News Kannada
Sunday, October 01 2023
ಮಂಗಳೂರು

ಬಂಟ್ವಾಳ: ಕುಕ್ಕಾಜೆ ಸಿಂಧೂರ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

bantwal-kukkaje-sindhura-jnana-vikasa-kendras-anniversary-celebrations
Photo Credit : By Author

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್( ರಿ) ವಿಟ್ಲ ಇದರ ಕಾರ್ಯಕ್ಷೇತ್ರ ವ್ಯಾಪ್ತಿಯ ಸಾಲೆತ್ತೂರು ವಲಯದ ಕುಕ್ಕಾಜೆ ಸಿಂಧೂರ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವು ಕುಕ್ಕಾಜೆ ಕಂಚಿನಡ್ಕ ಪದವು ಅಂಬೇಡ್ಕರ್ ಭವನದಲ್ಲಿ ಇರಾ ಗ್ರಾ.ಪಂ‌. ಪಂಚಾಯತ್ ಅಧ್ಯಕ್ಷರಾದ ಆಗ್ನೆಸ್ ಡಿ ಸೋಜ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮವನ್ನು ಇರಾ ಪಂಚಾಯತ್ ಸದಸ್ಯರಾದ ಸುಧಾಕರ್ ರವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಧುರ ಭಟ್ ಕಲ್ಲಡ್ಕ ಇವರು ಮೊಬೈಲ್ ಬಳಕೆ ಯ ದುಷ್ಪರಿಣಾಮ ಹಾಗೂ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು.

ವಲಯ ಮೇಲ್ವಿಚಾರಕಿ ಮೋಹಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬೇಡ್ಕರ್ ಭವನ ದ ಉಸ್ತುವಾರಿ ಸಮಿತಿ ಸದಸ್ಯ ಚಂದಪ್ಪ, ನವಜೀವನ ಸಮಿತಿ ಸದಸ್ಯ ಉದಯ ನಾಯ್ಕ , ಕುಕ್ಕಾಜೆ ಬಿ ಒಕ್ಕೂಟದ ಉಪಾಧ್ಯಕ್ಷರಾದ ಜಗದೀಶ್ ಉಪಸ್ಥಿತರಿದ್ದರು.
ಜ್ಞಾನವಿಕಾಸ ಸಂಯೋಜಕಿ ರೇಣುಕಾ ಸ್ವಾಗತಿಸಿ. ಸೇವಾ ಪ್ರತಿನಿಧಿ ರೇವತಿ ವರದಿ ವಾಚಿಸಿದರು. ಸದಸ್ಯರಾದ ಸರಸ್ವತಿ ವಂದಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕೇಂದ್ರದ ಸದಸ್ಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

See also  ನಿಟ್ಟೆ ಶಶಿಧರ ಶೆಟ್ಟಿ ಅವರ ಸಾಧನೆ ದಾಖಲೀಕರಣಗೊಳ್ಳಲಿ: ಡಾ. ಧರ್ಮಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು