ಮಂಗಳೂರು: ಪಿಯುಸಿ ವಿದ್ಯಾರ್ಥಿಯೊಬ್ಬ ಬಸ್ಸಿನಿಂದ ಬಿದ್ದು ತಲೆಗೆ ಗಾಯಗೊಂಡು ಮೃತಪಟ್ಟ ಘಟನೆಗೆ ಸಂಬಂಧಿಸಿ ಪೊಲೀಸರು ಬಸ್ಸಿನ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಕೇಸ್ ದಾಖಲಿಸಿದ್ದು ಇಬ್ಬರನ್ನು ಬಂಧಿಸಿದ್ದಾರೆ.
ಸೆಪ್ಟೆಂಬರ್ 7ರಂದು ಉಳ್ಳಾಲದ ಮಾಸ್ತಿಕಟ್ಟೆ ಯಿಂದ ಬರುತ್ತಿದ್ದ ಯಶ್ ರಾಜ್ ಎಂಬ ವಿದ್ಯಾರ್ಥಿ44ಡಿ ನಂಬರಿನ ಖಾಸಗಿ ಬಸ್ಸಿನಲ್ಲಿ ಉಳ್ಳಾಲದಿಂದ ಮಂಗಳೂರಿಗೆ ಕಾಲೇಜಿಗೆ ಬರುತ್ತಿದ್ದ ಈ ವೇಳೆ ಬಸ್ಸಿನಲ್ಲಿ ರಶ್ ಇದ್ದುದರಿಂದ ಎದುರುಭಾಗದ ಮೆಟ್ಟಿಲಿನಲ್ಲಿ ನೇತಾಡುತ್ತಿದ್ದ,ಯಶ್ ರಾಜ್ ಬಸ್ ಸಾಗುತ್ತಿದ್ದಾಗಲೇ ಉಳ್ಳಾಲದ ನೇತ್ರಾವತಿ ಸೇತುವೆಯ ಬಳಿ ರಸ್ತೆಗೆ ಎಸೆಯಲ್ಪಟ್ಟಿದ್ದು ಬಸ್ಸಿನ ಚಾಲಕನ ಧಾವಂತ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ವಿದ್ಯಾರ್ಥಿ ಹೊರಗೆಸೆಯಲ್ಪಟ್ಟಿದ್ದ ಈ ಬಗ್ಗೆ ಮೃತ ಹುಡುಗನ ತಾಯಿ ಪೊಲೀಸ್ ದೂರು ನೀಡಿದ್ದಾರೆ.
ಪೊಲೀಸರು ಬಸ್ಸಿನ ಚಾಲಕ ಕುಪ್ಪೆ ಪದವು ನಿವಾಸಿ ಕಾರ್ತಿಕ್ ಶೆಟ್ಟಿ ಮತ್ತು ಬಸ್ಸಿನ ನಿರ್ವಾಹಕ ಆಂಬ್ಲಮೊಗರು ನಿವಾಸಿ ದಾಂಶೀರ್ ಎಂಬವರನ್ನು ಬಂಧಿಸಿದ್ದಾರೆ.
ಇವರನ್ನು ಸೆಪ್ಟೆಂಬರ್ 18 ರಂದು ಉಳ್ಳಾಲ ಬಸ್ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದು ಕೋರ್ಟ್ ಗೆ ಹಾಜರುಪಡಿಸಿದ್ದಾರೆ, ಕೋರ್ಟ್ 14ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ ಮಾನವ ಜೀವನಕ್ಕೆ ಹಾನಿಯಾಗುವಂತೆ ಬಸ್ ಚಲಾಯಿಸಿದ್ದರಿಂದ ಮತ್ತು ವಿದ್ಯಾರ್ಥಿಗಳು ಬಸ್ಸಿನ ಮೆಟ್ಟಿಲಲ್ಲಿ ನಿಂತು ಪ್ರಯಾಣಿಸಲು ಅವಕಾಶ ಕೊಟ್ಟು ನಿರ್ವಾಹಕ ನಿರ್ಲಕ್ಷ್ಯತನದಿಂದಾಗಿ ಇಬ್ಬರ ವಿರುದ್ಧ ಕೊಲೆಗೆ ಆಸ್ಪದ ನೀಡಬಲ್ಲ ಅಪರಾಧ ಎಸಗಿದ್ದಾರೆಂದು ಸೆಕ್ಷನ್ 304ಅಡಿ ಮತ್ತು 279ಮತ್ತು ೩೩೬ ದಕ್ಷಿಣ ಸಂಚಾರಿ ಠಾಣೆ ಪ್ರಕರಣ ದಾಖಲಿಸಲಾಗಿದೆ.