ಮಂಗಳೂರು: ಚಿರತೆ ಚಿತ್ರ ಬಳಸಿ ಗರ್ಭಿಣಿಗೆ ಅವಹೇಳನ ಆರೋಪದಡಿ ಮಂಗಳೂರಿನ ಸಾಮಾಜಿಕ ಕಾರ್ಯಕರ್ತರಾಗಿರುವ ಬಿಲ್ಲವ ಮುಖಂಡ ಒಂದು ಕಾಲದ ಕಟ್ಟಡ ಸಂಘ ಪರಿವಾರದ ಮಾಜಿ ಕಾರ್ಯಕರ್ತ ಸುನೀಲ್ ಬಜಿಲಕೇರಿ ರಾತ್ರೋರಾತ್ರಿ ಮನೆಗೆ ತೆರಳಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಬಜ್ಪೆ ಠಾಣಾ ಪೋಲಿಸರಿಂದ ಸುನೀಲ್ ಬಜಿಲಕೇರಿ ಬಂಧನವಾಗಿದ್ದು ಫೇಸ್ಬುಕ್ಕಲ್ಲಿ ಗರ್ಭಿಣಿ ಬಗ್ಗೆ ಅವಹೇಳನಕಾರಿ ಬರೆದಿದ್ದು ಎನ್ನಲಾಗಿದೆ.
ನಮೀಬಿಯಾ ಚೀತಾಗೆ ಸೀಮಂತ ಯಾವಾಗ ಅಂತ ಪೋಸ್ಟ್ ಮಾಡಿ ಗರ್ಭಿಣಿಯ ಫೋಟೊಗೆ ಜೀತದ ಮುಖ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದರು ಗರ್ಭಿಣಿ ಮತ್ತು ಭಾರತೀಯ ಸಂಸ್ಕೃತಿಗೆ ಅವ ಹೇಳನ ಅಂತ ಎಡಪದವು ಗ್ರಾಮದ ಮಹಿಳೆ ಪೊಲೀಸ್ ದೂರು ನೀಡಿದ್ದರು.
ಹೀಗಾಗಿ ಸುನೀಲ್ ಬಜಿಲಕೇರಿ ಬಂಧನವಾಗಿದೆ ಬಿಜೆಪಿ ಮತ್ತು ಸರಕಾರದ ವಿರುದ್ಧ ಟೀಕೆ ಮಾಡುತ್ತಿದ್ದ ಸುನೀಲ್ ಬಜಿಲಕೇರಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಲವು ಬಿಜೆಪಿ ನಾಯಕರ ಬಗ್ಗೆ ಟೀಕೆ ಮಾಡಿದ್ದರು . ಪ್ರಧಾನಿ ನರೇಂದ್ರ ಮೋದಿ ನಮೀಬಿಯಾ ದಿಂದ ತಂದಿದ್ದ ಚೀತಾದ ಹೆಸರಿನಲ್ಲಿ ಮತ್ತೆ ಅವಹೇಳನದ ಪೋಸ್ಟ್ ಮಾಡಿದ್ದು ಇದರಿಂದ ಭಾರತೀಯ ಸಂಸ್ಕೃತಿ ಮತ್ತು ಮಹಿಳೆಯರಿಗೆ ಅಪಮಾನವಾಗಿದೆ ಅಂತ ದೂರಲಾಗಿದೆ . ಈ ಹಿಂದೆ ಹಿಂದೂ ಸಂಘಟನೆಗಳಿಂದ ಬಜಿಲಕೇರಿ ಹತ್ತು ಹಲವಾರು ಪ್ರಕರಣಗಳನ್ನು ಎದುರಿಸಿ ಸದ್ಯ ಸಂಘಟನೆಗಳಿಂದ ಹೊರಬಂದಿರುವ ಸುನಿಲ್ ಬಿಜೆಪಿ ನಾಯಕರ ವಿರುದ್ಧ ನಿತ್ಯಾ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಾರೆ.
ಕೊಲೆಯಾದ ವಿನಾಯಕ್ ಬಾಳಿಗಾ ಕುಟುಂಬದ ಪರ ಹೋರಾಟದಲ್ಲಿ ಬಜಿಲಕೇರಿ ಗುರ್ತಿಸಿಕೊಂಡು ಬಿಜೆಪಿ 1ವರ್ಗದ ಪ್ರಬಲ ವಿರೋಧಿಯಾಗಿದ್ದರು.
ಇದೀಗ ಒಂದು ಪೋಸ್ಟ್ ಗೆ ರಾತ್ರೋ ರಾತ್ರಿ ಮನೆಗೆ ನುಗ್ಗಿ ಸುನಿಲ್ ಬಜಿಲಕೇರಿ ಬಂಧನವಾಗಿರುವ ಬಗ್ಗೆ ಪರ ವಿರೋಧ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ . ಚಿರತೆ ಸೀಮಂತ ಪೋಸ್ಟ್ ಪ್ರಕರಣದಲ್ಲಿ ರಾತೋರಾತ್ರಿ ಬಂಧನವಾದ ಸುನೀಲ್ ಬಜಿಲ ಕೇರಿಗೆ ಮಧ್ಯಾಹ್ನ ಜಾಮೀನು ಮಂಜೂರಾಗಿದೆ . ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಂದರ್ಶನದ ವೀಡಿಯೋ ಆಡಿಯೋವನ್ನು ತಿರುಚಿದ್ದಾರೆಂದು ಆರೋಪಿಸಿ ಕಳೆದ ವರ್ಷ ಸುನಿಲ್ ಮಂಗಳೂರು ಪೊಲೀಸರು ಬಂಧಿಸಿದ್ದರು.