News Kannada
Tuesday, November 29 2022

ಮಂಗಳೂರು

ಬಂಟ್ವಾಳ: ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ - 1 min read

Bantwal: Sharada Puja at Tirumala Sri Venkataramana Swamy Temple Higher Primary School
Photo Credit : By Author

ಬಂಟ್ವಾಳ: ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 1933ರಲ್ಲಿ ಆರಂಭಗೊಂಡ ಶ್ರೀ ಶಾರದಾ ಪೂಜಾ ಸಮಿತಿ ವತಿಯಿಂದ 90ನೇ ವರ್ಷದ ಶಾರದಾ ಪೂಜೆ ಅ. 2ರಿಂದ 6ರತನಕ ಸಂಭ್ರಮ ಸಡಗರದಿಂದ ನಡೆಯಲಿದೆ ಎಂದು ದೇವಳದ ಮೊಕ್ತೇಸರ ಪಿ.ಪ್ರವೀಣ ಕಿಣಿ ಹೇಳಿದ್ದಾರೆ.

ಬಿ.ಸಿ.ರೋಡಿನಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅ.2ರಂದು ಬೆಳಿಗ್ಗೆ 8 ಗಂಟೆಗೆ ಶಾರದಾ ಪ್ರತಿಷ್ಠೆ, 9 ಗಂಟೆಗೆ ಕಾಶಿ ಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಶಾರದೆಗೆ ರಜತ ಕಿರಣ, ರಜತ ವೀಣೆ, ರಜತ ಪ್ರಭಾವಳಿ ಸಮರ್ಪಿಸುವರು ಎಂದರು.

ಅಂದು ಸಂಜೆ 6 ಗಂಟೆಗೆ ದುರ್ಗಾ ನಮಸ್ಕಾರ, 3ರಂದು ಬೆಳಿಗ್ಗೆ 8 ಗಂಟೆಗೆ ಸರಸ್ವತಿ ಹವನ, ಕಲಶ ಪ್ರತಿಷ್ಠೆ, ಸಂಜೆ 6ಗಂಟೆಗೆ ಚಂಡಿಕಾ ಹವನ, ಭಜನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಇದೆ. 4ರಂದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಜಲ್ಲೆ ಹೂವಿನ ಅಲಂಕಾರ, 5 ರಂದು ಬೆಳಿಗ್ಗೆ 11 ಗಂಟೆಗೆ ಅಕ್ಷರಾಭ್ಯಾಸ, ಸಂಜೆ 4 ಗಂಟೆಗೆ ಪ್ರತಿಭಾ ಪ್ರದರ್ಶನ, 5.30 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ. ಇಲ್ಲಿನ ಮರದ ಶಾರದಾ ವಿಗ್ರಹಕ್ಕೆ ಪ್ರತಿದಿನ ವಿಶೇಷ ಅಲಂಕಾರ ನಡೆಯಲಿದ್ದು, ವಿಗ್ರಹ ಜಲಸ್ತಂಭನ ಇರುವುದಿಲ್ಲ ಎಂದು ಅವರು ವಿವರಿಸಿದರು.

See also  ರೋಮ್: ಇಟಲಿಯಲ್ಲಿ ಪ್ರವಾಹ, 10 ಜನರ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು