News Kannada
Friday, December 02 2022

ಮಂಗಳೂರು

ಉಜಿರೆ ಶಾರದಾ ಮಂಟಪದಲ್ಲಿ ಬೃಹತ್ ರಕ್ತದಾನ ಶಿಬಿರ

Massive blood donation camp at Ujire Sharada Mandapam
Photo Credit : By Author

ಬೆಳ್ತಂಗಡಿ: ರಕ್ತದಾನ ಶಿಬಿರದ ಮೂಲಕ ಅನೇಕ ಸಲ ಭಾಗವಹಿಸುವ ಮೂಲಕ ಉಜಿರೆ ಸಾರ್ಥಕ ಪಡೆದಿದೆ. ಇಂದು ರಕ್ತದಾನದ ಮೂಲಕ ಜಾಗೃತಿ ಆಗಿರುವುದು ಹರ್ಷದಾಯಕ ಎಂದು ಉಜಿರೆ ಜನಾರ್ದನ ದೇವಸ್ಥಾನದ ಶರತ್‌ ಕೃಷ್ಣ ಪಡುವೆಟ್ನಾಯ ಹೇಳಿದರು.

ಸೇವಾಭಾರತಿ ಕನ್ಯಾಡಿ, ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಉಜಿರೆ ಇವರ ನೇತೃತ್ವದಲ್ಲಿ, ರೋಟರಿ ಕ್ಲಬ್, ಬೆಳ್ತಂಗಡಿ ಬ್ಲಡ್ ಬ್ಯಾಂಕ್, ಜಿಲ್ಲಾ ಸರಕಾರಿ ವೆನ್‌ಲಾಕ್ ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ಅ.9 ರಂದು ಉಜಿರೆ ಶಾರದಾ ಮಂಟಪದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಉಜಿರೆಯಲ್ಲಿ ರಕ್ತದಾನ ಶಿಬಿರಗಳು ಈ ಪರಿಸರದಲ್ಲಿ ನಡೆಯುವ ಮೂಲಕ ಅನೇಕರ ಜೀವ ಸಂರಕ್ಷಣೆಗೆ ನಾಂದಿಯಾಗಲಿ ಎಂದು ಹೇಳಿದರು.

ರೋಟರಿ ಕ್ಲಬ್‌ ಅಧ್ಯಕ್ಷೆ ಮನೋರಮ ಭಟ್ ಮಾತನಾಡಿ, ರಕ್ತದ ಅವಶ್ಯಕತೆ ಇರುವಷ್ಟು ರಕ್ತದಾನ ಮಾಡುವ ಅವಶ್ಯಕತಯಿದೆ. ರಕ್ತದಾನ ಮಾಡುವವರು ಆರೋಗ್ಯವಂತರಾಗಿರಲು ಪ್ರಯತ್ನಿಸಬೇಕು. ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪರಿಣಾಮಕಾರಿಯಾಗಿ ಪ್ರಯತ್ನಿಸೋಣ ಎಂದು ಹೇಳಿದರು.

ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಅಧ್ಯಕ್ಷತೆ ವಹಿಸಿದರು. ಶ್ರೀಧರ್ ಕೆ.ವಿ. ಮಾತನಾಡಿ, ರಕ್ತದಾನದ ಮೌಲ್ಯ ಹಾಗೂ ರಕ್ತದ ಅವಶ್ಯಕತೆಯಿರುವವರಿಗೆ ನೆರವಾಗಿರುವ ಸಂದರ್ಭಗಳನ್ನು ವಿವರಿಸಿದರು.

ಸೇವಾಭಾರತಿ ಅಧ್ಯಕ್ಷ ವಿನಾಯಕ್ ರಾವ್, ವೆನ್ಲಾಕ್ ಬ್ಲಡ್ ಬ್ಯಾಂಕ್ ನ ತಾಂತ್ರಿಕ ಮೇಲುಸ್ತುವಾರಿ ಅಶೋಕ್, ಡಾ.ಸಾವಿ, ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಗೌಡ, ಪ್ರಗತಿ ಮಹಿಳಾ ಮಂಡಲ ಕಾರ್ಯದರ್ಶಿ ಗಾಯತ್ರಿ ಶ್ರೀಧರ್, ಸಹಿತ ವಿವಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಕಾರ್ಯದರ್ಶಿ ಶೇಖರ್ ಗೌಡ ಪ್ರಾಸ್ತಾವಿಸಿದರು. ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಉಪಾಧ್ಯಕ್ಷ ಗೋಪಾಲಕೃಷ್ಣ ಜಿ.ಕೆ. ನಿರೂಪಿಸಿದರು. ರಮೇಶ್ ಪೈಲಾರ್ ವಂದಿಸಿದರು‌.

See also  ಕಾರವಾರ: ನಾರಗೇರಿಯಲ್ಲಿ ಪ್ರತ್ಯಕ್ಷವಾದ ಕಾಳಿಂಗ ಸರ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು