News Kannada
Saturday, December 02 2023
ಕ್ಯಾಂಪಸ್

ಮಂಗಳೂರು: ಬೆಸೆಂಟ್ ವಿದ್ಯಾ ಸಂಸ್ಥೆಯ ನಿವೃತ್ತ ದೈಹಿಕ ಶಿಕ್ಷಕಿ ವಸಂತಮ್ಮರವರಿಗೆ ಗೌರವ ಸನ್ಮಾನ

Mangaluru: Vasanthamma, a retired physical education teacher of Besant Educational Institution, was felicitated with the honour
Photo Credit : News Kannada

ಮಂಗಳೂರು: ಬೆಸೆಂಟ್ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ವಿಭಾಗದಲ್ಲಿ ದೈಹಿಕ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ವಸಂತಿ ಟೀಚರ್ ಅವರ 101ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಬೆಸೆಂಟ್ ಆಡಳಿತ ಮಂಡಳಿಯ ಪದಾಧಿಕಾರಿಗಳು ಶುಭಾಶಯ ಕೋರಿದರು.

ನಗರದ ಬೆಸೆಂಟ್ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆಯಾದ ಬೆಸೆಂಟ್ ರಾಷ್ಟ್ರೀಯ ಬಾಲಕಿಯರ ಪ್ರೌಢಶಾಲೆಯಲ್ಲಿ 1942 ರಿಂದ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ 1977 ರಲ್ಲಿ ವಯೋ ನಿವೃತ್ತರಾದ ವಸಂತಿ ಟೀಚರ್‌ ಅವರು ಆಗಸ್ಟ್ 28, 2022 ರಂದು ನೂರು ವಸಂತಗಳನ್ನು ಪೂರೈಸಿ 101ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ವಿಶೇಷವೆಂದರೆ ನಮ್ಮ ಬೆಸೆಂಟ್ ವಿದ್ಯಾ ಸಂಸ್ಥೆಯೂ ಶತಮಾನೋತ್ಸವವನ್ನು ಪೂರೈಸಿದ್ದು ಪ್ರಸ್ತುತ 104 ನೇ ವರ್ಷಕ್ಕೆ ಕಾಲಿರಿಸುತ್ತಿದೆ. ಸಹೋದ್ಯೋಗಿ ಮತ್ತು ವಿದ್ಯಾರ್ಥಿ ವಲಯದಲ್ಲಿ ವಸಂತಮ್ಮ ಎಂದೇ ಖ್ಯಾತರಾದ  ವಸಂತಿ ಟೀಚರ್‌ಸಂಸ್ಥೆಯ ಅಂದಿನ ಸಂಚಾಲಕರಾಗಿದ್ದ ಏಕಾಂಬರರಾಯರ ಸಲಹೆಯಂತೆ ಮದರಾಸಿನ YMCA ಯಲ್ಲಿ ದೈಹಿಕ ಶಿಕ್ಷಣ ಹಾಗೂ ಗೈಡಿಂಗ್ ತರಬೇತಿ ಪಡೆದು1942 ರಲ್ಲಿ ಬೆಸೆಂಟ್ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸೇವೆಗೆ ನಿಯುಕ್ತಿಗೊಂಡರು.

ತಮ್ಮ ಸೇವಾ ಅವಧಿಯಲ್ಲಿ ದಕ್ಷ ಹಾಗೂ ಕರ್ತವ್ಯನಿಷ್ಠೆಗೆ ಹೆಸರುವಾಸಿಯಾದ ಇವರ ಕಾರ್ಯವೈಖರಿಗೆ ಪ್ರತಿಫಲದ ರೂಪದಲ್ಲಿ ಬೆಸೆಂಟ್ ಸಂಸ್ಥೆಯು ದಸರಾ ಕ್ರೀಡಾಕೂಟ ಹಾಗೂ ಇಂಟರ್ ಸ್ಕೂಲ್ ಟೂರ್ನ್ಮೆಂಟ್‌ಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಶೈಕ್ಷಣಿಕ ಮತ್ತು ಕ್ರೀಡಾ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿದಹಿರಿಮೆ ಇರುವ  ವಸಂತಮ್ಮ ಅವರಿಗೆ 100 ವರ್ಷ ತುಂಬಿದರೂ ತಮ್ಮ ಅಂದಿನ ಸೇವಾವಧಿಯ ನೆನಪುಗಳು ಅವರ ಮನದಲ್ಲಿ ಇನ್ನೂ ಹಚ್ಚ ಹಸಿರಾಗಿಯೇ ಇವೆ. ಸುಮಾರು 35 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ 1977 ರಲ್ಲಿ ವೃತ್ತಿಯಿಂದ ನಿವೃತ್ತರಾದ  ವಸಂತಿ ಟೀಚರ್‌ರವರು ಪ್ರಸ್ತುತ ಕೋಟೆಕಾರ್ ಬೀರಿ ಪರಿಸರದಲ್ಲಿ ತಮ್ಮ ಸುಪುತ್ರನೊಂದಿಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.

ಸಂಸ್ಥೆಯ ಹೆಮ್ಮೆಯ ಪ್ರತಿನಿಧಿಯಾದ ವಸಂತಮ್ಮ ಅವರಿಗೆ 100 ವರ್ಷಗಳು ತುಂಬಿದ ಸವಿನೆನಪಿನಲ್ಲಿ ಬೆಸೆಂಟ್ ಆಡಳಿತ ಮಂಡಳಿಯ (ಡಬ್ಲ್ಯೂಎನ್‌ಇಎಸ್) ಪ್ರಸ್ತಕ ಸಾಲಿನ ಅಧ್ಯಕ್ಷರಾಗಿರುವ ಕುಡ್ಪಿ ಜಗದೀಶ್ ಶೆಣೈ, ಉಪಾಧ್ಯಕ್ಷರುಗಳಾದ ಮಣೇಲ್ ಅಣ್ಣಪ್ಪ ನಾಯಕ್, ಡಾ. ಮಂಜುಳಾ ಕೆ,ಟಿ. ಹಾಗೂ ಕಾರ್ಯದರ್ಶಿ ಶ್ರೀ ಸುರೇಶ್ ಪೈ, ಆಡಳಿತ ಮಂಡಳಿಯಸದಸ್ಯರು ಮತ್ತಿತರ ಗಣ್ಯರು ಅವರ ಮನೆಗೆ ತೆರಳಿ ಶುಭ ಹಾರೈಸಿದರು.

See also  ಮೈಸೂರು: ಬಡ ವಿದ್ಯಾರ್ಥಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು