News Kannada
Monday, March 27 2023

ಮಂಗಳೂರು

ಮಂಗಳೂರು: 2022ನೇ ಸಾಲಿನ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

Photo Credit : News Kannada

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಪ್ರಸ್ತುತ ಸಾಲಿನಲ್ಲಿ ಕೊಂಕಣಿ ಸಾಹಿತ್ಯ ಕಲೆ ಜಾನಪದ ಈ ಮೂರು ಕ್ಷೇತ್ರದಲ್ಲಿ ಸಾಧನೆಗೈದ ಕೊಂಕಣಿ ಮಹನೀಯರನ್ನು ಗೌರವಿಸಲಾಗುತ್ತಿದ್ದು 2022 ನೇ ಸಾಲಿನ ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.

ಕೊಂಕಣಿ ಸಾಹಿತ್ಯ ಪ್ರಶಸ್ತಿ – ಶ್ರೀ ಎಚ್. ಎಂ. ಪೆರ್ನಾಲ್ ಮಂಗಳೂರು
ಕೊಂಕಣಿ ಕಲಾ ಪ್ರಶಸ್ತಿ – ಶ್ರೀ ರಮೇಶ್ ಕಾಮತ್ ಬೆಂಗಳೂರು
ಕೊಂಕಣಿ ಜಾನಪದ ಪ್ರಶಸ್ತಿ – ಶ್ರೀಮತಿ ಕುಮುದಾ ಗಡಕರ್, ಕಾರವಾರ

ಪ್ರಶಸ್ತಿಗಾಗಿ ಆಯ್ಕೆಯಾಗಿರುವ ಮೂವರನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಅಭಿನಂದಿಸುತ್ತಿದೆ.

ಗೌರವ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 18.09.2022, ಭಾನುವಾರ ಬೆಂಗಳೂರು, ಮಲ್ಲೇಶ್ವರಂನ ಕಾಶೀಮಠದಲ್ಲಿ ನೆರವೇರಲಿದೆ. ಬೆಳಿಗ್ಗೆ 9.00 ರಿಂದ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ಕಾರ್ಯಕ್ರಮದಿಂದ ಪ್ರಾರಂಭವಾಗಲಿದೆ ಹಾಗೂ ದಿನವಿಡೀ ಕೊಂಕಣಿಯ ವಿವಿಧ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮಗಳೊಂದಿಗೆ ಅದೇ ದಿನ ಸಂಜೆ 5.00 ಗಂಟೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಉನ್ನತ ಶಿಕ್ಷಣ ಜೈವಿಕ ತಂತ್ರಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರು, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಡಾ. ಸಿ. ಎನ್ ಅಶ್ವತ್ಥನಾರಾಯಣ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು, ಇಂಧನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ವಿ ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿರುವರು, ಕಾರ್ಯಕ್ರಮದ ಗೌರವ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ ಹಾಗೂ ಶಿಕ್ಷಣ ತಜ್ಞರಾದ ಡಾ.ಪಿ.ದಯಾನಂದ ಪೈ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಡಾಕಿ ಜಗದೀಶ್ ಪೈ ಇವರು ವಹಿಸಿಲಿರುವರು.

ಈ ಸಂದರ್ಭದಲ್ಲಿ ಅಕಾಡೆಮಿ ತ್ರೈಮಾಸಿಕ ಪತ್ರಿಕೆ ‘ಕೊಂಕಣಿ ಸಿರಿಸಂಪದ ಹಾಗೂ ಪ್ರಶಸ್ತಿ ಪುರಸ್ಕೃತರ “ಪರಿಚಯ ಪುಸ್ತಕ”, ಅಕಾಡೆಮಿ ಪ್ರಕಟಣೆಗಳಾದ ಭುಂಯ್‌ ಕಾಂಪ್, ಶೃಂಗಾನ ಸಾಂಗಿಲೆ ಪುಲ್ಟಾ ಕಾಣೋ ಕೃತಿಗಳನ್ನು ಬಿಡುಗಡೆಗೊಳಿಸಲಾಗುವುದು, ಶ್ರೀ ಡಿ ವಿ ಸದಾನಂದ ಗೌಡ, ಮಾನ್ಯ ಸಂಸದರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ, ಶ್ರೀ ಡಿ. ವೇದವ್ಯಾಸ ಕಾಮತ್, ಮಾನ್ಯ ಶಾಸಕರು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಶ್ರೀ ಪ್ರತಾಪಸಿಂಹ ನಾಯಕ್, ಮಾನ್ಯ ವಿಧಾನ ಪರಿಷತ್‌ ಸದಸ್ಯರು, ಡಾ| ಎನ್ ಮಂಜುಳಾ, ಭಾ.ಆ.ಸೇ, ಸರ್ಕಾರದ ಕಾರ್ಯದರ್ಶಿಗಳು ಕನ್ನಡ ಆನಿ ಸಂಸ್ಕೃತಿ ಇಲಾಖೆ ಶ್ರೀ ಪ್ರಕಾಶ್ ಜಿ, ಟಿ, ನಿಟ್ಬಾಲಿ ಕ.ಆ.ಸೇ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ವಿ ಎನ್ ಮಲ್ಲಿಕಾರ್ಜುನ ಸ್ವಾಮಿ ಜಂಟಿ ನಿರ್ದೇಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಶ್ರೀಮತಿ ಜಯ ಶ್ರೀ ಶಾನಭಾಗ್, ಕೊಂಕಣಿ ಸಾಹಿತಿ, ಮೈಸೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು, ರಾತ್ರಿ ಶ್ರೀ ಪುತ್ತೂರು ನರಸಿಂಹ ನಾಯಕ ಇವರಿಂದ ಕೊಂಕಣಿ ಸಂಗೀತ ಕಚೇರಿ ನಡೆಯಲಿದೆ, ಈ ಕಾರ್ಯಕ್ರಮಕ್ಕೆ ಬೆಂಗಳೂರಿನ ಹಲವು ಸಂಘಸಂಸ್ಥೆಗಳ ಕೊಂಕಣಿ ಭಾಂದವರ ಸಹಕಾರವಿರುತ್ತದೆ.

2022-23 ನೇ ಸಾಲಿನ ಪ್ರಮುಖ ಕಾರ್ಯಕ್ರಮಗಳ ಸಂಕ್ಷಿಪ್ತ ಮಾಹಿತಿ

See also  ವಾರ್ಡ್ ಕಮೀಟಿ ರಚನೆಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ

1. ಕೊಂಕಣಿ ಮಾನ್ಯತಾ ದಿನಾಚರಣೆ
ಕೊಂಕಣಿ ಅಕಾಡೆಮಿಯು ಕೊಂಕಣಿ ಭಾಷೆಗೆ ಸಾಂವಿಧಾನಿಕ ಮನ್ನಣೆ ದೊರೆತ ಆಗಸ್ಟ್ 20ನೇ ದಿನಾಂಕವನ್ನು ಪ್ರತಿ ಸಾಲಿನಲ್ಲಿಯೂ “ಕೊಂಕಣಿ ಮಾನ್ಯತಾ ದಿನಾಚರಣೆ”ಯನ್ನಾಗಿ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದೆ. ಪ್ರಸಕ್ತ ಸಾಲಿನಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಮಂಗಳೂರು, ಹುಬ್ಬಳ್ಳಿ, ಕಾರವಾರ ದಾವಣಗೆರೆ ಹಾಗೂ ಬೆಳಗಾವಿಯಲ್ಲಿ ಆಚರಿಸಲಾಗಿದೆ.

2. ಕೊಂಕಣಿ ಲೋಕೋತ್ಸವ ಕಾರ್ಯಕ್ರಮ
ಪ್ರಸ್ತುತ ಸಾಲಿನಲ್ಲಿ ಹಮ್ಮಿಕೊಂಡಿರುವ ಗ್ರಾಮೋತ್ಸವ ಯೋಜನೆಯಡಿ ಮೊದಲ ಕಾರ್ಯಕ್ರಮವಾಗಿ ಕೊಂಕಣಿ ಲೋಕೋತ್ಸವ ಕಾರ್ಯಕ್ರಮವನ್ನು ಶಿರಸಿಯಲ್ಲಿ ನಡೆಸಲಾಗಿದೆ.

3.ಅಕಾಡಮಿ ಪುಸ್ತಕ ಪ್ರಕಟಣೆ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2022-23 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಪುಸ್ತಕ ಪ್ರಕಟಣೆ ಯೋಜನೆಯಡಿ ಅಕಾಡೆಮಿಯ ಪ್ರಸ್ತುತ ಸಾಲಿನ ಆಯವ್ಯಯದ ಮಿತಿಗೆ ಒಳಪಟ್ಟು ಲೇಖಕರಿಂದ ಕೊಂಕಣಿ ಸ್ವರಚಿತ ಪುಸ್ತಕಗಳ ಪ್ರಕಟಣೆ ಕಾರ್ಯ ನಡೆಯುತ್ತಿದೆ.

4. ಕೊಂಕಣಿ ಸಿರಿಸಂಪದ:
ಅಕಾಡೆಮಿಯ ಕಾರ್ಯ ಚಟುವಟಿಕೆಗಳನ್ನು ಪುಸ್ತಕ ರೂಪದಲ್ಲಿ ತಯಾರಿಸಿ ತ್ರೈಮಾಸಿಕವಾಗಿ ಪ್ರಕಟಿಸುವ ಯೋಜನೆಯಂತೆ ಏಪ್ರಿಲ್ 2022 ರಿಂದ ಸೆಪ್ಟೆಂಬರ ವರೆಗಿನ ಮಾಹಿತಿಯನ್ನು ಕೊಂಕಣಿ ಸಿರಿಸಂಪದಲ್ಲಿ ಪ್ರಕಟಿಸಲಾಗುತ್ತಿದೆ.

5.ಪುಸ್ತಕ ಖರೀದಿ :
ಕೊಂಕಣಿ ಲೇಖಕರಿಗೆ / ಪ್ರಕಾಶಕರಿಗೆ ಪ್ರೋತ್ಸಾಹ ನೀಡುವ ಯೋಜನೆಯಡಿ ಪ್ರತಿ ಸಾಲಿನಂತೆ ಈ ವರ್ಷವೂ ರೂ 2000/ ಮೌಲ್ಯದ ಪುಸ್ತಕಗಳನ್ನು ಖರೀದಿಸಲಾಗುವುದು.

6. ಕೊಂಕಣಿ ನಾಟಕೋತ್ಸವ:
2022 ಸಪ್ಟೆಂಬರ್ 26 ರಿಂದ 2022 ಅಕ್ಟೋಬರ್ 01 ರ ವರೆಗೆ ಮಂಗಳೂರಿನ ಡಾನ್‌ಬಾಸ್ಕೊ ಸಭಾಂಗಣದಲ್ಲಿ ಕೊಂಕಣಿ ನಾಟಕೋತ್ಸವವು ವೈಭವಯುತವಾಗಿ ನೆರವೇರಲಿದೆ. ಆರು ದಿನಗಳ ಕಲಾ ಉತ್ಸವದಲ್ಲಿ ರಾಜ್ಯದ ಹೆಸರಾಂತ 6 ಕೊಂಕಣಿ ನಾಟಕ ತಂಡಗಳಿಂದ ನಾಟಕ ಪ್ರದರ್ಶನ ನಡೆಯಲಿದೆ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು