News Kannada
Tuesday, October 04 2022

ಮಂಗಳೂರು

ಬೆಳ್ತಂಗಡಿ: ತಾಲೂಕು ಮಟ್ಟದ ಬ್ರಹ್ಮ ಶ್ರಿ ನಾರಾಯಣಗುರುಗಳ ಜಯಂತಿ ಕಾರ್ಯಕ್ರಮ - 1 min read

Belthangady: Taluk-level Brahma Sri Narayana Guru's Birth Anniversary Programme
Photo Credit : By Author

ಬೆಳ್ತಂಗಡಿ: ಬದುಕು ಮತ್ತು ಬೋದನೆಯಿಂದ ಜನಮಾನಸದಲ್ಲಿ ಜನರ ಮನಸ್ಸನ್ನು ಗೆಲ್ಲುವರು ದಾರ್ಶನಿಕರು ಅವರೇ ಬ್ರಹ್ಮ ಶ್ರಿ ನಾರಾಯಣ ಗುರುಗಳು. ಕೆಳವರ್ಗದ ಜನರಿಗೆ ನಡೆದಾಡಲು, ಸರಿಯಾಗಿ ಬಟ್ಟೆಹಾಕಲು ಅವಕಾಶವಿಲ್ಲ, ದೇವಸ್ಥಾನಗಳಿಗೆ ಪ್ರವೇಶ ಇಲ್ಲ ಎಂಬ ಸ್ಥಳದಲ್ಲಿ ಶಿವನ ದೇವಸ್ಥಾನ ನಿರ್ಮಿಸಿ ಕೆಳವರ್ಗದವರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡಿದರ ಜೊತೆ ಶಿಕ್ಷಣ ಕ್ರಾಂತಿಯನ್ನು ಮಾಡಿದ ನಾರಾಯಣ ಗುರುಗಳು ಒಂದೆ ಜಾತಿ, ಒಂದೇ ಮತ, ಒಂದೇ ದೇವರು ಎಂದು ಸಂದೇಶ ಸಾರಿದ ನಾರಾಯಣ ಗುರುಗಳು ಸರ್ವಕಾಲದಲ್ಲು ಪುಜಿಸಲ್ಪಡಬೇಕಾದ ದೊಡ್ಡ ಶಕ್ತಿ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರಿ ಶ್ರಿ ಬ್ರಹಮ್ಮಾನಂದ ಸ್ವಾಮೀಜಿ ನುಡಿದರು.

ಅವರು ಶನಿವಾರ ಕನ್ಯಾಡಿ ದೇವರ ಗುಡ್ಡೆಮಠದಲ್ಲಿ ರಾಷ್ಟ್ರೀಯ ಹಬ್ಬ ಹಾಗೂ ಪುರುಷರ ಜಯಂತಿ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಬ್ರಹ್ಮ ಶ್ರಿ ನಾರಾಯಣಗುರುಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶಿರ್ವಚನ ನೀಡುತ್ತಾ ಪ್ರತಿಯೊಬ್ಬರಿಗೂ ಬದುಕಿನ ಎಲ್ಲಾ ಆಯಾಮಗಳಲ್ಲಿ ಸ್ವಾತಂತ್ರ್ಯ ಇರಬೇಕು ಎಂದು ಚಿಂತಿಸಿ ಸಂಘರ್ಷಕ್ಕೆ ಅವಕಾಶಮಾಡಿಕೊಡದೆ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು ಎಂದು ಎಲ್ಲಾವರ್ಗದವರಿಗೂ ಸುಲಭವಾಗಿ ಶಿಕ್ಷಣ ಸಿಗಬೇಕು ಎಂದು ಶಿಕ್ಷಣ ಸಂಸ್ಥೆಗಳನ್ಬು ಪ್ರಾರಂಬಿಸಿದರು.

ದಾರ್ಮಿಕ ಪ್ರಜ್ಞೆ ಬೆಳೆಯಲು ದೇವಸ್ಥಾನಗಳನ್ನು ಕಟ್ಟಿದವರು ನಾರಾಯಣ ಗುರುಗಳು.ಸತ್ಯದರ್ಮವನ್ನು ಪಾಲಿಸಿ ಜಾತಿಯೆಂಬ ಸಂಕೋಲೆಯಿಂದ ಹೊರಬಂದು ನಾವೆಲ್ಲ ಭಾರತೀಯರು ಎಂಭ ಭಾವನೆ ಪ್ರತಿಯೊಬ್ಬರಲ್ಲಿ ಬರಬೇಕು ಆಗ ನಾರಾಯಣ ಗುರುಗಳ ಸಂದೇಶವನ್ನು ಪಾಲಿಸುತ್ತಿದ್ದೇವೆ ಎಂದರ್ಥ ಎಂದರು. ಖ್ಯಾತ ವೈದ್ಯರಾದ ಡಾ ಪ್ರದೀಪ್ ನಾವೂರ ಉಪನ್ಯಾಸ ನೀಡುತ್ತಾ ಮಾನವೀಯತೆಯ ಸಂದೇಶ ಸಾರಿದವರು ನಾರಾಯಣ ಗುರುಗಳು.ಮೇಲ್ಜಾತಿ ಕೀಲ್ಜಾತಿ ಎಂಬ ತಾರತಮ್ಯ ಭವಿಷ್ಯಕ್ಕೆ ಅಪಾಯ ಎಂದು ಅರಿತು ಅದನ್ನು ಸಂಘರ್ಷರಹಿತವಾಗಿ ಹೋಗಲಾಡಿಸಿದವರು.

ಇಂದು ಸರ್ವದರ್ಮ ಸಮ್ಮೇಳನಗಳು ನಡೆಯಬೇಕಾರದರೆ ಅದಕ್ಕೆ ಮೂಲ ಪ್ರೇರಣೆ ನಾರಾಯಣಗುರುಗಳು ಎಂದರು.ಶಾಸಕ ಹರೀಶ್ ಪೂಂಜಾ ಅದ್ಯಕ್ಷತೆ ವಹಿಸಿ ಮಾತನಾಡಿ ಸಂಘಟಿತರಾಗಬೇಕು ಮತ್ತು ಜ್ನಾನಾರ್ಜನೆಯಮೂಲಕ ಒಂದಾಗಿ ಎಂದು ಶಿಕ್ಷಣಕ್ಕೆ ಒತ್ತು ನೀಡಿದವರು ನಾರಾಯಣ ಗುರುಗಳು. ಜನರಲ್ಲಿ ದಾರ್ಮಿಕ ಪ್ರಜ್ಞೆ ಬೆಳೆಯಬೆಕು ಎಂದಿ 85 ಕ್ಕು ಹೆಚ್ಚು ಶಿವನ ದೇವಾಲಯ ಸ್ಥಾಪಿಸಿದವರು .ಅದರಲ್ಲಿ ಮಂಗಳೂರಿನ ಕುದ್ರೋಳಿ ದೇವಸ್ಥಾನವು ಒಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ.ಕೇರಳದಲ್ಲಿ ಹಿಂದೂ ಸಮಾಜ ಶಸಕ್ತವಾಗಿ ಉಳಿಯಬೇಕಾದರೆ ನಾರಾಯಣಗುರುಗಳೆ ಪ್ರೇರಣೆ .

ರಾಷ್ಟ್ರೀಯ ಸ್ವಯಂ ಸೇವಾ ಸಂಘದಲ್ಲೂ ಗುರುಗಳ ಸಂದೇಸಗಳು ಅಳವಡಿಸಲಾಗುತ್ತಿದೆ.ಭಾರತ ಭಾರತ ವಾಗಿ ,ಹಿಂದೂ ಸಮಾಜ ಹಿಂದೂ ಸಮಾಜವಾಗಿ ಉಳಿಯಬೇಕಾದರೆ ನಾರಾಯಣ ಗುರುಗಳ ತತ್ವ ಆದರ್ಶಗಳು ಮುಂದುರೆಯಬೇಕು.ಶ್ರಿ ಗುರುದೇವ ಮಠದಲ್ಲಿ ನಾರಾಯಣ ಗುರುಜಯಂತಿ ಆಚರಿಸುವ ಮೂಲಕ ಹಿರಿಯ ಸ್ವಾಮೀಜಿಗಳಾದ ಶ್ರಿ ಶ್ರಿ ಅತ್ಮಾನಂದ ಸ್ವಾಮಿಗಳ ಚಿಂತನೆಗಳಿಗೆ ಶಕ್ತಿತುಂಬುವಂತಾಗಿದೆ ಎಂದರು.ವಿದಾನ ಪರಿಷತ್ ಸದಸ್ಯ ಕೆ ಪ್ರತಾಪ್ ಸಿಂಹನಾಯಕ್ ಶುಭಹಾರೈಸಿದರು.

ತಹಶಿಲ್ದಾರ್ ಪ್ರುಥ್ವಿಸಾನಿಕಮ್,ಅಕ್ರಮ ಸಕ್ರಮ ಸಮಿತಿಯ ಅದ್ಯಕ್ಷ ಜಯಂತ್ ಕೋಟ್ಯಾನ್,ಎ ಪಿ ಎಂ ಸಿ ಕಾರ್ಯದರ್ಶಿ ರವೀಂದ್ರ ಮತ್ತು ಎಲ್ಲಾ ಗ್ರಾ ಪಂ ಅದ್ಯಕ್ಷರುಗಳು ಉಪಸ್ಥಿತರಿದ್ದರು.ಬೆಳ್ತಂಗಡಿ ನಗರಪಂಚಾಯತ್ ಮುಖ್ಯಾದಿಕಾರಿ ರಾಜೇಶ್ ಸ್ವಾಗತಿಸಿ ಧರ್ಮಸ್ಥಳ ಗ್ರಾ ಪಂ ಉಪಾಧ್ಯಕ್ಷ ಶ್ರಿನಿವಾಸ್ ವಂದಿಸಿದರು.ಶಿಕ್ಷಕ ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

See also  ಬೆಳ್ತಂಗಡಿ : ಶ್ರೀ ಗುರುದೇವ ಮಠಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು