ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ ಸೆ.17 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್ ನಲ್ಲಿ ಪೆರ್ಮುಖ ಸುಬ್ರಹ್ಮಣ್ಯ ಭಟ್ ಅವರ ಕವನ ಸಂಕಲನ “ಚದುರಂಗ” ಬಿಡುಗಡೆ ಕಾರ್ಯಕ್ರಮ ನಡೆಯಿತು.
ಹಿರಿಯ ಸಾಹಿತಿಗಳಾದ ಪ.ರಾಮಕೃಷ್ಣ ಶಾಸ್ತ್ರಿ ಅವರು ಕೃತಿ ಬಿಎಉಗಡರ ಮಾಡಿ ಮಾತನಾಡುತ್ತಾ ಕವನಗಳು ಸೇರಿದಂತೆ ಸಾಹಿತ್ಯ ಹೆಚ್ಚು ಹೆಚ್ಚಾಗಿ ಸೃಷ್ಟಿಯಾಗುತ್ತಿದೆ ಆದರೆ ಗುಣಮಟ್ಟದ ಕಡೆಗೂ ಗಮನ ಹರಿಸಬೇಕಾಗಿದೆ ಎಂದರು.
ಕೃತಿ ಪರಿಚಯ ಮಾಡಿ ಮಾತನಾಡಿದ ಕವಯತ್ರಿ ಹಾಗೂ ಕಲಾವಿದೆ ಡಾ. ವೀಣಾ ಸುಳ್ಯ ಮಾತನಾಡಿ ಕವನ ಕಟ್ಟುವಿಕೆ ಮಾತ್ರ ಸಾಲದು ಅದು ಸಹೃದಯರಿಗೆ ತಲುಪುವಂತಾಗಬೇಕು ಎಂದರು. ಅತಿಥಿಯಾಗಿದ್ದ ವಿಮರ್ಶಕ ಅರವಿಂದ ಚೊಕ್ಕಾಡಿ ಮಾತನಾಡಿ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ. ಶ್ರೀನಾಥ್ ವಹಿಸಿ ಶುಭ ಹಾರೈಸಿದರು. ಕೃತಿಕಾರ ಸುಬ್ರಹ್ಮಣ್ಯ ಭಟ್ ಅವರ ಪತ್ನಿ ಶಾರದಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಸಾಪ ಗೌರವ ಕಾರ್ಯದರ್ಶಿ ರಾಮಕೃಷ್ಣ ಚೊಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು. ವಕೀಲರಾದ ಬಿ.ಎಂ ಭಟ್ ಪ್ರಸ್ತಾವನೆ ಮತ್ತು ಕೃತಿಗಾರರ ಪರಿಚಯದ ಮಾತುಗಳನ್ನಾಡಿದರು.
ಸುಜಾತಾ ಜಿ ಭಟ್ ಪ್ರಾರ್ಥನೆ ಹಾಡಿದರು. ಚದುರಂಗ ಹಾಡನ್ನು ಶಂಕರ, ಸುಜಾತಾ ಜಿ ಭಟ್ ಅವರು ಪ್ರಸ್ತುತಿಪಡಿಸಿದರು.
ಅಶ್ರಫ್ ಆಲಿಕುಂಞಿ ವಂದಿಸಿದರು.