News Kannada
Monday, September 25 2023
ಮಂಗಳೂರು

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ ಹೊಂಡ ಮುಚ್ಚುವ ಕಾರ್ಯಕ್ಕೆ ಮುಂದಾದ ಬಿಜೆಪಿ ಕಾರ್ಯಕರ್ತರು

Belthangady: BJP workers take up the task of filling up a pothole on national highway
Photo Credit : By Author

ಬೆಳ್ತಂಗಡಿ: ಹೊಂಡಗಳಿಂದ ತುಂಬಿ ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ನಾಗರಿಕರೇ ಶ್ರಮದಾನದ ಮೂಲಕ ತೇಪೆ ಹಾಕುವ ಪರಿಸ್ಥಿತಿ ಬಂದೊದಗಿರುವುದು ವಿಪರ್ಯಾಸವಾಗಿದೆ.

ತಾಲೂಕಿನಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ತೀರ ಹದಗೆಟ್ಟಿದ್ದು ಹೊಂಡ ಗುಂಡಿಗಳಿಂದ ಆವೃತವಾಗಿದೆ. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪಟ್ಟಣ ಹಾಗೂ ಲಾಯಿಲ ಬಿಜೆಪಿ ಕಾರ್ಯಕರ್ತರು ಜಲ್ಲಿ ಹಾಗೂ ಸಿಮೆಂಟ್ ಮಿಶ್ರಿತ ರೆಡಿಮೆಕ್ಸ್ ಬಳಸಿ ತೇಪೆ ಕಾರ್ಯಕ್ಕೆ ಮುಂದಾದರು.

ಹೆದ್ದಾರಿ ಇಲಾಖೆಯಿಂದ ಯಾವುದೇ ನಿರ್ವಹಣೆ ತೋರದ ಹಿನ್ನೆಲೆ ಯುವಕರೇ ರಾತ್ರಿ ಹೊತ್ತು ಸುಮಾರು 5 ರಿಂದ 6 ಲೋಡ್ ಸಿಮೆಂಟ್ ಬಳಸಿ ತೇಪೆ ಕಾರ್ಯ ನಡೆಸಿದರು‌. ನಿದ್ರೆಯಲ್ಲಿರುವ ಇಲಾಖೆ ಇನ್ನಾದರೂ ಎಚ್ಚೆತ್ತು ಕೊಳ್ಳಬೇಕಿದೆ.

See also  ಮಂಗಳೂರು: ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಅಗ್ನಿಪಥ್‌ ಯೋಜನೆ ವಿರುದ್ದ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು