News Kannada
Tuesday, November 29 2022

ಮಂಗಳೂರು

ಬೆಳ್ತಂಗಡಿ: ಮಿನಿ ವಿಧಾನಸೌಧದ ಎದುರು ರೈತರ ಧರಣಿ ಸತ್ಯಾಗ್ರಹ - 1 min read

Photo Credit : By Author

ಬೆಳ್ತಂಗಡಿ: ಕಣಿಯೂರು ಗ್ರಾಮದ ನಾರಾಯಣ ರಾವ್ ಕೊಲ್ಲಾಜೆ ಹಾಗೂ ಇತರರ ಕುಮ್ಕಿ ಜಮೀನಿನಲ್ಲಿ ತಹಶೀಲ್ದಾರರು ನಡೆಸಿದ ಅಳತೆಯ ಹಾಗೂ ಮೇಜಣಿಯ ಯಥಾವತ್ ವರದಿಯನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೂತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಅವರು ಅಧಿಕಾರಿಗಳ ನೆರವಿನೊಂದಿಗೆ ರೈತರ ಕುಮ್ಕಿ ಜಮೀನನ್ನು ಅಕ್ರಮವಾಗಿ ರೈತೇತರರಿಗೆ ಹಂಚಿಕೆ ಮಾಡಿದೆ ಈ ಬಗ್ಗೆ ತಹಶೀಲ್ದಾರರು ನಢಸಿರುವ ಮೇಜಣಿಯ ಯಥವತ್ ಪ್ರತಿಯನ್ನು ಕೇಳಿದರೆ ಅದನ್ನು ನೀಡಲು ತಾಲೂಕು ಆಡಳಿತ ಮುಂದಾಗುತ್ತಿಲ್ಲ ತಕ್ಷಣವೆ ಈ ಬಗ್ಗೆ ಮಾಹಿತಿ ನೀಡಬೇಕು ತಪ್ಪು ವರದಿಗಳನ್ನು ನೀಡಿ ಇನ್ನಷ್ಟು ಅಕ್ರಮಗಳಿಗೆ ಕಾರಣವಾಗುವ ಅವಕಾಶವಿದೆ ಎಂದರು.

ಕೃಷಿಕರ ಕುಮ್ಕಿ ಜಮೀನನ್ನು ಯಾವುದೇ ಕಾರಣಕ್ಕೂ ಇತರರಿಗೆ ಹಂಚಲು ಅವಕಾಶ ನೀಡುವುದಿಲ್ಲ ಈಬಗ್ಗೆ ಮಾಡಿರುವ ಆದೇಶಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರುಗಳಾದ ಓಸ್ವಾಲ್ಡ್ ಫೆರ್ನಾಂಡಿಸ್, ಆದಿತ್ಯ ನಾರಾಯಣ್, ಸುರೇಂದ್ರ, ದಲಿತ ಮುಖಂಡ ಶೇಖರ ಲಾಯಿಲ ಹಾಗೂ ಇತರರು ಇದ್ದರು.

See also  ಬೆಳ್ತಂಗಡಿ: ನಾಟಿ ವೈದ್ಯೆ ಪಾರ್ವತಮ್ಮ ಹೃದಯಾಘಾತದಿಂದ ನಿಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು