ಬೆಳ್ತಂಗಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಧರ್ಮಸ್ಥಳ ಘಟಕ ಹಾಗು ಶ್ರೀ ಕ್ಷೇತ್ರ ಧರ್ಮಸ್ಥಳದ ಸಹಕಾರದೊಂದಿಗೆ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ 39ನೇ ವರ್ಷದ ಶ್ರೀ ಗಣೇಶೋತ್ಸವವು ಆ. 31 ನಡೆಯಿತು.
ಘಟಕ ವ್ಯವಸ್ಥಾಪಕ ಎ .ಉದಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಪುತ್ತೂರು ವಿಭಾಗದ ಯಾಂತ್ರಿಕ ಅಭಿಯಂತರೆ ಆಶಾಲತಾ ಮತ್ತು ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಜಯಕ ರ ಶೆಟ್ಟಿ ಉಪಸ್ಥಿತರಿದ್ದು ಸಿಬ್ಬಂದಿಗಳ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಧರ್ಮಸ್ಥಳ ಜಮಾ ಉಗ್ರಾಣದ ನಿವೃತ್ತ ಮುತ್ಸದ್ದಿ ಬಿ.ಭುಜಬಲಿ ಶುಭ ಹಾರೈಸಿದರು. ಪುತ್ತೂರು ವಿಭಾಗದ ವಿಭಾಗೀಯ ಆಡಳಿತಾಧಿಕಾರಿ ರೇವತಿ ಮತ್ತು ವಿಭಾಗೀಯ ಭದ್ರತಾ ಅಧೀಕ್ಷಕ ಮಧುಸೂದನ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ನಿವೃತ್ತ ನೌಕರರು ಮತ್ತು ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿಗಳ ಪದಕ ಪಡೆದ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು. ಧರ್ಮಸ್ಥಳ ಘಟಕದ ನೌಕರರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಿ ಗೌರವಿಸಲಾಯಿತು.
ಸಿಬ್ಬಂದಿಗಳು ಹಾಗು ಅವರ ಕುಟುಂಬದವರಿಗೆ ಏರ್ಪಡಿಸಲಾದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಸಿಬ್ಬಂದಿ ವೆಂಕಟ್ರಮಣ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಿಬ್ಬಂದಿ ಮೇಲ್ವಿಚಾರಕ ಎಚ್.ಎಸ್. ರವಿ ಸ್ವಾಗತಿಸಿದರು. ಚಿತ್ರಾ ಡಿ .ವಂದಿಸಿದರು. ಸಿಬ್ಬಂದಿಗಳ ಮಕ್ಕಳಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ನಡೆಯಿತು.