News Kannada
Tuesday, December 06 2022

ಮಂಗಳೂರು

ಮಂಗಳೂರು: ಅಕ್ಷರ ಸಂತರ ಶಿಕ್ಷಣ ಪ್ರೀತಿ ಹೋಲಿಕೆಗೆ ನಿಲುಕದ್ದು- ಡಾ.ಕುಮಾರ್

Mangaluru: Akshara Saint's love for education is incomparable: Dr. Kumar
Photo Credit : News Kannada

ಮಂಗಳೂರು,ಅ.20: ಅಕ್ಷರ ಸಂತ ಹರೇಕಳ ಹಾಜಬ್ಬ ಅವರ ಶೈಕ್ಷಣಿಕ ಪ್ರೀತಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಕೊಡುಗೆ ಯಾವುದೇ ರೀತಿಯ ಹೋಲಿಕೆಗೆ ನಿಲುಕದ್ದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕುಮಾರ್ ಅವರು ಅಭಿಪ್ರಾಯಪಟ್ಟರು.

ಅವರು ನಗರದ ಜಿಲ್ಲಾ ಪಂಚಾಯತ್‍ನಲ್ಲಿರುವ ಮಿನಿ ಸಭಾಂಗಣದಲ್ಲಿ ಅ.20ರ ಗುರುವಾರ ಹರೆಕಳ ಹಾಜಬ್ಬ ಅವರಿಗೆ ಬೆಂಗಳೂರಿನ ಆರ್.ವಿ. ಶಿಕ್ಷಣ ಸಂಸ್ಥೆ ವತಿಯಿಂದ ನೀಡಲಾದ 5 ಲಕ್ಷ ರೂ.ಗಳ ಚೆಕ್ ವಿತರಿಸಿ ಮಾತನಾಡಿದರು.

ಹರೆಕಳ ಹಾಜಬ್ಬರ ವಿನಂತಿಯಂತೆ ಆರ್.ವಿ. ಶಿಕ್ಷಣ ಸಂಸ್ಥೆಯವರು ಹಾಜಬ್ಬ ಅವರ ಕನಸಿನ ಪಿ.ಯು.ಸಿ ಕಾಲೇಜಿನ ಕಟ್ಟಡ ನಿರ್ಮಾಣಕ್ಕಾಗಿ 5 ಲಕ್ಷ ರೂ.ಗಳ ದೇಣಿಗೆಯನ್ನು ನೀಡಿದ್ದಾರೆ, ಇದು ನಿಜಕ್ಕೂ ಕನಸಿಗೆ ನೀರೆರೆಯುವ ಕೆಲಸವಾಗಿದೆ ಎಂದು ಶ್ಲಾಘಿಸಿದರು.

ಪದ್ಮಶ್ರೀ ಪುರಸ್ಕತ ಹರೇಕಳ ಹಾಜಬ್ಬ, ಆರ್.ವಿ. ಶಿಕ್ಷಣ ಸಂಸ್ಥೆಯ ಡಾ.ಸಂತೋಷ್, ಫೈನಾನ್ಸ್ ಮ್ಯಾನೇಜರ್ ಶ್ರೀಧರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸುಧಾಕರ, ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್, ಮಂಗಳೂರು ದಕ್ಷಿಣ ಕ್ಷೇತ್ರ ಸಮನ್ವಯಾಧಿಕಾರಿ ಡಾ.ಪ್ರಶಾಂತ್ ಕುಮಾರ್ ಹಾಗೂ ಹರೆಕಳ ಸರ್ಕಾರಿ ಶಾಲೆಯ ಶಿಕ್ಷಕಿಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಅಕ್ಷರ ಸಂತರನ್ನು ಸನ್ಮಾನಿಸಿ, ಗೌರವಿಸಲಾಯಿತು.

See also  ಬೈಕಂಪಾಡಿ ಬಳಿಯ ಮೀನಕಳಿಯದಲ್ಲಿ ರೌಡಿಶೀಟರ್ ಮೇಲೆ ಮಾರಣಾಂತಿಕ ಹಲ್ಲೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು