ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೆ ಎಸ್ ಆರ್ ಟಿಸಿ ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಪರಿಶುದ್ಧ ಕುಡಿಯುವ ನೀರಿನ ಘಟಕವನ್ನು ಗ್ರಾ. ಯೋ. ಕಾರ್ಯ ನಿರ್ವಾಹಕ ನಿರ್ದೇಶಕರಾದ ಗೌರವಾನ್ವಿತ ಡಾ.ಎಲ್ ಹೆಚ್. ಮಂಜುನಾಥ್ ರವರು ಇಂದು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ. ಮುರಳಿದರ ಆಚಾರ್ಯ ಡಿಟಿಒ ಕೆ ಎಸ್ ಆರ್ ಟಿಸಿ ಪುತ್ತೂರು ವಿಭಾಗ, ಶ್ರೀ.ಆನಂದ ಸುವರ್ಣ ಗ್ರಾ.ಯೋ.ಸಮುದಾಯ ಅಭಿವೃದ್ದಿ ಕಾರ್ಯಕ್ರಮದ ಪ್ರಾದೇಶಿಕ ನಿರ್ದೇಶಕರು, ಶ್ರೀ.ಎ. ಉದಯ ಶೆಟ್ಟಿ. ಘಟಕ ವ್ಯವಸ್ಥಾಪಕರು ಕೆ ಎಸ್ ಆರ್ ಟಿಸಿ ಧರ್ಮಸ್ಥಳ ಡಿಪೋ, ಮಂಜುನಾಥ್ ಭಟ್ ಉಪಸ್ಥಿತಿ ಇದ್ದು ಮಾಹಿತಿ ನೀಡಿದರು.
ವೆಂಕಟ್ರಮಣ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಹೆಚ್ ಎಸ್. ರವಿ.ವಂದನಾರ್ಪಣೆ ಮಾಡಿದರು.