News Kannada
Wednesday, November 29 2023
ಮಂಗಳೂರು

ಬೆಳ್ತಂಗಡಿ: ಇಂದಿನ ಶಿಕ್ಷಣ ಅಲೆಗಳಂತೆ ಸಾಗುತ್ತಿದ್ದು ಅವಶ್ಯಕತೆ ಕಡೆ ಹೋಗುತ್ತಿಲ್ಲ- ಬಿ.ಸಿ.ನಾಗೇಶ್

Belthangady: Today's education is going on like waves and not going towards the need: Minister B C Nagesh
Photo Credit : By Author

ಬೆಳ್ತಂಗಡಿ: ಶಿಕ್ಷಣ ಕ್ಷೇತ್ರದ ಮಹತ್ತರ ಬದಲಾವಣೆ ಉದ್ದೇಶದಲ್ಲಿ ರೂಪಿಸಲಾಗುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಸಾಕಷ್ಟು ಸಮೀಕ್ಷೆ, ಪರಿಶೀಲನೆಗಳು ನಡೆಯುತ್ತಿದ್ದು ಯಾವುದೇ ವರ್ಗದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಇದನ್ನು ರೂಪಿಸಲಾಗುವುದು. ಈ ಬಗ್ಗೆ ಹೆಚ್ಚಿನ ಜನರು ಒಲವು ತೋರುತ್ತಿದ್ದು ಇದು 2030 ರ ಒಳಗೆ ಜಾರಿಗೊಳ್ಳುವ ಸಂಭವವಿದೆ. ಇಂದಿನ ಶಿಕ್ಷಣ ಅಲೆಗಳಂತೆ ಸಾಗುತ್ತಿದ್ದು ಅವಶ್ಯಕತೆ ಕಡೆ ಹೋಗುತ್ತಿಲ್ಲ. ಶಿಕ್ಷಣ ಜನರಿಗೆ ಉದ್ಯೋಗವನ್ನು ನೀಡುವಲ್ಲಿ ಸಫಲವಾಗಿದೆ ಆದರೆ ನೆಮ್ಮದಿಯ ಜೀವನಕ್ಕೆ ಅಡಿಪಾಯವಾಗುತ್ತಿಲ್ಲ. ಇದಕ್ಕಾಗಿ ನೂತನ ನೀತಿಯ ಅಗತ್ಯವಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಸಕಾಲ ಇಲಾಖೆಯ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಅವರು ಶುಕ್ರವಾರ ಉಜಿರೆಯ ಸಿದ್ಧವನ ಗುರುಕುಲದಲ್ಲಿ ದಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಿನ್ಸಿಪಾಲರ ಸಂಘ ಹಾಗೂ ಉಜಿರೆ ಎಸ್ ಡಿಎಂ ಪದವಿ ಪೂರ್ವ ಕಾಲೇಜಿನ ಸಹಭಾಗಿತ್ವದಲ್ಲಿ ಜರಗಿದ ಜಿಲ್ಲಾಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದರು. ವ್ಯಕ್ತಿತ್ವದ ಬೆಳವಣಿಗೆಯೊಂದಿಗೆ ಸಾಧನೆಗಳನ್ನು ಪರಿಪೂರ್ಣಗೊಳಿಸುವ ಶಿಕ್ಷಣವನ್ನು ದ.ಕ. ಜಿಲ್ಲೆಯಲ್ಲಿ ನೀಡಲಾಗುತ್ತಿದೆ. ಇಲ್ಲಿನವರ ಸಾಧನೆ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ,ಇದು ಇತರರಿಗೆ ಮಾದರಿ ಹಾಗೂ ಪ್ರೇರಣೆಯಾಗಿದೆ ಎಂದರು.

ಉದ್ಘಾಟಿಸಿದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ ಅವರು, ಇಂದಿನ ತಂತ್ರಜ್ಞಾನ ಯುಗಕ್ಕೆ ಸರಿಯಾಗಿ ಶಿಕ್ಷಕರು ತಮ್ಮ ಜ್ಞಾನವನ್ನು ಉನ್ನತೀಕರಿಸಿಕೊಳ್ಳಬೇಕಾದ ಅಗತ್ಯವಿದೆ. ವಿದ್ಯಾರ್ಥಿಗಳ‌ ಕಲಿಕೆಯ ಸಾಮರ್ಥ್ಯ ವೇಗವಾಗಿರುವುದರಿಂದ, ಮಕ್ಕಳನ್ನು ಹಗುರವಾಗಿ ತೆಗೆದುಕೊಳ್ಳಲಾಗದು. ಹೀಗಾಗಿ ಶಿಕ್ಷಕರು ಸದಾ ಅಧ್ಯಯನ ಶೀಲರಾಗುವ ಅಗತ್ಯವಿದೆ ಎಂದರು.

ಮಕ್ಕಳ ಭವಿಷ್ಯ ರೂಪಿಸಲು ಪಿ.ಯು.ಸಿ. ಮುಖ್ಯವಾಗಿದೆ. ಶಿಕ್ಷಣ ಇರುವುದು ಸಾಧನೆಗಾಗಿ. ಮಕ್ಕಳನ್ನು ಸಾಧಕರಾಗುವತ್ತ ಗಮನಹರಿಸಬೇಕು. ಚಾರಿತ್ರ್ಯವಿಲ್ಲದ ಶಿಕ್ಷಣ ಪರಿಮಳವಿಲ್ಲದ ಹೂವಿನಂತೆ. ಜಿಲ್ಲೆಯ ಹಲವಾರು ಕಾಲೇಜುಗಳು ಪ್ರಾಚಾರ್ಯರ ಹೆಸರಿನಿಂದ ಗುರುತಿಸಲ್ಪಟ್ಟಿವೆ ಎಂಬುದನ್ನು ಅರಿತುಕೊಳ್ಳಿ ಎಂದು ಹೆಗ್ಗಡೆ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಸರಕಾರಿ ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅದರದೇ ಆದ ವಿಶೇಷ ಮಹತ್ವವಿದೆ. ಶಿಕ್ಷಣ ಕ್ಷೇತ್ರದಲ್ಲಿರುವ ವ್ಯಾಪಾರ ಮನೋಭಾವದಿಂದ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ಸವಾಲುಗಳನ್ನು ಎದುರಿಸುವ ಶಕ್ತಿಯೊಂದಿಗೆ ಮೌಲ್ಯಗಳನ್ನು ಅಳವಡಿಸಿಕೊಂಡು ಪರಿಕಲ್ಪನೆಗೆ ತಕ್ಕ ಶಿಕ್ಷಣ ನೀಡಬೇಕು. ಸರಕಾರಿ ಕಾಲೇಜುಗಳಲ್ಲಿ ಪ್ರವೇಶ ಪರೀಕ್ಷೆಗಳಿಗೆ ಬೇಕಾದ ಅಗತ್ಯ ತರಬೇತಿ ನೀಡುವ ಕೆಲಸವಾಗಬೇಕು ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಸಿ.ಡಿ. ಜಯಣ್ಣ, ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ ಚಂದ್ರ,ಎಸ್ ಡಿಎಂ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ದಿನೇಶ್ ಚೌಟ, ಉಪನಿರ್ದೇಶಕರ ಕಚೇರಿಯ ಶಾಖಾಧಿಕಾರಿ ನಿತಿನ್, ಪ್ರಿನ್ಸಿಪಾಲರ ಸಂಘದ ಉಪಾಧ್ಯಕ್ಷ ಸುಧೀರ್, ವಿನಾಯಕ,ಬಿಇಒ ವಿರೂಪಾಕ್ಷಪ್ಪ ಉಪಸ್ಥಿತರಿದ್ದರು.

See also  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯರಿಗೆ ಇಲ್ಲ: ಕಟೀಲ್

ಪ್ರಿನ್ಸಿಪಾಲರ ಸಂಘದ ಅಧ್ಯಕ್ಷ ಕೆ.ಎನ್. ಗಂಗಾಧರ ಆಳ್ವ ಸ್ವಾಗತಿಸಿದರು. ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ದೀಕ್ಷಿತ್ ರೈ ಹಾಗೂ ಮಹಾವೀರ ಜೈನ್ ಕಾರ್ಯಕ್ರಮ ನಿರೂಪಿಸಿದರು.

ಸಚಿವ ಬಿಸಿ ನಾಗೇಶ್ ಡಾ.ಡಿ‌.ವೀರೇಂದ್ರ ಹೆಗ್ಗಡೆಯವರನ್ನು ಸನ್ಮಾನಿಸಿದರು. ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಶಿಕ್ಷಣ ಸಚಿವರನ್ನು ಗೌರವಿಸಿದರು. ಎಸ್ ಡಿ ಎಂ ಪ.ಪೂ. ಕಾಲೇಜಿನಲ್ಲಿ ಉಚಿತ ಶಿಕ್ಷಣ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಪತ್ರ ನೀಡಲಾಯಿತು. 18 ಮಂದಿ ಸೇವಾ ನಿವೃತ್ತ ಪ್ರಿನ್ಸಿಪಾಲರನ್ನು 200 ಮಂದಿ ಯೂಟ್ಯೂಬ್ ತರಗತಿಗಳನ್ನು ಆರಂಭಿಸಲು ಪ್ರೇರಣೆ ಹಾಗೂ ಕಾರಣಕರ್ತರಾದ ಮತ್ತು ಆನ್ ಲೈನ್ ತರಗತಿಗಳನ್ನು ನಡೆಸಿದ ಉಪನ್ಯಾಸಕರನ್ನು ಗೌರವಿಸಲಾಯಿತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಶೇ.100 ಫಲಿತಾಂಶ ಪಡೆದ ಪದವಿಪೂರ್ವ ಕಾಲೇಜುಗಳನ್ನು ಅಭಿನಂದಿಸಲಾಯಿತು.

ತುಳು ಭಾಷೆಯನ್ನು ಬೋಧಿಸಲಾಗುತ್ತಿರುವ43 ಪ್ರೌಢಶಾಲೆಗಳ ಶಿಕ್ಷಕರಿಗೆ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವ ಧನ ನೀಡಲಾಗುತ್ತಿದೆ. ಆದರೆ ಇದೀಗ ಈ ವಿಷಯವನ್ನು ಕೆಲವು ಶಾಲೆಗಳಲ್ಲಿ ಕೈಬಿಡುವ ಸ್ಥಿತಿ ಏರ್ಪಟ್ಟಿದೆ. ಸರಕಾರ ತುಳು ವಿಷಯಕ್ಕೆ ಗೌರವ ಶಿಕ್ಷಕರನ್ನು ನೇಮಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಕೋವಿಡ್ ಸಮಯ 240ಕ್ಕಿಂತ ಅಧಿಕ ತರಗತಿ ನಡೆಸಿದ್ದ ಚಿತ್ರದುರ್ಗ ಚಳ್ಳಕೆರೆ ಸರಕಾರಿ ಪಿಯು ಕಾಲೇಜಿನ ಉಪನ್ಯಾಸಕ ಮಂಜುನಾಥ ತುಂಬಿನ ಕಟ್ಟೆ ಕೋವಿಡ್ ನಿಂದ ಮೃತ ಪಟ್ಟಿದ್ದು ಸರಕಾರದಿಂದ ಅವರಿಗೆ ಯಾವುದೇ ಸಹಾಯ ಸಿಕ್ಕಿಲ್ಲ.ಹಾಗೂ ಪೆನ್ಶನ್ ಸ್ಕೀಂಗೂ ಒಳಪಟ್ಟಿಲ್ಲ ಮೃತರ ಪತ್ನಿಗೆ ವಿದ್ಯಾಭ್ಯಾಸಕ್ಕೆ ತಕ್ಕ ಉದ್ಯೋಗವನ್ನು ನೀಡಲಾಗಿಲ್ಲ.ಇಬ್ಬರು ಹೆಣ್ಣು ಮಕ್ಕಳಿರುವ ಈ ಕುಟುಂಬ ತೀರಾ ಸಂಕಷ್ಟದಲ್ಲಿದೆ.ಈ ಕುಟುಂಬಕ್ಕೆ ದಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಿನ್ಸಿಪಾಲರ ಸಂಘದಿಂದ ರೂ.1,25,000 ನಗದು ಸಹಾಯಧನ ನೀಡಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು