ಮಂಗಳೂರು: ತುರ್ತು ಸೇವೆಯಾಗಿದ್ದ 108ಗೆ ಸೂಕ್ತ ಸಮಯದಲ್ಲಿ ಅನುದಾನ ಬಿಡುಗಡೆ ಮಾಡದೆ ಚಾಲಕ, ದಾದಿಯರಿಗೆ ಮೂರು ತಿಂಗಳ ವೇತನ ಕೊಡದೆ ಜನಸಾಮಾನ್ಯರಿಗೆ ತುರ್ತು ಚಿಕಿತ್ಸೆ ಒದಗಿಸದ ರಾಜ್ಯ ಸರಕಾರಕ್ಕೆ ಜನಸಾಮಾನ್ಯರ ಬಗ್ಗೆ ಕಾಳಜಿ ಮತ್ತು ಆಸಕ್ತಿ ಇಲ್ಲ ಎನ್ನುವುದನ್ನು ಸಾಬೀರುಪಡಿಸಿದ್ದಾರೆ ಎಂದು ಶಾಸಕರೂ, ವಿದಾನಸಭೆಯ ಉಪನಾಯಕರೂ ಆಗಿರುವ ಯು.ಟಿ.ಖಾದರ್ ಹೇಳಿದರು.
ನಿನ್ನೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಕಡೆ ಆಂಬ್ಯುಲೆನ್ಸ್ ಇದ್ದರೂ ಚಾಲಕರಿಲ್ಲದೆ ನಿಷ್ಪ್ರಯೋಜಕವಾಗಿದೆ. ಫರಂಗಿಪೇಟೆ ಸೇವಾಂಜಲಿ ಬಳಿ ಒಬ್ಬನೇ ಚಾಲಕ ಇದ್ದು, ಚಾಲಕರಿಗೆ ವೇತನವೂ ಆಗಿಲ್ಲ.
ನಗರ ಪ್ರದೇಶದಲ್ಲಿ ಬೈಕ್ ಆಂಬ್ಯುಲೆನ್ಸ್ ನಿಲ್ಲಿಸಿದ್ದಾರೆ, ಬೆಂಗಳೂರಿನಲ್ಲಿ ಅಪಘಾತ ಆದರೆ ಹತ್ತು ನಿಮಿಷದಲ್ಲಿ ಆಂಬ್ಯುಲೆನ್ಸ್ ಹೋಗಲು ಸಾಧ್ಯವಿದೆಯೇ? ಪಡಿತರ ಕಾರ್ಡ್ ಆನ್ಲೈನ್ ಅರ್ಜಿ, ಅಂಚೆ ಮೂಲಕ ತಲುಪುವ ವ್ಯವಸ್ಥೆ ನಾವು ಮಾಡಿಕೊಟ್ಟಿದ್ದರೂ ಬಂದ್ ಮಾಡಿದ್ದಾರೆ. ಜಿಲ್ಲೆ, ತಾಲೂಕು ಪಂಚಾಯತ್ ಚುನಾವಣೆ ನಡೆಸಿಲ್ಲ, ಗ್ರಾಮ ಪಂಚಾಯತ್ ಅಧಿಕಾರ ಮೊಟಕುಗೊಳಿಸಲಾಗಿದೆ. ಗ್ರಾಮ ಪಂಚಾಯತ್ ಯೋಜನೆ ಬಗ್ಗೆ ಬೆಂಗಳೂರಿನಲ್ಲಿ ಕುಳಿತು ಆದೇಶ, ಕಂಪೆನಿಯನ್ನೂ ಅವರೇ ನಿಗದಿಪಡಿಸಿದ್ದಾರೆ.
ಧ್ವಜಸ್ತಂಭಕ್ಕೆ ಮೂರುವರೆ ಲಕ್ಷ, ಒಂದೇ ಕಂಪೆನಿಗೆ ಕೊಡಬೇಕೆನ್ನುವ ಫರ್ಮಾನು. ರಾಷ್ಟ್ರಧ್ವಜದಲ್ಲೂ 40 ಶೇ. ಕಮಿಷನ್ ಬೇಕೇ? ಸ್ಥಳೀಯರಿಗೇ ಉದ್ಯೋಗ ಸಿಗಲೇಬಾರದಾ? ಇದರಿಂದಾಗಿ ಬಡವರು ಬಡವರಾಗೇ ಇದ್ದು ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ.
ಚೆಕ್ ಸಹಿ ಅಧಿಕಾರ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಬಿಟ್ಟು ಬೇರೆಯವರಿಗೆ ಕೊಡೋದಾದರೆ ಪಂಚಾಯತ್ ನಡೆಸಲು ಸಾಧ್ಯವೇ? ರಾಜ್ಯದಲ್ಲಿ ಆರುವರೆ ಸಾವಿರ ಗ್ರಾಮ ಪಂಚಾಯತ್ ಇದ್ದು, ಧ್ವಜಸ್ತಂಭವನ್ನೂ ಒಂದೇ ಕಂಪೆನಿಗೆ ಕೊಡೋದಾ? ಇದನ್ನು ತಕ್ಷಣ ರದ್ದುಪಡಿಸಿ ಸ್ಥಳೀಯ ಮಟ್ಟದಲ್ಲೇ ಗ್ರಾಮ ಪಂಚಾಯತ್ ನಿರ್ಮಿಸಲಿ. ಜನಸಾಮಾನ್ಯರ ಸಬಲೀಕರಣಕ್ಕೆ ಬಿಜೆಪಿ ಸರಕಾರ ಯೋಜನೆ ರೂಪಿಸಿಲ್ಲ.
ಭಾರತ ಐಕ್ಯತಾ ರ್ಯಾಲಿಯ ಯಶಸ್ಸು ಸಹಿಸದೆ ಬಿಜೆಪಿಯಿಂದ ಪತ್ರಿಕೆಗಳಲ್ಲಿ ಅಪಪ್ರಚಾರದ ಜಾಹಿರಾತು, ಆದರೂ ಜನ ಹೆಚ್ಚಾಗುತ್ತಲೇ ಹೋಗಿದ್ದಾರೆ. ನಾಲ್ಕು ಪತ್ರಿಕೆಯಲ್ಲಿ ಒಂದೇ ರೀತಿಯ ಸುಳ್ಳು ಸುದ್ದಿ ನೀಡಲಾಗಿದೆ.
ಪುಲ್ವಾಮಾದಲ್ಲಿ 80ಕ್ಕೂ ಅಧಿಕ ಸೈನಿಕರು ಪಾಕಿಸ್ತಾನದ ಭಯೋತ್ಪಾದಕರಿಂದ ಹತ್ಯೆಗೀಡಾದಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಎಲ್ಲಿದ್ದರು ಎನ್ನುವುದನ್ನು ಬಹಿರಂಗಪಡಿಸಿ, 250ಕೆಜಿ ಆರ್ ಡಿಎಕ್ಸ್ ತುಂಬಿದ್ದ ವಾಹನ ಎಲ್ಲಾ ಭದ್ರತೆ ದಾಟಿ ಸೈನಿಕರ ಬಸ್ ಬರುವಾಗಲೇ ಬಂದು ತಲುಪಿದ್ದೇಗೆ? ಗುಪ್ತಚರ ಇಲಾಖೆ ನಿಮ್ಮ ಕೈಯಲ್ಲಿದ್ದರೂ ನಿಮಗೇಕೆ ಗೊತ್ತಾಗಿಲ್ಲ. ಯಾವಾಗಲೂ ಎಲಿಕಾಪ್ಟರ್ ನಲ್ಲಿ ಹೋಗುತ್ತಿದ್ದವರು ಆವೃತ್ತು ಬಸ್ಸಲ್ಲಿ ಹೋಗಿದ್ದೇಕೆ? ಈ ಬಗ್ಗೆ ಇನ್ನೂ ತನಿಖೆ ಆಗದಿರುವುದೇಕೆ? ಯಾರ ವಿರುದ್ಧ ಕ್ರಮಕೈಗೊಳ್ಳಲಾಗಿದೆ? ಆರ್ ಡಿಎಕ್ಸ್ ಬಂದ ವಾಹನ ಭಾರತದ್ದಾ, ಪಾಕಿಸ್ತಾನದ್ದಾ? ಇದು ದೇಶ ಪ್ರೇಮವಾ? ಆ ಘಟನೆ ನಡೆದಾಗ ರಾಹುಲ್ ಗಾಂಧಿ ಪ್ರಧಾನಿಯಾಗಿದ್ರಾ?
ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಾಂಗ್ರೆಸ್ ಪಾಲಿಸಿ. ಎಸ್ಟಿ ಎಸ್ಸಿ ಮೀಸಲಾತಿ ಹೆಚ್ಚಳ ಹಿಂದಿನಿಂದಲೇ ಇದ್ದು ಕಾಂಗ್ರೆಸ್ ಸರ್ಕಾರ ಇದ್ದಾಗ ಸಮಿತಿ ಮಾಡಿದ್ದು, 2020ರಲ್ಲಿ ವರದಿ ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಕಾಂಗ್ರೆಸ್ ಎರಡು ಅಧಿವೇಶನಲ್ಲೂ ಚರ್ಚೆಗೆ ಅವಕಾಶ ನೀಡಿಲ್ಲ, ಮೊನ್ನೆ ಅಧಿವೇಶನದಲ್ಲಿ ಕಾಂಗ್ರೆಸ್ ನಿರಂತರ ಧರಣಿ ಮಾಡಿದ್ದರಿಂದ ಮೀಸಲಾತಿ ಹೆಚ್ಚಿಸಲಾಗಿದೆ. ನಮ್ಮ ಅವಧಿಯಲ್ಲಿ ಎಸ್ಸಿ ಎಸ್ಟಿಯವರಿಗೆ ಗುತ್ತಿಗೆಯಲ್ಲಿ ಶೇಖಡಾವಾರು ಮೀಸಲಾತಿ ಜಾರಿಗೆ ತಂದಿದ್ದು ಇತಿಹಾಸವಾಗಿದೆ.
ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಖರ್ಗೆ ಮೂಲಕ ಕನ್ನಡಿಗರಿಗೆ ಗೌರವ, ಕೊಟ್ಟ ಜವಾಬ್ದಾರಿ ಸೂಕ್ತ ರೀತಿಯಲ್ಲಿ ನಿಭಾಯಿಸಿದ್ದಾರೆ. ನಮಗೆ ಅವರ ಪರಿಚಯವಿದ್ದು ಹಿರಿಯ ನಾಯಕರಾಗಿದ್ದು ನಮ್ಮ ಬೆಂಬಲ ನೀಡುತ್ತೇವೆ, ಅನುಭವ, ವ್ಯಕ್ತಿತ್ವ, ಎಲ್ಲಾ ನೋಡಿ ಬೆಂಬಲ.
ಟಿಪ್ಪು ಹೆಸರು ಲಂಡನ್, ಫ್ರಾನ್ಸ್, ಸಹಿತ ವಿಶ್ವದಲ್ಲೇ ಇದ್ದು ಇಲ್ಲೂ ಇದೆ. ಒಡೆಯರ್ ಕುಟುಂಬವೂ ನಾಡು, ದೇಶಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ. ಅವರ ಹೆಸರು ರೈಲಿನ ಹಳೆ ಡಬ್ಬಕ್ಕೆ ಪೇಂಟ್ ಹೊಡೆದು ಇಡುವುದಲ್ಲ, ಹೊಸ ರೈಲು ತಂದು ಹೆಸರು ಹಾಕಿದರೆ ಒಡೆಯರ್ ಕುಟುಂಬಕ್ಕೆ ಗೌರವ ತರುತ್ತದೆ. ನಿಮ್ಮ ರಾಜಕೀಯಕ್ಕಾಗಿ ಒಡೆಯರ್ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸಬೇಡಿ. ಹೊಸ ರೈಲು ತರುವ ಯೋಗ್ಯತೆ ಇಲ್ಲ. ಒಡೆಯರ್ ಕುಟುಂಬ ನಾಡಿನ ಗೌರವದ ಸಂಕೇತ.
ಕಾಂಗ್ರೆಸ್ ಒಡೆಯರ್ ಕುಟುಂಬದ ಸದಸ್ಯರೋರ್ವರನ್ನು ಸಂಸದ ಮಾಡಿದೆ.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಮುಖಂಡರಾದ ಉಸ್ಮಾನ್ ಕಲ್ಲಾಪು, ಝಕರಿಯಾ ಮಲಾರ್,
ಕಳ್ಳಿಗೆ ತಾರಾನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.