ಮಂಗಳೂರು: ವಿಶ್ವ ಹಿಂದು ಪರಿಷತ್ ಬಜರಂಗದಳ ಛತ್ರಪತಿ ಶಿವಾಜಿ ಶಾಖೆ ಕುಮ್ಡೇಲ್ ಬಂಟ್ವಾಳ ಪ್ರಖಂಡ ಇದರ ಆಶ್ರಯದಲ್ಲಿ ಮೀನಾಕ್ಷಿ ಮತ್ತು ಮಾಲತಿ ಎಂಬುವವರಿಗೆ ಮನೆ ಹಸ್ತಾಂತರ ಕಾರ್ಯಕ್ರಮ ಬಂಟ್ವಾಳದ ಕುಮ್ಡೇಲು ಎಂಬಲ್ಲಿ ನಡೆಯಿತು.
ಮೀನಾಕ್ಷಿಯ ಪತಿ ಕೆಲ ವರ್ಷಗಳಿಂದ ತೀರಿಹೋಗಿದ್ದು ಮಗಳು ಮಾಲತಿ ಜೊತೆ ಹಳೆ ಮನೆಯಲ್ಲಿ ವಾಸವಾಗಿದ್ದರು. ಮೀನಾಕ್ಷಿ ಅವರ ಹಳೆಮನೆ ಹಳೆಯದಾಗಿದ್ದು ಬೀಳುವ ಅಂಚಿನಲ್ಲಿತ್ತು ಇದನ್ನು ಮನಗಂಡ ಬಜರಂಗದಳ ಭರತ್ ಕುಂಡಿಲ್ ನೇತೃತ್ವದಲ್ಲಿ ಸರಿಸುಮಾರು 5ಲಕ್ಷ ವೆಚ್ಚದಲ್ಲಿ ನೂತನ ಮನೆಯನ್ನು 1ತಿಂಗಳ ಅವಧಿಯಲ್ಲಿ ನಿರ್ಮಾಣ ಮಾಡಿ ಮನೆ ಹಸ್ತಾಂತರಿಸಿದರು.
ಈ ಬಡ ಕುಟುಂಬಕ್ಕೆ ಮನೆ ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಆರೆಸ್ಸೆಸ್ ಮುಖಂಡ ಪ್ರಭಾಕರ ಕಲ್ಲಡ್ಕ ಭಟ್, ಭುಜಂಗ ಕುಲಾಲ್, ರಘು ಸಕಲೇಶಪುರ, ಅಶೋಕ್ ಶೆಟ್ಟಿ ಸರಪಾಡಿ, ಮನೋಜ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಆರೆಸ್ಸೆಸ್ ಮುಖಂಡ ಪ್ರಭಾಕರ ಕಲ್ಲಡ್ಕ ಭಟ್ ದೀಪ ಪ್ರಜ್ವಲನ ಗೊಳಿಸಿದರು ಬಳಿಕ ಭಾರತ್ ಮಾತಾ ಭಾವಚಿತ್ರವನ್ನು ನೀಡಿ ಮನೆ ಹಸ್ತಾಂತರಿಸಿದರು.
ಆ ಬಳಿಕ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್ ಭರತ್ ಕುಮ್ಡೇಲು ನೇತೃತ್ವದಲ್ಲಿ ಭಜರಂಗದಳ ಮಾಡುವ ಸಮಾಜಮುಖಿ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಬಳಿಕ ಕಡೆಗೋಳಿ ವೃತ್ತದ ಬಳಿ ನೂತನವಾಗಿ ನಿರ್ಮಿಸಿದ ಕಲಶವನ್ನು ಕಲ್ಲಡ್ಕ ಪ್ರಭಾಕರ್ ಭಟ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.