ಬಂಟ್ವಾಳ: ಮೆಲ್ಕಾರ್ ಬಿರ್ವ ಸೆಂಟರ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ನಾಪತ್ತೆಯಾದ ಘಟನೆ ನಡೆದಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯ ಲ್ಲಿ ದೂರು ದಾಖಲಾಗಿದೆ.
ಮೂಲತಃ ಬಾಗಲಕೋಟೆ ನಿವಾಸಿ ಯಮನಪ್ಪ ಮಾದವ (40) ನಾಪತ್ತೆಯಾದ ವ್ಯಕ್ತಿ .
ಬಿರ್ಮ ಸೆಂಟರ್ ಮಾಲಕ ಸಂಜೀವ ಪೂಜಾರಿ ಅವರ ಮನೆ ಬೊಳ್ಳಾಯಿಯಲ್ಲಿ ಬಿಡಾರದಲ್ಲಿ ವಾಸವಾಗಿದ್ದ ಯಮನಪ್ಪ ಮಾದವ ಅವರು ಕೆಲಸಕ್ಕೆ ಎಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ನಾಗವ್ವ ಮಾದವ ಅವರು ದೂರು ನೀಡಿದ್ದಾರೆ.