ಬಂಟ್ವಾಳ: ರೈಲು ಡಿಕ್ಕಿಯಾಗಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ಪುರಸಭಾ ವ್ಯಾಪ್ತಿಯ ಮೊಡಂಕಾಪು ಎಂಬಲ್ಲಿ ನಡೆದಿದೆ.
ಮಂಡಾಡಿ ನಿವಾಸಿ ಪ್ರವೀಣ್ ಪೂಜಾರಿ (40) ಮೃತಪಟ್ಟ ವ್ಯಕ್ತಿ. ಪ್ರವೀಣ್ ಅವರು ಕೆಲಕಾಲದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು, ರೈಲ್ವೆ ಹಳಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರಬೇಕು ಎಂದು ಶಂಕಿಸಲಾಗಿದೆ. ಈತನ ತಲೆಗೆ ಬಲವಾದ ರೈಲಿನ ಏಟು ಬಿದ್ದ ರಕ್ತ ಸೋರಿಕೆಯಿಂದ ಮೃತಪಟ್ಟಿರಬೇಕು .
ರೈಲು ಡಿಕ್ಕಿಯಾಗಿ ಈತ ಪಕ್ಕದ ಪೊದೆ ಗೆ ಬಿದ್ದಿದ್ದ. ಸ್ಥಳೀಯರು ನೋಡಿ ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ನಗರ ಠಾಣಾ ಎಸ್. ಐ.ಅವಿನಾಶ್ ಅವರು ಸ್ಥಳಕ್ಕೆ ಭೇಟಿ ನೀಡಿ ವ್ಯಕ್ತಿಯ ಗುರುತು ಪತ್ತೆ ಹಚ್ಚಿ ಬಳಿಕ ರೈಲ್ವೆ ಇಲಾಖೆಗೆ ಮಾಹಿತಿ ನೀಡಿದ್ದಾರೆ.