ಮಂಗಳೂರು: ಚಿತ್ರದುರ್ಗ ಮುರುಗ ಮಠದ ಡಾ. ಶಿವಮೂರ್ತಿ ಮುರುಗ ಶರಣರ ಮೃಗೀಯ ಕೃತ್ಯವನ್ನು ಹಿಂದೂ ಮಹಾಸಭಾ ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ.
ಇದು ಹಿಂದೂ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ. ಗುರು ಪರಂಪರೆಗೆ ಗೌರವವನ್ನು ಕೊಟ್ಟು, ಬೆಳೆಸುವಂತಹ ಹಿಂದೂ ಸಮಾಜದ ಬೆನ್ನಿಗೆ ಚೂರಿ ಹಾಕಿ, ಮುರುಗ ಶರಣರು ಧರ್ಮ ದ್ರೋಹ ವೆಸಿಗಿದ್ದಾರೆ. ಕೃತ್ಯ ವೆಸಗಿದ ಶ್ರೀಗಳ ಬಂಧನಕ್ಕೆ ವಿಳಂಬ ನೀತಿಯನ್ನು ಅನುಸರಿಸಿದ ಪೊಲೀಸರ ಕ್ರಮವನ್ನು ಖಂಡಿಸಿ, ರಾಜ್ಯ ಬಿಜೆಪಿ ಸರಕಾರದ ಹಸ್ತಕ್ಷೇಪದಿಂದ ಶ್ರೀಗಳ ಬಂಧನ ವಿಳಂಬವಾಗಿದೆ ಎಂದು ಹಿಂದೂ ಮಹಾಸಭಾ ಅನುಮಾನ ವ್ಯಕ್ತಪಡಿಸುತ್ತದೆ.
ಜನಸಾಮಾನ್ಯರಿಗೊಂದು ನ್ಯಾಯ, ಉಳ್ಳವರಿಗೊಂದು ನ್ಯಾಯ, ಇದೆಂಥ ಕಾನೂನು ಎಂದು ಜನರು ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ನಾಗರಿಕ ಸಮಾಜ ತಲೆತಗ್ಗಿಸುವಂತಹ ಶ್ರೀಗಳ ಕೃತ್ಯವನ್ನು ಹಿಂದೂ ಸಮಾಜ ಸಹಿಸುವುದಿಲ್ಲ. ಇನ್ನು ಮುಂದೆ ಕೇಸರಿ ಬಟ್ಟೆ ಧರಿಸಿ ಇಂತಹ ದುಷ್ಕೃತ್ಯ ವ್ಯಸಗುವ ಯಾವುದೇ ಮಠಾಧಿಪತಿಗಳಿರಲಿ, ಅವರನ್ನು ಸಾರ್ವಜನಿಕವಾಗಿ ವಿವಸ್ತ್ರ ವನ್ನಾಗಿಸಿ, ಮಸಿ ಬಳಿದು, ಮೆರವಣಿಗೆ ಮಾಡಲಾಗುವುದು ಎಂದು ರಾಜ್ಯಾಧ್ಯಕ್ಷರಾದ ರಾಜೇಶ್ ಪವಿತ್ರನ್ ಎಚ್ಚರಿಸಿದರು.