು ನಗರ, ಮೂಡಬಿದ್ರೆ, ಬಂಟ್ವಾಳ, ಪುತ್ತೂರು, ಸುಳ್ಯ, ಮಡಿಕೇರಿ, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕೇರಳ ಕಡೆಗಳಿಂದ ಕಾರ್ಯಕ್ರಮದ ಸ್ಥಳಕ್ಕೆ ಜನರನ್ನು ಕರೆದುಕೊಂಡು ಬರುವ ವಾಹನಗಳು ಕೊಟ್ಟಾರ ಚೌಕಿ ಜಂಕ್ಷನ್ ಬಳಿಯಲ್ಲಿ ಫಲಾನುಭವಿಗಳನ್ನು ಮತ್ತು ಜನರನ್ನು ಇಳಿಸಿ ನಂತರ ವಾಪಾಸು ಪಾರ್ಕಿಂಗ್ ಗೆ ನಿಗದಿಪಡಿಸಲಾದ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದು,

ದಿನಾಂಕ: 02-09-2022 ರಂದು ಬೆಳಿಗ್ಗೆ 06-00 ಗಂಟೆಯಿಂದ ಮಾನ್ಯ ಪ್ರಧಾನ ಮಂತ್ರಿಯವರ ಬಂಗ ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿನ ಕಾರ್ಯಕ್ರಮ ಸ್ಥಳದಿಂದ ಮಂಗಳೂರು ಹೆಲಿಪ್ಯಾಡ್‌ಗ ನಿರ್ಗಮಿಸುವ ವರೆಗೆ ಮೇಲ್ಕಂಡ ಎಲ್ಲಾ ವಾಹನ ಸಂಚಾರ ಬದಲಾವಣೆಯು ಜ್ಯಾರಿಯಲ್ಲಿರುತ್ತದೆ.

ವಿವಿಐಪಿ ಪಾಸುಗಳನ್ನು ಹೊಂದಿರುವವರ ವಾಹನಗಳಿಗೆ ಬಂಗ್ರಕೂಳೂರು ಡಲ್ವಾ ಗೌಂಡ್ ಬಳಿಯಲ್ಲಿ ಪಾರ್ಕಿಂಗ್ ಗೆ ಸ್ಥಳ ನಿಗದಿಪಡಿಸಲಾಗಿರುತ್ತದೆ.

ವಿಐಪಿ ಪಾಸುಗಳನ್ನು ಹೊಂದಿರುವ ವಾಹನಗಳಿಗೆ ರನಾಲ್ಟ್ ಶೋ ರೂಮ್ ಎದುರುಗಡೆಯ ವಿ ಆರ್ ಎಲ್ ಗೋಡೌನ್ ಬಳಿಯ ಸೋಮಯಾಜಿ ಗೌಂಡ್ ಹಾಗೂ ಎ ಜೆ ಶೆಟ್ಟಿ ಇಂಜಿನಿಯರಿಂಗ್ ಕಾಲೇಜು, ಬಂಗ್ರಕೂಳೂರು ಇಲ್ಲಿ ಪಾರ್ಕಿಂಗ್ ಗೆ ಸ್ಥಳ ನಿಗದಿಪಡಿಸಲಾಗಿರುತ್ತದೆ.

ವಿ.ಐ.ಪಿ. ಮತ್ತು ವಿವಿಐಪಿ ಪಾಸ್ ಹೊಂದಿದ ವಾಹನಗಳ ಚಾಲಕರು ಸದ್ರಿ ವಿ.ಐ.ಪಿ. ಮತ್ತು ವಿವಿಐಪಿ ವ್ಯಕ್ತಿಗಳನ್ನು ಕಾರ್ಯಕ್ರಮ ನಡೆಯುವ ಬಂಗ್ರಹೂಳೂರು ಗೋಲ್ಡ್ ಪಿಂಚ್ ಮೈದಾನದ ಗೇಟ್ ಬಳಿ ಇಳಿಸಿದ ಬಳಿಕ, ತಮಗೆ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು ಮತ್ತು ಕಾರ್ಯಕ್ರಮ ಮುಗಿದ ಬಳಿಕ ಪುನಃ ಸ್ಥಳಕ್ಕೆ ಬಂದು ವ್ಯಕ್ತಿಗಳನ್ನು ಕರೆದೊಯ್ಯಬಹುದು.

ಕಾರ್ಯಕ್ರಮಕ್ಕೆ ಬಂದ ಸಾರ್ವಜನಿಕರು ಮತ್ತು ಫಲಾನುಭವಿಗಳು, ಕಾರ್ಯಕ್ರಮ ಮುಗಿದ ಬಳಿಕ ನಿಗದಿತ ಪಾರ್ಕಿಂಗ್ ಸ್ಥಳಕ್ಕೆ ತೆರಳಿ, ಅಲ್ಲಿಂದ ವಾಹನಗಳಲ್ಲಿ ಆಗಮಿಸಿದ ರಸ್ತೆಗಳಲ್ಲಿಯೇ ವಾಪಾಸು ತೆರಳುವುದು.

ಮಾನ್ಯ ಪ್ರಧಾನ ಮಂತ್ರಿಯವರ ವಾಹನ ಮತ್ತು ಬೆಂಗಾವಲು ವಾಹನಗಳು ಸಂಚರಿಸುವ ಸಮಯ ಈ ಮೇಲ್ಕಂಡಂತೆ ನೀಡಿದ ಎಲ್ಲಾ ಸೂಚನೆಗಳನ್ನು ಪಾಲಿಸುವಂತೆ ಕೋರಲಾಗಿದೆ.

ಮಾನ್ಯ ಪ್ರಧಾನ ಮಂತ್ರಿಯವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಯಾವುದೇ ಸಾರ್ವಜನಿಕರು, ಯಾವುದೇ ರೀತಿಯ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳು, ಆಯುಧಗಳು, ದಹನ ಶೀಲ ವಸ್ತುಗಳು, ಕಪ್ಪು ಬಾವುಟ, ಬ್ಯಾನರ್ ಗಳು ಮತ್ತು ಆಕ್ಷೇಪಾರ್ಹ ವಸ್ತುಗಳನ್ನು ಕಾರ್ಯಕ್ರಮ ಸ್ಥಳಕ್ಕೆ ತರುವುದನ್ನು ನಿರ್ಬಂಧಿಸಲಾಗಿದೆ.

ಮಾನ್ಯ ಪ್ರಧಾನ ಮಂತ್ರಿಯವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್, ವೈಯ್ಯಕ್ತಿಕ ಸೊತ್ತುಗಳನ್ನು ಕಾರ್ಯಕ್ರಮ ನಡೆಯುವ ಸ್ಥಳದ ಪ್ರವೇಶ ದ್ವಾರದಲ್ಲಿ ತಪಾಸಣೆ ಸಮಯ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟು ಸಹಕರಿಸಲು ಕೋರಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರು ತಮಗೆ ನಿಗದಿಪಡಿಸಿದ ಪ್ರವೇಶ ದ್ವಾರಗಳ ಮುಖಾಂತರವೇ ಪ್ರವೇಶಿಸಲು ಕೋರಲಾಗಿದೆ. ಸಾರ್ವಜನಿಕರಿಗೆ ಕೂಳೂರಿನ ರೆನಾಲ್ಡ್ ಶೋ ರೂಮ್ ಕಡೆಯಿಂದ ಮತ್ತು ಕೂಳೂರು ಕಾವೂರು ರಸ್ತೆಯ ಪೃಥ್ವಿ ಲೇ ಔಟ್ ಕಡೆಯಿಂದ ಹಾಗೂ ಕೊಟ್ಟಾರ ಚೌಕಿ ಮಾಲಾಡಿ ಕೋರ್ಟ್ ರಸ್ತೆ ಮಾರ್ಗವಾಗಿ ಕಾರ್ಯಕ್ರಮದ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಅಲ್ಲಿ ಅಳವಡಿಸಲಾದ ಪ್ರವೇಶ ದ್ವಾರಗಳ ಮೂಲಕ ತೆರಳುವಂತೆ ಕೋರಲಾಗಿದೆ.

ಮಾನ್ಯ ಪ್ರಧಾನ ಮಂತ್ರಿಯವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿ.ವಿ.ಐ.ಪಿ./ವಿ.ಐ.ಪಿ. ಮಾಧ್ಯಮದ ವ್ಯಕ್ತಿಗಳು, ಛಾಯಾಗ್ರಾಹಕರು, ಇತರ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು, ಫಲಾನುಭವಿಗಳು, ವಾಹನ ಚಾಲಕರು, ಸ್ಥಳದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಹಾಗೂ ಇನ್ನಿತರ ವ್ಯಕ್ತಿಗಳು ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ವಿತರಿಸಲಾದ ಪಾಸ್ ಗಳನ್ನು ಹೊಂದಿರತಕ್ಕದ್ದು.

ವಾಹನ ನಿಲುಗಡೆ ಮತ್ತು ವಾಹನ ಸಂಚಾರ ನಿಷೇಧದ ವಿವರಗಳು

ಸೆ.2ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಜ್ಪೆ ಕೆಂಜಾರು, ಮರವೂರು, ಮರಕಡ, ಕಾವೂರು, ಬೋಂದೆಲ್, ಪದವಿನಂಗಡಿ, ಯೆಯ್ಯಾಡಿ, ರಾ.ಹೆ.66ರ ಕೆಪಿಟಿ ಜಂಕ್ಷನ್‌ನಿಂದ ಕೊಟ್ಟಾರ ಚೌಕಿ, ಕೂಳೂರು, ಎನ್‌ಎಂಪಿಎವರೆಗೆ ಹಾದು ಹೋಗುವ ಎರಡೂ ಬದಿಗಳಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಗೋಲ್ಡ್ ಫಿಂಚ್ ಮೈದಾನ ಮತ್ತು ಸುತ್ತಲಿನ 500 ಮೀ. ವ್ಯಾಪ್ತಿಯ ರಸ್ತೆಗಳಲ್ಲೂ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಮಂಗಳೂರು ವಿಮಾನ ನಿಲ್ದಾಣದಿಂದ ಕೆಂಜಾರು, ಮರವೂರು, ಮರಕಡ, ಕಾವೂರು, ಬೋಂದೆಲ್, ಪದವಿನಂಗಡಿ, ಯೆಯ್ಯಾಡಿ ಹಾಗೂ ರಾ.ಹೆ.66ರ ಕೆಪಿಟಿ ಜಂಕ್ಷನ್‌ನಿಂದ ಕೊಟ್ಟಾರ ಚೌಕಿ, ಕೂಳೂರು-ಎನ್‌ಎಂಪಿಎವರೆಗೆ ಎಲ್ಲಾ ಸರಕು ವಾಹನ, ಘನ ವಾಹನ, ಇತರ ಸಾರ್ವಜನಿಕ ವಾಹನಗಳ ಸಂಚಾರವನ್ನು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ನಿಷೇಧಿಸಲಾಗಿದೆ.

See also  ವಾರ್ಡ್ ಕಮೀಟಿ ರಚನೆಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ

*ಬಂಗ್ರ ಕೂಳೂರು ಗೋಲ್ಡ್‌ಫಿಂಚ್ ಸಿಟಿ ಮೈದಾನದವರೆಗೆ ಸಾರ್ವಜನಿಕ ಸಮಾವೇಶಕ್ಕೆ ಆಗಮಿಸುವ ಅತೀ ಗಣ್ಯ ವ್ಯಕ್ತಿಗಳು, ಗಣ್ಯ ವ್ಯಕ್ತಿಗಳು, ಸಾರ್ವಜನಿಕರು ಉಪಯೋಗಿಸುವ ವಾಹನಗಳನ್ನು, ನಿಗದಿತ ಪಾರ್ಕಿಂಗ್ ಸ್ಥಳಗಳಿಗೆ ಸಂಚರಿಸಲು ಮತ್ತು ತುರ್ತು ಸೇವೆಯ ವಾಹನಗಳು ಈ ನಿಷೇಧಿತ ರಸ್ತೆಗಳಲ್ಲಿ ಸಂಚರಿಸಲು ಅನುಮತಿಸಲಾಗಿದೆ.

*ಸೆ.2ರಂದು ಬೆಳಗ್ಗೆ 10ರಿಂದ ಪ್ರಧಾನಿ ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸುವವರೆಗೆ ನಂತೂರು, ಬಿಕರ್ನಕಟ್ಟೆ- ಕೈಕಂಬ, ಮಂಗಳ ಜ್ಯೋತಿ, ವಾಮಂಜೂರು, ಪೊರ್ಕೊಡಿ, ಮುಲ್ಕಿ, ಹಳೆಯಂಗಡಿ, ಜೋಕಟ್ಟೆ ಕ್ರಾಸ್, ಲೇಡಿಹಿಲ್ ಹೀಗೆ 9 ಜಂಕ್ಷನ್‌ಗಳಲ್ಲಿ ಸಂಚಾರ ಬದಲಾವಣೆ ಮಾಡಿ ಅಲ್ಲದೆ ಪರ್ಯಾಯ ರಸ್ತೆಗಳನ್ನು ಗುರುತಿಸಲಾಗಿದೆ.

ಸಂಚಾರ‌ ಬದಲಾವಣೆ ವಿವರ

ಸೆ.2 ರ ಬೆಳಿಗ್ಗೆ 6 ಗಂಟೆಯಿಂದ ಕೂಳೂರು ಜಂಕ್ಷನ್ ನಿಂದ ಕೊಟ್ಟಾರ ಜಂಕ್ಷನ್ ವರೆಗೆ ಸಾಮಾನ್ಯ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಉಳಿದಂತೆ ಮಂಗಳೂರು ನಗರದ 9 ಕಡೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ನಂತೂರು ಸರ್ಕಲ್ ಮೂಲಕ ಆಗಮಿಸುವ ವಾಹನಗಳು ಬಿಕರ್ನಕಟ್ಟೆ-ಕೈಕಂಬ ಜಂಕ್ಷನ್ ಬಳಸಲು ಸೂಚನೆ ನೀಡಲಾಗಿದೆ. ಉಡುಪಿಗೆ ತೆರಳಲು ಬಿಕರ್ನಕಟ್ಟೆ ಮೂಲಕ ವಾಮಂಜೂರು- ಗುರುಪುರ-ಮೂಡಬಿದ್ರೆ-ಕಾರ್ಕಳ ರಸ್ತೆ ಬಳಸಬೇಕು. ಮೈಸೂರು, ಮಡಿಕೇರಿ ತೆರಳಲು ಬಿಕರ್ನಕಟ್ಟೆ- ಪಡೀಲ್-ಪುತ್ತೂರು-ಸುಳ್ಯ ಮೂಲಕ ರಸ್ತೆ ಬಳಸಬೇಕು. ಬೆಂಗಳೂರಿಗೆ ತೆರಳುವವರು ಬಿಕರ್ನಕಟ್ಟೆ-ಪಡೀಲ್-ಬಿ.ಸಿ.ರೋಡ್-ಉಪ್ಪಿನಂಗಡಿ ಮೂಲಕ ರಸ್ತೆ ಮೂಲಕ ಸಾಗಬೇಕು.

ಕಾಸರಗೋಡಿಗೆ ತೆರಳಲು ಬಿಕರ್ನಕಟ್ಟೆ-ಪಡೀಲ್-ಪಂಪ್‌ ವೆಲ್-ತೊಕ್ಕೊಟ್ಟು ಮೂಲಕ ರಸ್ತೆ ಹಾಗೂ ಪೊರ್ಕೋಡಿ ಜಂಕ್ಷನ್ ನಿಂದ ಜೋಕಟ್ಟೆ-ಕಾನಾ-ಸುರತ್ಕಲ್ ಹಾಗೂ ಏರ್ ಪೋರ್ಟ್ ನಿಂದ ಕೈಕಂಬ-ಗುರುಪುರ ಮೂಲಕ ಮಂಗಳೂರಿಗೆ ಬರಬಹುದು. ಮುಲ್ಕಿ ಜಂಕ್ಷನ್ ನಿಂದ ಕಿನ್ನಿಗೋಳಿ-ಕಟೀಲು-ಬಜಪೆ-ಕೈಕಂಬ ಮೂಲಕ ಮಂಗಳೂರಿಗೆ ಎಂಟ್ರಿಯಾಗಬಹುದು. ಹಳೆಯಂಗಡಿಯಿಂದ ಪಕ್ಷಿಕೆರೆ-ಕಿನ್ನಿಗೋಳಿ-ಏರ್ ಪೋರ್ಟ್ ರಸ್ತೆ ಮೂಲಕ ಬರಲು ಅವಕಾಶವಿದ್ದು, ಲೇಡಿಹಿಲ್ ಮೂಲಕ ಪಿವಿಎಸ್-ಬಂಟ್ಸ್ ಹಾಸ್ಟೆಲ್ ಮೂಲಕ ಪಂಪ್ ವೆಲ್ ಗೆ ವಾಹನ ಸಂಚಾರ ಇರುತ್ತದೆ.

ವಾಹನ ಪಾರ್ಕಿಂಗ್‌ ವ್ಯವಸ್ಥೆಯ ಮಾಹಿತಿ

*ಬಂಗ್ರ ಕೂಳೂರಿನ ಡೆಲ್ಟಾ ಗ್ರೌಂಡ್‌ನಲ್ಲಿ ವಿವಿಐಪಿ ವಾಹನಗಳಿಗೆ, ಕೂಳೂರಿನ ಸೋಮಯಾಜಿ ಮೈದಾನದಲ್ಲಿ ವಿಐಪಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಎರಡೂ ವಾಹನಗಳು ಪೊಲೀಸ್ ಇಲಾಖೆಯಿಂದ ಪಾಸ್ ಪಡೆದಿರಬೇಕು.

*ಪಣಂಬೂರು-ತಣ್ಣೀರುಬಾವಿ ರಸ್ತೆಯಲ್ಲಿ ಕವೂರು, ಸುರತ್ಕಲ್, ಪಣಂಬೂರು, ಬಜ್ಪೆ ಮಾರ್ಗವಾಗಿ ಬರುವ ವಾಹನಗಳು ಹಾಗೂ ಉಡುಪಿ ಜಿಲ್ಲೆಯಿಂದ ಬರುವ ವಾಹನಗಳು, ಫಲಾನುಭವಿಗಳ ವಾಹನಗಳು (1500 ಬಸ್‌ಗಳು, 500 ಕಾರುಗಳು) ನಿಲುಗಡೆ ಮಾಡಬೇಕು.

*ಕೆಪಿಟಿ ಮೈದಾನದಲ್ಲಿ ಮುಲ್ಕಿ-ಮೂಡುಬಿದಿರೆ ಕಡೆಯಿಂದ ಬರುವ 200 ಬಸ್‌ಗಳು ಪಾರ್ಕಿಂಗ್ ಮಾಡಬೇಕು.

*ಪಣಂಬೂರು ಎಂಎಸ್‌ಇಝೆಡ್ ರಸ್ತೆಯಲ್ಲಿ ಕಾವೂರು, ಸುರತ್ಕಲ್, ಪಣಂಬೂರು, ಬಜ್ಪೆ ಮಾರ್ಗವಾಗಿ ಹಾಗೂ ಉಡುಪಿ ಜಿಲ್ಲೆಯಿಂದ ಬರುವ ವಾಹನಗಳು (1900 ಲಘು ವಾಹನಗಳು) ನಿಲುಗಡೆ ಮಾಡಬೇಕು.

*ಬಂಗ್ರ ಕೂಳೂರು ಎಜೆ ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ಪಾಸ್ ಪಡೆದಿರುವ ವಿಐಪಿ ವಾಹನಗಳು (100 ಕಾರುಗಳು) ನಿಲುಗಡೆ ಮಾಡಬೇಕು.

*ಪದುವಾ ಕಾಲೇಜು ಮೈದಾನದಲ್ಲಿ ಪುತ್ತೂರು, ಸುಳ್ಯದಿಂದ ಬರುವ 250 ಬಸ್‌ಗಳು ಪಾರ್ಕಿಂಗ್ ಮಾಡಬೇಕು.

*ಉರ್ವಸ್ಟೋರ್ ಮೈದಾನ, ಇನ್ಫೋಸಿಸ್ ಹಿಂಭಾಗದ ರಸ್ತೆ ಮೂಲಕ ಕುಂಟಿಕಾನ ತನಕದ ರಸ್ತೆಯಲ್ಲಿ ಬಂಟ್ವಾಳ ತಾಲೂಕಿನಿಂದ ಬರುವ 300 ಬಸ್‌ಗಳಿಗೆ ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ.

*ಬಂಗ್ರ ಕೂಳೂರು ಸಮಾವೇಶ ಕಾರ್ಯಕ್ರಮದ ಪೂರ್ವಭಾಗದಲ್ಲಿ ಅಮೆಝಾನ್ ಗೋದಾಮು ಬಳಿ ಕಾರ್ಯಕ್ರಮಕ್ಕೆ ಬರುವ 2 ಸಾವಿರ ಕಾರುಗಳು ಮತ್ತು 3 ಸಾವಿರ ಬೈಕುಗಳು ನಿಲುಗಡೆ ಮಾಡಬೇಕು.

*ಎ.ಜೆ. ಆಸ್ಪತ್ರೆ ಬಳಿಯ ಕುಂಟಿಕಾನ ಜಂಕ್ಷನ್‌ನಿಂದ ಕಾವೂರು ಜಂಕ್ಷನ್‌ವರೆಗೆ ಬೆಳ್ತಂಗಡಿ ಮತ್ತು ಕಾಸರಗೋಡು ಕಡೆಯಿಂದ ಬರುವ 350 ಬಸ್‌ಗಳ ನಿಲುಗಡೆ ಮಾಡಬೇಕು.

*ಆರ್‌ಟಿಒ ಟ್ರಯಲ್ ಮೈದಾನದಲ್ಲಿ ಪುತ್ತೂರು, ಸುಳ್ಯದಿಂದ ಬರುವ 50 ಬಸ್‌ಗಳು ಪಾರ್ಕಿಂಗ್ ಮಾಡಬೇಕು.

*ಲಾಲ್‌ಬಾಗ್-ಕರಾವಳಿ ಉತ್ಸವ ಮೈದಾನದಲ್ಲಿ ಮಂಗಳೂರು ನಗರ ವ್ಯಾಪ್ತಿಯಿಂದ ಬರುವ 250 ಬಸ್‌ಗಳು ಪಾರ್ಕಿಂಗ್ ಮಾಡಬೇಕು.

*ಉರ್ವ ಮಾರ್ಕೆಟ್ ಮೈದಾನ ಮತ್ತು ಲೇಡಿಹಿಲ್ ಪೊಂಪೈ ಚರ್ಚ್ ಮೈದಾನದಲ್ಲಿ ಉಳ್ಳಾಲ ತಾಲೂಕಿನಿಂದ ಬರುವ ತಲಾ 100 ಬಸ್‌ಗಳು ಪಾರ್ಕಿಂಗ್ ಮಾಡಬೇಕು.

*ಎನ್‌ಎಂಪಿಟಿ ಮೈದಾನದಲ್ಲಿ ಕಾವೂರು, ಸುರತ್ಕಲ್, ಪಣಂಬೂರು, ಬಜ್ಪೆ ಮಾರ್ಗವಾಗಿ ಹಾಗೂ ಉಡುಪಿ ಜಿಲ್ಲೆಯಿಂದ ಬರುವ ವಾಹನಗಳು (200 ಬಸ್‌ಗಳು, 600 ಬೈಕ್‌ಗಳು) ನಿಲುಗಡೆ ಮಾಡಬೇಕು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು