ಬೆಳ್ತಂಗಡಿ: ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂದಾರು ಮೊಗ್ರು ಗ್ರಾಮದ ಗ್ರಾಮಸ್ಥರಿಗೆ ವಾರ್ಡ್ ವಾರು ಗ್ರಾಮೀಣ ಕ್ರೀಡಾಕೂಟವಾದ ಕಬಡ್ಡಿ ಮತ್ತು ಖೋ ಖೋ ಪಂದ್ಯಾಟವನ್ನು ಪುರುಷರಿಗೆ ಮತ್ತು ಮಹಿಳೆಯರಿಗಾಗಿ ಬಂದಾರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರುಗಿಸಲಾಯಿತು.
ಈ ಪಂದ್ಯಾಟದ ಉದ್ಘಾಟನೆಯನ್ನು ಬಂದಾರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಪರಮೇಶ್ವರಿ ಕೆ ಗೌಡ ಇವರು ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಗಂಗಾಧರ ಪೂಜಾರಿ, ಶಾಲೆಯ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಉಮೇಶ್ ಪೊಯ್ಯೋಳೆ, ಗ್ರಾಮ ಪಂಚಾಯತ್ ಸದಸ್ಯರುಗಳಾದ ದಿನೇಶ್ ಗೌಡ ಖಂಡಿಗ, ಸುಚಿತ್ರಾ, ಚೇತನ್ ಕುಮಾರ್, ಮೋಹನ್ ಗೌಡ, ಶಿವಗೌಡ, ಭಾರತಿ, ಅನಿತಾ, ಮಂಜುಶ್ರೀ, ವಿಮಲಾ, ಪುಷ್ಪಾವತಿ, ಬಾಲಕೃಷ್ಣಗೌಡ ಮುಗೆರಡ್ಕ ಶಾಲಾ ಮುಖ್ಯೋಪಾಧ್ಯಾಯರಾದ ಮಂಜಾ ನಾಯ್ಕ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಸುವರ್ಣ ಶಿಕ್ಷಕರಾದ ವಿಶ್ವನಾಥ ಪದ್ಮುಂಜ ಸಹಕಾರಿ ಸಂಘದ ಉಪಾಧ್ಯಕ್ಷ ಅಶೋಕ ಪಾಂಜಾಳ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಂದರ ಗೌಡ ತೀರ್ಪುಗಾರರಾದ ಕೃಷ್ಣಾನಂದ ರಾವ್ ಬೆಳಾಲು ಪ್ರೌಢಶಾಲೆಯ ದೈಹಿಕ ಶಿಕ್ಷ ಕರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ಕೆ ಇವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಮಂಜುಶ್ರೀ ಪ್ರಾರ್ಥನೆ ಹಾಡಿದರು ಸದಸ್ಯರಾದ ಚೇತನ್ ಧನ್ಯವಾದ ಸಲ್ಲಿಸಿದರು .
ಮಹಿಳೆಯರ ಕಬಡ್ಡಿ ಪಂದ್ಯಾಟದಲ್ಲಿ ವಿಷ್ಣುಮೂರ್ತಿ ಬಂದಾರು ಪ್ರಥಮ ಸ್ಥಾನವನ್ನು ಮೈರೋಳ್ತಡ್ಕ ದ್ವಿತೀಯ ಸ್ಥಾನವನ್ನು ಪಡೆದು ಕೊಂಡಿರುತ್ತದೆ. ಖೋ ಖೋ ಪಂದ್ಯಾಟದಲ್ಲಿ ವಿಷ್ಣುಮೂರ್ತಿ ಪ್ರಥಮ ಮೊಗ್ರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತದೆ. ಕಬಡ್ಡಿ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮೊಗ್ರು ವಾರಿಯರ್ಸ್ ಪಡೆದುಕೊಂಡು ದ್ವಿತೀಯ ಸ್ಥಾನವನ್ನು ಸಿದ್ದಿವಿನಾಯಕ ಬೈಪಾಡಿ ತಂಡ ಪಡೆದುಕೊಂಡಿರುತ್ತದೆ. ಖೋ ಖೋ ಪಂದ್ಯಾಟದಲ್ಲಿ ವಿಷ್ಣುಮೂರ್ತಿ ಬಂದಾರು ಪ್ರಥಮ ಮೊಗ್ರು ವಾರಿಯರ್ಸ್ ದ್ವಿತೀಯ ಸ್ಥಾನವನ್ನು ಪಡೆದು ಕೊಂಡಿರುತ್ತದೆ.