News Kannada
Wednesday, November 30 2022

ಮಂಗಳೂರು

ಬಂಟ್ವಾಳ: ಕುಲಾಲ ಸೇವಾದಳದಿಂದ ಚೈತನ್ಯ ಬದುಕಿಗೊಂದು ಬೆಳಕು ನಿರಂತರ ಕಾರ್ಯಾಗಾರ - 1 min read

Mangaluru: Derebail Sankesh area CITU welcome committee formed
Photo Credit : By Author

ಬಂಟ್ವಾಳ: ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಪೊಸಳ್ಳಿ ಇದರ ಆಶ್ರಯದಲ್ಲಿ ಕುಲಾಲ ಸೇವಾದಳದ ವತಿಯಿಂದ ಚೈತನ್ಯ ಬದುಕಿಗೊಂದು ಬೆಳಕು ಕಾರ್ಯಾಗಾರಕ್ಕೆ ಚಾಲನೆ ಅಕ್ಟೋಬರ್ ೨೩ರಂದು ಬೆಳಿಗ್ಗೆ ೯ಕ್ಕೆ ಕುಲಾಲ ಸಮುದಾಯ ಭವನದಲ್ಲಿ ನಡೆಯಲಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ನಾರಾಯಣ ಸಿ.ಪೆರ್ನೆ ವಹಿಸಲಿದ್ದಾರೆ. ಕಾರ್ಯಾಗಾರಕ್ಕೆ ಚಾಲನೆಯನ್ನು ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕ ಚೆನ್ನಕೇಶವ ಮತ್ತು ಡ್ಯಾನ್ಸ್ ಕೋರಿಯೋಗ್ರಾಫರ್ ಮಹೇಶ್ ಕುಲಾಲ್ ಕಡೇಶಿವಾಲಯ ಭಾಗವಹಿಸಲಿದ್ದಾರೆ.

ಕಾರ್ಯಾಗಾರದಲ್ಲಿ ಚಿತ್ರಕಲೆ ತರಬೇತಿ, ನಾಯಕತ್ವ ತರಬೇತಿ, ಕಾರ್ಯಕ್ರಮ ನಿರ್ವಹಣೆ, ಜಾನಪದ ಫಿಲ್ಮೀ ಡ್ಯಾನ್ಸ್, ರಂಗ ತರಬೇತಿ, ತುಳು ಲಿಪಿ ಶಿಕ್ಷಣ, ಯಕ್ಷ ನಾಟ್ಯ ತರಗತಿ, ಚೆಸ್, ಕೇರಮ್ ತರಬೇತಿ, ಸಂಗೀತ ತರಬೇತಿ, ಯೋಗ ತರಬೇತಿಯು ಸ್ವಜಾತಿ ಬಾಂಧವರಿಗಾಗಿ ಪ್ರತೀ ಆದಿತ್ಯವಾರ ಸಂಜೆ ಗಂಟೆ ೩.೩೦ರಿಂದ ೫.೦೦ರವರೆಗೆ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಲಿರುವುದು ಎಂದು ಪ್ರಕಟಣೆಯಲ್ಲಿ ದಳಪತಿ ಯಾದವ ಅಗ್ರಬೈಲು ಮತ್ತು ಕಾರ್ಯದರ್ಶಿ ಗಣೇಶ್ ಕುಲಾಲ್ ಬೆದ್ರಗುಡ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

See also  ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು