ಮಂಗಳೂರು: ಸುರತ್ಕಲ್ ಟೋಲ್ ಗೇಟ್ ಅಕ್ರಮ ಎನ್ನುವುದನ್ನು ರಾಜ್ಯದ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದಾರೆ ಸಂಸತ್ತಿನಲ್ಲಿಯೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಸಂಸತ್ತು ವಿಧಾನ ಸಭೆಯಲ್ಲಿ ಯಾವುದೇ ನಿರ್ಣಯ ಆದಲ್ಲಿ ಅದನ್ನು ಅನುಷ್ಠಾನಕ್ಕೆ ತರುವುದು ಸಂಸದರು ಮತ್ತು ಶಾಸಕರ ಕರ್ತವ್ಯ, ಸುರತ್ಕಲ್ ಟೋಲ್ ಗೇಟ್ ಅಕ್ರಮ ಎಂದ ಮೇಲೆ ಅದನ್ನು ಮುಂದುವರೆಸುವುದರಲ್ಲಿ ಅರ್ಥವಿಲ್ಲ ಅದಕ್ಕಾಗಿ ಅಧಿಕಾರಿಗಳು ಪ್ರಕ್ರಿಯೆ ನಡೆಸುವುದಕ್ಕಾಗಿಯೋ ಸಮಯ ಕೇಳುವಂತಿಲ್ಲ ಕೂಡಲೇ ಟೋಲ್ ಸಂಗ್ರಹ ಮಾಡುವುದನ್ನು ನಿಲ್ಲಿಸಬೇಕೆಂದು ಮಾಜಿ ಎಂಎಲ್ ಸಿ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಹೇಳಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ಅಕ್ರಮ ಎಂದಿರುವ ಟೋಲ್ ಗೇಟನ್ನು ತೆರವು ಮಾಡುತೇವೆ ಎಂದು ಸಾಮಾಜಿಕ ಕಾರ್ಯಕರ್ತ ಹೋರಾಟ ಮಾಡುತ್ತಿದ್ದಾರೆ ಆದರೆ ಆಡಳಿತ ನಡೆಸುತ್ತಿರುವ ಬಿಜೆಪಿ ಶಾಸಕರು ಸಂಸದರು ಪೊಲೀಸರ ಮೂಲಕ ನೋಟಿಸ್ ಕೊಟ್ಟು ಬಲಾ ಬಲ ಪ್ರಯೋಗಕ್ಕೆ ಮುಂದಾಗಿದ್ದಾರೆ. ಸಾರ್ವಜನಿಕ ವಿಚಾರದಲ್ಲಿ ಜನರು ಹೋರಾಟ ಕೈಗೆತ್ತಿಕೊಂಡಾಗ ಉತ್ತರ ನೀಡುವುದು ಶಾಸಕರು ಮತ್ತು ಸಂಸದರ ಕರ್ತವ್ಯ ಅಲ್ಲವೇ ಸಂಸದರು ಮತ್ತೆ ಮತ್ತೆ ಸಮಯಾವಕಾಶ ಕೇಳುವುದು ಅದರ ನಿಷ್ಕಾಳಜಿ ಮತ್ತು ಅಸಾಮರ್ಥ್ಯ ವನ್ನು ತೋರಿಸುತ್ತದೆ ಎಂದು ಹೇಳಿದರು
ವಿಪಕ್ಷದವರು ಪ್ರಶ್ನೆ ಮಾಡಿದರೆ ಐಟಿ ,ಇಡಿ ಮೂಲಕ ರೈಟ್ ಮಾಡಿಸ್ತೀರಿ ಸಾಮಾಜಿಕಾರ್ಯಕರ್ತರ ಮೇಲೆ ಪೊಲೀಸ್ ನೋಟಿಸ್ ಕೊಟ್ಟು ಬೆದರಿಸುತ್ತೀರಿ ಒಬ್ಬ ಮಹಿಳೆಯ ಮನೆಗೆ ನಡುರಾತ್ರಿಯಲ್ಲಿ ನೋಟಿಸ್ ಕೊಡುತ್ತಿರಲ್ಲ ಇದು ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ.
ಮಾನವ ಹಕ್ಕುಗಳ ಉಲ್ಲಂಘನೆ ಪ್ರತಿಭಾ ಕುಳಾಯಿ ಮನೆಗೆ ನುಗ್ಗಿದ ಪೊಲೀಸರನ್ನು ಕೂಡಲೇ ಸಸ್ಪೆಂಡ್ ಮಾಡಬೇಕು ಹ್ಯೂಮನ್ ರೈಟ್ಸ್ ಕಮಿಷನ್ ಕೇಸ್ ದಾಖಲಿಸಬೇಕು ಕಾಂಗ್ರೆಸ್ ಕಡೆಯಿಂದ ಪೊಲೀಸರ ಕ್ರಮದ ವಿರುದ್ಧ ಕೇಸು ದಾಖಲು ಮಾಡುತ್ತೇವೆ ಎಂದರು.
ಸುರತ್ಕಲ್ ಟೋಲ್ ನಲ್ಲಿ ದಿನಕ್ಕೆ ಹನ್ನೆರಡರಿಂದ ಹದಿನಾರು ಲಕ್ಷ ಕಲೆಕ್ಷನ್ ಆಗುತ್ತದೆ 8ವರ್ಷದಲ್ಲಿ 400 ಕೋಟಿ ದುಡ್ಡು ಹೊಡೆದಿದ್ದಾರೆ ಇದರಲ್ಲಿ ಯಾರೆಲ್ಲ ಪಾಲು ಪಡೆದಿದ್ದಾರೆ ಎಂದು ಸಾರ್ವಜನಿಕರಿಗೆ ಲೆಕ್ಕಕೊಡಬೇಕು, ಅಕ್ರಮ ಟೋಲ್ ಗೇಟ್ ಎಂದ ಮೇಲೆ ಈಗ ನಡೆದಿರುವುದು ಶುದ್ಧ ಅಕ್ರಮ ಬಡವರನ್ನು ಕಾರ್ಮಿಕರನ್ನು ಸುಲಿಗೆ ಮಾಡುತ್ತಿದ್ದಾರೆ.
ಅಕ್ರಮವಾಗಿ ದುಡ್ಡು ಸಂಗ್ರಹ ಮಾಡಬೇಕಾದ ಸ್ಥಿತಿ ರಾಜ್ಯಕ್ಕೆ ಬಂದಿಲ್ಲ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಇದೆ .ವಿಧಾನಸಭೆಯಲ್ಲಿ ಅಕ್ರಮ ಎಂದು ಒಪ್ಪಿದ ಬಳಿಕ ಅದನ್ನು ಯಾಕೆ ಮುಂದುವರೆಸುತ್ತಿದ್ದಾರೆ ನಾಳೆ ನೇರ ಕಾರ್ಯಾಚರಣೆ ನಡೆಯಲಿದ್ದು ಕರಾವಳಿಯ ಜನರು ಬಂಡೆದ್ದು ಟೋಲ್ ಗೇಟ್ ತೆರವು ಮಾಡಲಿದ್ದಾರೆ.
ಶಾಸಕರು ಮತ್ತು ಸಂಸದರಿಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಎಂಬುದಿದ್ದರೆ ಪ್ರತಿಭಟನಾ ಸ್ಥಳಕ್ಕೆ ಬಂದು ಟೋಲ್ ಗೇಟ್ ಬಂದ್ ಮಾಡಬೇಕು ಸಂತ ಸಂಸತ್ತಿನಲ್ಲಿ ನಿರ್ಣಯ ಅನುಷ್ಠಾನಕ್ಕೆ ತರಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಬೇಕು ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಟೋಲ್ ಸಂಗ್ರಹ ಬಂದ್ ಮಾಡುವ ಬಗ್ಗೆ ಘೋಷಣೆ ಮಾಡಬೇಕು ಅನಂತರ ನಿಮ್ಮ ಪ್ರತಿಕ್ರಿಯೆ ಏನಿದ್ದರೂ ಮಾಡಿಕೊಳ್ಳಿ ಮೊದಲು ಟೋಲ್ ಗೇಟ್ ಕಲೆಕ್ಷನ್ ನಿಲ್ಲಿಸಿ ಇಲ್ಲದೇ ಇದ್ದರೆ ಇದರಿಂದಾಗುವ ಪರಿಣಾಮ ಎದುರಿಸಬೇಕು ಎಂದು ಐವನ್ ಡಿಸೋಜ ಹೇಳಿದರು.