News Kannada
Friday, December 02 2022

ಮಂಗಳೂರು

ಮಂಗಳೂರು: ತೊಕ್ಕೊಟ್ಟಿನಲ್ಲಿ ನವಜಾತ ಶಿಶು ಪತ್ತೆ!

Photo Credit : News Kannada

ಮಂಗಳೂರು: ತೊಕ್ಕೊಟ್ಟಿನಲ್ಲಿ ನವಜಾತ ಶಿಶು ಪತ್ತೆ ಮನೆ ಮುಂದೆ ನಿಲ್ಲಿಸಿದ್ದ ಕಾರಿನಡಿ ಮಗು ಬಿಟ್ಟು ಹೋದ ಪಾಪಿಗಳು.

ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಕೆಳಗಡೆ ನವಜಾತ ಗಂಡು ಶಿಶು ಪತ್ತೆಯಾಗಿದ್ದು ಅಸ್ವಸ್ಥಗೊಂಡಿದ್ದ ಮಗುವಿಗೆ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ತೊಕ್ಕೊಟ್ಟು ಬಳಿಯ ಕಾಪಿಕಾಡಿನಲ್ಲಿರುವ ಗೇರು ಕೃಷಿ ಸಂಶೋಧನಾ ಕೇಂದ್ರ ಬಲಿಯ ಅಂಬಿಕಾರೋಡ್ ನಿವಾಸಿ ಅಮರ್ ಎಂಬುವರ ಮನೆ ಮುಂದಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಕೆಳಗಡೆ ನವಜಾತ ಶಿಶು ಪತ್ತೆಯಾಗಿದೆ.

ಗುರುವಾರ ಬೆಳಿಗ್ಗೆ ಅಮರ್ ಅವರು ಉಳ್ಳಾಲ ಶಾರದಾ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಅಮರ್ ಅವರು ತೀವ್ರ ಅಸ್ವಸ್ಥಗೊಂಡಿದ್ದ ಮಗುವನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಳ್ಳಾಲ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದು ಮಗುವನ್ನು ಬಿಟ್ಟು ಹೋದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

See also  ಕಾರವಾರ: ಕೆಟಿಪಿಪಿ ಕಾಯ್ದೆಯ ಮಾರ್ಗಸೂಚಿಗಳನ್ನ ಅರಿತು ಕಾರ್ಯ ನಿರ್ವಹಿಸಿ- ಪ್ರಿಯಾಂಗಾ ಎಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು