ಮಂಗಳೂರು: ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ, ಕಾಲೇಜಿನ ಎನ್ ಎಸ್ ಎಸ್ ಘಟಕ ಹಾಗೂ ಸ್ಟ್ಯೂಡೆಂಟ್ಸ್ ಫಾರ್ ಡೆವಲೆಪ್ಮೆಂಟ್ ಮಂಗಳೂರು ವಿಭಾಗದ ಸಹಭಾಗಿತ್ವದಲ್ಲಿ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಅಂತಾರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನಾಚರಣೆಯನ್ನು ಇಂದು ಶನಿವಾರ, ಸೆ.17 ರಂದು ಆಚರಿಸಲಾಯಿತು.
ವಿಶೇಷ ಅಭ್ಯಾಗತರಾಗಿ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯುವ ನಾಯಕರು, ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಕಟೀಲ್ ಕನ್ಸ್ಟ್ರಕ್ಷನ್ಸ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಅಭಿಲಾಷ್ ಶೆಟ್ಟಿ ಕಟೀಲ್ ರವರು ಕಡಲತೀರ ಸ್ವಚ್ಛತೆಯಲ್ಲಿ ವಿದ್ಯಾರ್ಥಿಗಳ ಹಾಗೂ ಯುವಜನತೆಯ ಪಾತ್ರದ ಕುರಿತು ಮಾತನಾಡಿದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ರಾಮಕೃಷ್ಣ ಹೆಗಡೆ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಸಂಘಟನೆ (ಸೃಷ್ಠಿಕ) ಇದರ ಸಮನ್ವಯಕಾರರಾದ ಪ್ರೊ. ಕೆ. ಶ್ರೀನಾಥ್ ರಾವ್, ಕಾಲೇಜಿನ ಎನ್ ಎಸ್ ಎಸ್ ಘಟಕದ ಸಮನ್ವಯಕಾರರಾದ ಪ್ರೊ. ಶ್ರೀವತ್ಸ ಭಟ್, ಸ್ಟ್ಯೂಡೆಂಟ್ಸ್ ಫಾರ್ ಡೆವಲೆಪ್ಮೆಂಟ್ ಮಂಗಳೂರು ವಿಭಾಗದ ಶ್ರೀ ನಿಶಾನ್ ಆಳ್ವ, ಹಾಗೂ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.