News Kannada
Saturday, October 08 2022

ಮಂಗಳೂರು

ಮಂಗಳೂರು: ಪಾಲಿಕೆ ಕಟ್ಟಡದ ಮುಂದೆಯೇ ಇದೆ ಅಪಾಯಕಾರಿ ಕಟ್ಟೆ - 1 min read

Mangaluru: In front of the MCC building, there is a dangerous embankment
Photo Credit : News Kannada

ಮಂಗಳೂರು : ಮಹಾನಗರ ಪಾಲಿಕೆಯ ಮುಂಭಾಗ ದಲ್ಲಿರುವ ಕಟ್ಟೆಯು ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ . ಪಾಲಿಕೆ ಕಟ್ಟಡದ ಮುಂಭಾಗದಲ್ಲಿರುವ ಕಟ್ಟೆಯಲ್ಲಿ ಅನೇಕರು ಪ್ರಯಾಣಿಕರು ಪಾದಚಾರಿಗಳು ಕೆಲವೊಮ್ಮೆ ಕುಳಿತುಕೊಳ್ಳುತ್ತಾರೆ , ಈ ವೇಳೆ ಸ್ವಲ್ಪ ಎಚ್ಚರ ವಹಿಸಿದರೂ ಇಲ್ಲಿ ಕೆಳಕ್ಕೆ ಬೀಳುವ ಭಯವಿದೆ. ಆದರೆ ಕುಳಿತುಕೊಳ್ಳುವ ಸಮಯದಲ್ಲಿ ಕೆಲವರು ಇದನ್ನು ಗಮನಿಸುವುದಿಲ್ಲ ಹೀಗಾಗಿ ಅಪಾಯ ಎದುರಾಗುವ ಸಾಧ್ಯತೆ ಇದೆ.

ಪಾಲಿಕೆ ಮುಂಭಾಗದಲ್ಲಿರುವ ಕಟ್ಟೆಯಲ್ಲಿ ಕುಳಿತು ವ್ಯಕ್ತಿಯೊಬ್ಬರು ಕೆಲವು ತಿಂಗಳ ಹಿಂದೆ ಆಯತಪ್ಪಿ ಸುಮಾರು ಇಪ್ಪತ್ತು ಅಡಿ ಕೆಳಕ್ಕೆ ಬಿದ್ದ ಸುಮಾರು 1ಗಂಟೆ ಕಾಲ ಯಾರಿಗೂ ಗೊತ್ತಾಗಿರಲಿಲ್ಲ ,ಬಳಿಕ ಅಲ್ಲಿನ ಸಿಬ್ಬಂದಿ ಸೇರಿ 108 ಆಂಬುಲೆನ್ಸ್ ಗೆ ಕರೆ ಮಾಡಿ ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದರು.

ಪಾಲಿಕೆಯ ಮುಂಭಾಗದಲ್ಲಿರುವ ಕಟ್ಟೆಯಲ್ಲಿ ರಸ್ತೆಗಿಂತ 10ರಿಂದ 12 ಅಡಿಯಷ್ಟೇ ಕೆಳಗಿವೆ .ಇಲ್ಲಿ ರಸ್ತೆಯಿಂದ ನೇರವಾಗಿ ಮೊದಲ ಮಹಡಿಗೆ ಪ್ರವೇಶ ದ್ವಾರವಿದೆ ಬಲಭಾಗದಲ್ಲಿ ಕೆನರಾಬ್ಯಾಂಕ್ ,ಪಕ್ಕದಲ್ಲಿ ಕೂಡ ಪಾಲಿಕೆ ಮುಂಭಾಗ ಸೇರಬಹುದು ತಳ ಅಂತಸ್ತಿನಲ್ಲಿ ಮಂಗಳೂರು ವನ್ , ದಾರಿದೀಪ ಇತ್ಯಾದಿ ವಿಭಾಗಗಳಿವೆ.

ಮನಪಾ ಕಟ್ಟಡದ ಮುಂದಿನ ಜಾಗಕ್ಕೆ ತಡೆ ಗೋಡೆ ಕಟ್ಟಲಾಗಿದ್ದು ಅದುವೇ ಈ ಕಟ್ಟೆಯ ರಸ್ತೆಯ ಪಕ್ಕದಲ್ಲಿಯೇ ಫುಟ್ ಪಾತ್ ಅದಕ್ಕೆ ತಾಗಿಕೊಂಡು ಸುಮಾರು 150 ಮೀಟರ್ ಉದ್ದಕ್ಕೆ ಈ ಕಟ್ಟೆ ಇದೆ .ಈ ಕಟ್ಟೆಯೇ ಸಭ್ಯ ಅಪಾಯಕಾರಿ ಮನಪಾ ಮುಂಭಾಗದಲ್ಲಿಯೇ ಅನೇಕ ಮಂದಿ ಬರುವದು ಸಾಮಾನ್ಯ ಅದರಲ್ಲೂ ಪ್ರತಿಭಟನೆ ಸಭೆ ಇತ್ಯಾದಿ ನಡೆಯುತ್ತಿರುತ್ತದೆ ಅಲ್ಲದೆ ಮುಂಭಾಗ ಮರ ಇರುವ ಕಾರಣ ನೆರಳಿಗೆ ಅನೇಕರು ಕಟ್ಟೆಯಲ್ಲಿ ಕುಳಿತುಕೊಂಡಿರುತ್ತಾರೆ ರಾತ್ರಿ ವೇಳೆಯೂ ಕೆಲವರು ಇರುತ್ತಾರೆ.

See also  ಮಂಗಳೂರು: ನಗರ ಭಯೋತ್ಪಾದನಾ ನಿಗ್ರಹ ದಳದಿಂದ ಅಣಕು ಪ್ರದರ್ಶನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು