ವೇಣೂರು: ಗಣೇಶೋತ್ಸವ ಆಚರಣೆಯಿಂದ ಸಮಾಜದಲ್ಲಿ ಒಗ್ಗಟ್ಟು ಮೂಡುತ್ತದೆ. ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬ ಇದಾಗಿದ್ದು, ಭಕ್ತಿಯ ಆರಾಧನೆಯಿಂದ ಎಲ್ಲರ ಬದುಕು ಹಸನಾಗಲಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ| ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಹೇಳಿದರು.
ವೇಣೂರು ಫಲ್ಗುಣಿ ಸೇವಾ ಸಂಘದ ಆಶ್ರಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಸಹಯೋಗದಲ್ಲಿ ಇಲ್ಲಿಯ ಮುಖ್ಯಪೇಟೆಯಲ್ಲಿ ಜರಗಿದ ೨೨ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನ್ಯಾಯವಾದಿ ಕು| ಸಹನಾ ಕುಂದರ್ ಸೂಡಾ ಅವರು ಮಾರ್ಗಸೂಚಿ ಭಾಷಣ ಮಾಡಿ, ಮೊಬೈಲ್‌ನ ಅತಿಯಾದ ಬಳಕೆಯಿಂದ ಇಂದು ಸಂಬಂಧಗಳು ಬೆಲೆ ಕಳೆದುಕೊಂಡಿದೆ. ಮನೆ, ಸಮಾಜವನ್ನು ಕಟ್ಟುವ ಸಾಮಾರ್ಥ್ಯ ಹೊಂದಿರುವ ಮಹಿಳೆಯರಿಂದ ಮತ್ತೆ ಬದಲಾವಣೆ ಸಾಧ್ಯ ಎಂದರು. ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್, ಫಲ್ಗುಣಿ ಸೇವಾ ಸಂಘ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಶಾಸಕ ಹರೀಶ್ ಪೂಂಜ ಅವರು ಭೇಟಿ ನೀಡಿದರು. ಗೋಪಾಲಕೃಷ್ಣ ಉಪಾಧ್ಯಾಯ ಮತ್ತು ಶ್ರೀಪತಿ ಉಪಾಧ್ಯಾಯರವರ ನೇತೃತ್ವದಲ್ಲಿ ಪೂಜಾಕಾರ್ಯಕ್ರಮಗಳು ನಡೆದವು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಫಲ್ಗುಣಿ ಸೇವಾ ಸಂಘದ ಸ್ಥಾಪಕಾಧ್ಯಕ್ಷ ವಿ.ಎಸ್. ಜಯರಾಜ್ ಪ್ರಸ್ತಾವಿಸಿದರು. ಪೂಜಾ ಸಮಿತಿ ಅಧ್ಯಕ್ಷ ಸುಧೀರ್ ಭಂಡಾರಿ ಸ್ವಾಗತಿಸಿ, ಕಾರ್ಯದರ್ಶಿ ಸುದೀಪ್ ಪಟವರ್ಧನ್ ವಂದಿಸಿದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ನಿರೂಪಿಸಿದರು.
ಸಮ್ಮಾನ
ರಂಗಭೂಮಿ ಕಲಾವಿದ ಹಾಗೂ ವೇಣೂರು ಗ್ರಾ.ಪಂ. ಅಧ್ಯಕ್ಷರಾಗಿರುವ ನೇಮಯ್ಯ ಕುಲಾಲ್, ಸಮಾಜಸೇವಕಿ ಕುಮುದಾ ಕಾರಂತ ಹಾಗೂ ಹವ್ಯಾಸಿ ಚಿತ್ರಕಲೆಯ ಬಾಲಪ್ರತಿಭೆ ಮಾ| ಆಶಿಶ್ ಎಂ. ರಾವ್ ಅವರನ್ನು ಸಮ್ಮಾನಿಸಲಾಯಿತು.
ಬೆಳ್ತಂಗಡಿ: ಕನ್ನಡಿಕಟ್ಟೆ ಮಸೀದಿ ವಠಾರದಲ್ಲಿ ಫ್ರೀಡಂ ಸ್ಕ್ವಾರ್ ಕಾರ್ಯಕ್ರಮ
ಬೆಳ್ತಂಗಡಿ: ಎಸ್.ಕೆ.ಎಸ್.ಎಸ್.ಎಫ್ ಬೆಳ್ತಂಗಡಿ ವಲಯದ ಫ್ರೀಡಂ ಸ್ಕ್ವಾರ್ ಕಾರ್ಯಕ್ರಮ ಕನ್ನಡಿಕಟ್ಟೆ ಮಸೀದಿ ವಠಾರದಲ್ಲಿ ನಡೆಯಿತು.
ಸಮಾನತೆ, ಸ್ವಾತಂತ್ರ್ಯ, ಸಹೋದರತೆ ಭಾರತದ ಪರಂಪರೆಯನ್ನು ಮರಳಿ ಪಡೆಯೋಣ” ಎಂಬ ಧ್ಯೇಯ ವಾಕ್ಯದಡಿ ನಡೆದ ಈ ಕಾರ್ಯಕ್ರಮದಲ್ಲಿ ಶುಕೂರ್ ದಾರಿಮಿ ಮುಖ್ಯ ಪ್ರಭಾಷಣಗಾರರಾಗಿದ್ದರು.
ಬೆಳ್ತಂಗಡಿ ದಾರುಸ್ಸಲಾಂ ಕಾಲೇಜಿನ ಪ್ರಾಂಶುಪಾಲ ಸಯ್ಯಿದ್ ತ್ವಾಹಾ ತಂಙಳ್ ದುಆಗೈದರು. ರಿಯಾಝ್ ಫೈಝಿ ಕಕ್ಕಿಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಲಯ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ಅಶ್ಶಾಫೀ ಕೊಯ್ಯೂರು ಕಾರ್ಯಕ್ರಮದಲ್ಲಿ ಮುನ್ನುಡಿ ಭಾಷಣಗೈದರು. ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಮುಸ್ಲಿಯಾರ್ ಪ್ರತಿಜ್ಞಾ ವಿಧಿ ಬೋಧಿಸಿದರು.ಕಾರ್ಯಕ್ರಮದಲ್ಲಿ ಐ.ಕೆ ಮೂಸಾ ದಾರಿಮಿ ಕಕ್ಕಿಂಜೆ, ಗರ್ಡಾಡಿ ಚರ್ಚ್ ಸಹಾಯಕ ಗುರುಗಳಾದ ರೋಹನ್ ಲೋಬೋ, ಗುರುವಾಯನಕೆರೆ ಡಾ. ವೇಣುಗೋಪಾಲ್ ಶರ್ಮಾ, ಎಸ್.ಕೆ.ಎಸ್.ಎಸ್.ಎಫ್ ಬೆಳ್ತಂಗಡಿ ವಲಯಾಧ್ಯಕ್ಷ ಹಕೀಂ ಬಂಗೇರಕಟ್ಟೆ, ಬೆಳ್ತಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಶ್ರಫ್ ಫೈಝಿ, ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ದಾರಿಮಿ, ಎಸ್.ಕೆ.ಎಸ್.ಎಸ್.ಎಫ್ ದ.ಕ ಈಸ್ಟ್ ಜಿಲ್ಲಾ ಕೋಶಾಧಿಕಾರಿ ಹನೀಫ್ ದೂಮಳಿಕೆ, ಕನ್ನಡಿಕಟ್ಟೆ ಎಂ.ಜೆ.ಎಂ ಮಸೀದಿಯ ಖತೀಬ್ ರಝಾಖ್ ದಾರಿಮಿ, ಪಡಂಗಡಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮುಹಮ್ಮದ್ ಫಾರೂಖ್, ಎಚ್, ನಿವೃತ್ತ ಶಿಕ್ಷಕ ಹೈದರ್.ಬಿ, ಕನ್ನಡಿಕಟ್ಟೆ ಮುಹ್ಯುದ್ದೀನ್ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಯೂಸುಫ್ ಪೊಂಜಿಲ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಲವು ಗಣ್ಯರನ್ನು ಸನ್ಮಾನಿಸಲಾಯಿತು. ಸಿರಾಜ್ ಚಿಲಿಂಬಿ ವಂದಿಸಿದರು.