News Kannada
Friday, December 09 2022

ಮಂಗಳೂರು

ಬೆಳ್ತಂಗಡಿ: ಮದ್ಯ ವ್ಯಸನಿಗಳು ನಿಗ್ರಹ ಶಕ್ತಿ ಬೆಳೆಸಿಕೊಳ್ಳುವುದು ಬಹಳ ಮುಖ್ಯ

Belthangady: It is very important for alcoholics to develop suppressive power. D. Veerendra Heggade
Photo Credit : By Author

ಬೆಳ್ತಂಗಡಿ: “ವ್ಯಸನಿಯು ಹಲವಾರು ವರ್ಷಗಳಿಂದ ಮಾಡಿದ ಕುಡಿತದ ಅಭ್ಯಾಸದಿಂದ ಜೀವನದಲ್ಲಿ ಅನೇಕ ತಪ್ಪುಗಳು, ಕೋಪ, ಕ್ರೂರತ್ವ ಮುಂತಾದ ಸಮಸ್ಯೆಗೆ ತುತ್ತಾಗುತ್ತಾನೆ. ಆತನು ಮದ್ಯಪಾನವನ್ನು ಬಿಡಲು ಮನಸ್ಸು ಮಾಡಿದರೂ ಅವುಗಳು ಅವನನ್ನು ಸುಲಭವಾಗಿ ಬಿಡುವುದಿಲ್ಲವಾದರಿಂದ ಅದರ ದಾಸನಾಗಿಯೇ ಉಳಿಯುತ್ತಾನೆ. ಮದ್ಯಪಾನದಿಂದ ವ್ಯಸನಿಯು ವಿಷಯಾಸಕ್ತಿಗಳನ್ನು ಸಾಧಿಸಲು ಕಳ್ಳತನ ಹಾಗೂ ಇನ್ನಿತರ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುವಂತ ಮಾಡುತ್ತದೆ. ಕ್ರಮೇಣ ಅವನ ಮೂಲ ವ್ಯಕ್ತಿತ್ವ ನಾಶವಾಗಿ, ದುಷ್ಟನಾಗಿ, ಪಾಪಿಗಳಾಗಿ, ಚಾರಿತ್ರ್ಯ ಹೀನನಾಗಿ ಬದುಕಲು ಕಾರಣವಾಗುತ್ತದೆ. ಪಂಚೇಂದ್ರಿಯಗಳು ಮನುಷ್ಯನನ್ನು ದಾರಿತಪ್ಪಿಸುತ್ತವೆ. ಸ್ವಾಮೀಜಿಗಳು ತಪಸ್ಸು, ಧ್ಯಾನದಿಂದ ಇಂದ್ರಿಯ ಚಾಪಲ್ಯವನ್ನು ಹತೋಟಿ ಮಾಡುವ ಶಕ್ತಿ ಹೊಂದಿರುತ್ತಾರೆ. ಹಾಗೆಯೇ ವ್ಯಸನಿಗಳು ನಿಗ್ರಹ ಶಕ್ತಿ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಇಂದ್ರಿಯ ನಿಗ್ರಹ ಮಾಡುವುದು ದೊಡ್ಡ ಕೆಲಸ. ಎತ್ತರದಿಂದ ಕೆಳಗೆ ಬೀಳಲು ಕಷ್ಟ ಇಲ್ಲ. ಎತ್ತರಕ್ಕೆ ಏರಲು ಸಾಧನೆ ಬೇಕು. ಪರಿಪೂರ್ಣ ಮನಪರಿವರ್ತನೆಯಿಂದ ಇದು ಸಾಧ್ಯವೆಂದು ಜನಜಾಗೃತಿ ವೇದಿಕೆಯ ಮೂಲಕ ನಡೆಸಲ್ಪಡುವ ಮದ್ಯವರ್ಜನ ಶಿಬಿರಗಳು ಸಾಬೀತುಪಡಿಸಿವೆ. ಆದುದರಿಂದ ಮುಂದಿನ ದಿನಗಳಲ್ಲಿ ಧೈರ್ಯದಿಂದ ಕುಡಿತ ಬಿಡುವ ದೃಢ ಹೆಜ್ಜೆಯನ್ನು ಹಾಕಬೇಕು” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.

ಅವರು ಉಜಿರೆ, ಲಾಯಿಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ದಾಖಲಾಗಿ ಮದ್ಯವರ್ಜನದ ಚಿಕಿತ್ಸೆ ಪಡೆದ 186ನೇ ವಿಶೇಷ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶಿಬಿರದಲ್ಲಿ ರಾಜ್ಯದ ವಿವಿಧ ಕಡೆಗಳಿಂದ 67 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಬಿರಾರ್ಥಿಗಳನ್ನು ಉದ್ದೇಶಿಸಿ ‘ಇನ್ನು ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಸೋಲದೆ, ಚಂಚಲಕ್ಕೊಳಗಾಗದೆ, ಸ್ಥಿರವಾಗಿ ನಿಂತು ಪರಿವರ್ತನೆಗೊಳಗಾಗಬೇಕು ಮತ್ತು ಅಂತಹ ಸಂದರ್ಭದಲ್ಲಿ ಹಳೆಯ ಸ್ನೇಹಿತರು ನೀನು ನಿಷ್ರಯೋಜಕ ಎಂದು ಹೀಯಾಳಿಸಿದರೆ ಅದನ್ನು ಪ್ರಶಂಸೆ ಎಂದುಕೊಂಡು ಇಷ್ಟು ನಾನು ವರ್ಷ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಎಂದುಕೊಂಡು ದೃಢ ಸಂಕಲ್ಪ ಮಾಡಿಕೊಳ್ಳಬೇಕು. ಮುಂದಿನ ಜೀವನವನ್ನು ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳುವುದರ ಮೂಲಕ ಕುಟುಂಬದವರೊಂದಿಗೆ ಸು:ಖೀ ಜೀವನ ನಡೆಸಲು ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದವಿರಲಿ” ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಿಂದ ಮನೋವೈದ್ಯಕೀಯ ವಿಭಾಗದ ವೈದ್ಯರು ಮತ್ತು ಸಲಹೆಗಾರರ ಚಿಕಿತ್ಸಾ ತಂಡ ಆಗಮಿಸಿ ಈ ಕಾರ್ಯಕ್ರಮಕ್ಕೆ ಸಹಕರಿಸಿರುತ್ತಾರೆ. ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾೈಸ್, ಯೋಜನಾಧಿಕಾರಿ ಮೋಹನ್, ಶಿಬಿರಾಧಿಕಾರಿ ವಿದ್ಯಾಧರ, ಆರೋಗ್ಯ ಸಹಾಯಕಿ ಸೌಮ್ಯ ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ದಿನಾಂಕ:07.10.2022 ರಿಂದ ಪ್ರಾರಂಭವಾಗಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

See also  ಮಂಗಳೂರು| ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ: ಹರೇಕಳ-ಅಡ್ಯಾರು ನಡುವೆ ಸಂಪರ್ಕ ದೋಣಿ ಸ್ಥಗಿತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು